More

  ಲೋಕಸಭಾ ಚುನಾವಣೆ 2024: ಬೊಮ್ಮಾಯಿ ಸ್ಪರ್ಧೆ ಫಿಕ್ಸಾ? ಯಾರಿಗೆ ‘ಕೈ’ ಟಿಕೆಟ್​? ಯಾರೆಲ್ಲ ಆಕಾಂಕ್ಷಿಗಳಿದ್ದಾರೆ?

  ಇನ್ನು ಕೆಲವೇ ದಿನಗಳಲ್ಲಿ ಲೋಕಸಮರಕ್ಕೆ ಅಖಾಡ ಸಜ್ಜಾಗಲಿದೆ. ಈಗಾಗಲೇ ರಣಕಹಳೆ ಮೊಳಗಿದ್ದು, ಕಾಂಗ್ರೆಸ್ ಜೊತೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷದ ನಾಯಕರು ಚುನಾವಣಾ ತಯಾರಿಯಲ್ಲಿ ಬ್ಯೂಸಿಯಾಗಿದ್ದಾರೆ. ಆದರೆ ಮೂರು ಪಕ್ಷಗಳಲ್ಲೂ ಕೂಡ ಪ್ರಬಲ ಟಿಕೆಟ್ ಆಕಾಂಕ್ಷಿಗಳಿದ್ದು, ಜಿದ್ದಾ ಜಿದ್ದಿಗೆ ಸಾಕ್ಷಿಯಾಗಿದೆ.

  ಏಲಕ್ಕಿ ನಾಡು, ಕನಕದಾಸರ ತವರೂರಾದ ಹಾವೇರಿಯಲ್ಲಿ ಲೋಕಸಭಾ ಚುನಾವಣಾ ಕಣ ರಂಗೆರಿದ್ದು ಮೂರೂ ಪಕ್ಷಗಳಲ್ಲೂ ಕೂಡ ಪ್ರಬಲ ಆಕಾಂಕ್ಷಿಗಳಿದ್ದಾರೆ. ಹಾವೇರಿ ಲೋಕಸಭಾ ಕ್ಷೇತ್ರದ ಹಿನ್ನಲೆಯನ್ನು ನೋಡುವುದಾದರೆ 2009ರವರೆಗೆ ಧಾರವಾಡ ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿತ್ತು. 2009ರಲ್ಲಿ ಧಾರವಾಡ ದಕ್ಷಿಣ ಕ್ಷೇತ್ರದಿಂದ ಬೇರ್ಪಟ್ಟು ಹಾವೇರಿ ಲೋಕಸಭಾ ಕ್ಷೇತ್ರವಾಗಿ ಮರುನಾಮಕರಣವಾಯ್ತು. ಬಳಿಕ 2009, 2014 ಹಾಗೂ 2019ರಲ್ಲಿ ಮೂರೂ ಬಾರಿ ಶಿವಕುಮಾರ ಉದಾಸಿ ಗೆಲುವು ಸಾಧಿಸಿದ್ದಾರೆ. ಈ ಬಾರಿ ನಾನು ಸ್ಪರ್ಧೆ ಮಾಡಲ್ಲ ಅಂತಾ ಉದಾಸಿಯವರು ಹೇಳಿದ್ದಾರೆ. ಈಗಾಗಲೇ 8 ವಿಧಾನಸಭಾ ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಬಿಜೆಪಿ ಭದ್ರಕೋಟೆಯನ್ನು ಭೇದಿಸುವ ಲೆಕ್ಕಚಾರದಲ್ಲಿದೆ. ಆದರೆ ಬಿಜೆಪಿ ಪಕ್ಷ ಇನ್ನೂ ಅಭ್ಯರ್ಥಿಯ ಹುಡುಕಾಟದಲ್ಲಿದೆ.

  2023ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಪಕ್ಷ
  * ಹಾನಗಲ್: ಶ್ರೀನಿವಾಸ ಮಾನೆ, ಕಾಂಗ್ರೆಸ್
  * ಬ್ಯಾಡಗಿ: ಬಸವರಾಜ ಶಿವಣ್ಣನವರ, ಕಾಂಗ್ರೆಸ್
  * ಹಿರೇಕೆರೂರು: ಯು.ಬಿ.ಬಣಕಾರ, ಕಾಂಗ್ರೆಸ್
  * ರಾಣೆಬೆನ್ನೂರು: ಪ್ರಕಾಶ ಕೋಳಿವಾಡ, ಕಾಂಗ್ರೆಸ್
  * ಹಾವೇರಿ: ರುದ್ರಪ್ಪ ಲಮಾಣಿ, ಕಾಂಗ್ರೆಸ್
  * ರೋಣ: ಜಿ.ಎಸ್.ಪಾಟೀಲ್, ಕಾಂಗ್ರೆಸ್
  * ಗದಗ: ಎಚ್.ಕೆ.ಪಾಟೀಲ್, ಕಾಂಗ್ರೆಸ್
  * ಶಿರಹಟ್ಟಿ: ಚಂದ್ರು ಲಮಾಣಿ, ಬಿಜೆಪಿ

  2023ರ ಚುನಾವಣೆಯಲ್ಲಿ ಪಕ್ಷಗಳಿಗೆ ಶೇಕಡಾವಾರು ಮತ
  ಬಿಜೆಪಿ: 53.97
  ಕಾಂಗ್ರೆಸ್ : 42.85

  ಒಟ್ಟು ಮತದಾರರ ಸಂಖ್ಯೆ
  * ಮಹಿಳೆಯರು: 8,72,878
  * ಪುರುಷರು : 8,91,848
  * ಒಟ್ಟು : 17,64,726

  ಜಾತಿವಾರು ಜನಸಂಖ್ಯೆ
  * ಲಿಂಗಾಯತರು : 55,0000
  * ಕುರುಬರು : 25,0000
  * ಪರಿಶಿಷ್ಠ ಜಾತಿ: 20,0000

  * ಪರಿಶಿಷ್ಠ ಪಂಗಡ : 12,5000
  * ಬ್ರಾಹ್ಮಣ : 45,000
  * ಮುಸ್ಲಿಂ : 25,0000
  * ಗಂಗಾಮತ : 50,000
  * ಮರಾಠ : 40,000
  * ವಿಶ್ವಕರ್ಮ : 23,000
  * ಉಪ್ಪಾರ: 20,000
  * ಜೈನ್: 20,000

  ಕಳೆದ ನಾಲ್ಕು ಲೋಕಸಭಾ ಚುನಾವಣೆಗಳ ಅಂಕಿ ಅಂಶ
  ವರ್ಷ      ಅಭ್ಯರ್ಥಿ             ಪಕ್ಷ     ಅಂತರ      ಸೋಲು
  2004  ಮಂಜುನಾಥ ಕುನ್ನೂರ ಬಿಜೆಪಿ  145112   ಸನದಿ-ಕಾಂಗ್ರೆಸ್
  2009  ಶಿವಕುಮಾರ ಉದಾಸಿ ಬಿಜೆಪಿ  87920    ಸಲೀಂ ಅಹ್ಮದ್-INC
  2014  ಶಿವಕುಮಾರ ಉದಾಸಿ ಬಿಜೆಪಿ  87571    ಸಲೀಂ ಅಹ್ಮದ್-IN

  C
  2019  ಶಿವಕುಮಾರ ಉದಾಸಿ ಬಿಜೆಪಿ  140882  ಡಿ.ಆರ್.ಪಾಟೀಲ್-INC

  ಸತತ ಮೂರು ಸಲ ಗೆದ್ದಿದ್ದ ಸಂಸದ ಶಿವಕುಮಾರ ಉದಾಸಿ ಚು

  ನಾವಣೆಗೆ ನಿಲ್ಲಲ್ಲ ಎಂದಿರುವುದು ಬಿಜೆಪಿಗೆ ಟಿಕೆಟ್ ಹಂಚಿಕೆ ಕಗ್ಗಂಟಾಗಿದೆ. ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಪುತ್ರ ಕಾಂತೇಶ ಟಿಕೆಟ್‌ಗಾಗಿ ಭಾರಿ ಲಾಭಿ ನಡೆಸಿದ್ದಾರೆ. ಆದರೆ, ಬಿಜೆಪಿಯಲ್ಲಿ ಕೆಲವರಿಂದ ವಿರೋಧ ವ್ಯಕ್ತವಾಗಿದೆ. 8 ಕ್ಷೇತ್ರದಲ್ಲಿ ಒಂದು ಕಡೆ ಮಾತ್ರ ಶಿರಹಟ್ಟಿಯಲ್ಲಿ ಬಿಜೆಪಿ ಶಾಸಕರಿದ್ದಾರೆ. ಬಿ.ಸಿ.ಪಾಟೀಲ ಮತ್ತು ಈಶ್ವರಪ್ಪ ನಡುವೆ ಬಹಿರಂಗವಾಗಿ ಅಸಮಾಧಾನ ವ್ಯಕ್ತವಾಗಿದೆ. ಕುರುಬ ವರ್ಸಸ್ ಲಿಂಗಾಯತರ ನಡುವೆ ಪೈಟ್ ಆಗುವ ಸಾಧ್ಯತೆ ಇದೆ. ಸತತ ನಾಲ್ಕು ಸಲ ಗೆಲುವು ಕಂಡಿರುವ ಬಿಜೆಪಿಗೆ ಪ್ರಧಾನಿ ಮೋದಿಯವರ ಅಲೆ ಪ್ಲಸ್ ಪಾಯಿಂಟ್ ಆಗಲಿದೆ. ಕೈ ಪಾಳಯದಲ್ಲಿ ಪ್ರಬಲ ಅಭ್ಯರ್ಥಿ ಇಲ್ಲದೇ ಇರುವುದು ತಲೆನೋವಾಗಿ ಪರಿಣಮಿಸಿದೆ.

  ಆಕಾಂಕ್ಷಿಗಳು ಕ್ಷೇತ್ರದಲ್ಲಿ ಸುತ್ತಾಟ
  ಚುನಾವಣೆಗೆ ಐದು ತಿಂಗಳು ಬಾಕಿ ಇರುವಾಗಲೇ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಪೈಪೋಟಿ ಶುರುವಾಗಿದೆ. ನಾ ಮುಂದು ತಾ ಮುಂದು ಎಂಬಂತೆ ವಿವಿಧ ರೀತಿಯಲ್ಲಿ ಮುಖಂಡರ, ಮತದಾರರ ಮನವೊಲಿಕೆಗೆ ಎರಡೂ ಪಕ್ಷದ ಅಭ್ಯರ್ಥಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಉದ್ಯೋಗ ಮೇಳಗಳನ್ನು, ದೇಶಪ್ರೇಮಿಗಳ ಸ್ಮರಣಾ ಕಾರ್ಯಕ್ರಮಗಳು ಸೇರಿದಂತೆ ನಾನಾ ಬಗೆಯ ಸಭೆ ಸಮಾರಂಭಗಳನ್ನು ಮಾಡುವ ಮೂಲಕ ಟಿಕೆಟ್ ಲಾಭಿ ಶುರುವಾಗಿದೆ.

  ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ
  * ಬಿ.ಸಿ.ಪಾಟೀಲ
  * ಕಾಂತೇಶ ಈಶ್ವರಪ್ಪ
  * ಡಾ.ಮಹೇಶ ನಾಲವಾಡ
  * ಸಂದೀಪ ಪಾಟೀಲ
  * ಕಳಕಪ್ಪ ಬಂಡಿ
  * ರಾಜಶೇಖರಗೌಡ ಕಟ್ಟೆಗೌಡರ
  * ಶರಣಬಸವ ಅಂಗಡಿ
  * ಮಂಜುನಾಥ ಮಡಿವಾಳರ
  * ಡಾ.ಫಕೀರಗೌಡ ಪಾಟೀಲ
  * ಸಿದ್ದರಾಜ ಕಲಕೋಟಿ
  * ಅನಿಲ ಮೆಣಸಿನಕಾಯಿ
  * ಶಿವರಾಜ ಸಜ್ಜನರ
  * ಡಾ.ಶೇಖರ ಸಜ್ಜನರ

  ಕಾಂಗ್ರೆಸ್ ಆಕಾಂಕ್ಷಿಗಳ ಪಟ್ಟಿ
  * ಮಂಜುನಾಥ ಕುನ್ನೂರು
  * ಸಲೀಂ ಅಹ್ಮದ್
  * ಆನಂದ ಗಡ್ಡದೇವರಮಠ
  * ಡಾ.ಆರ್.ಎಂ.ಕುಬೇರಪ್ಪ
  * ಎಚ್.ಕೆ.ಪಾಟೀಲ
  * ಬಿ.ಆರ್.ಪಾಟೀಲ
  * ಸೋಮಣ್ಣ ಬೇವಿನಮರದ
  * ಎಸ್.ಆರ್.ಪಾಟೀಲ
  * ಸಂಜೀವ ನೀರಲಗಿ

  ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಸಿದ್ಧತೆ
  ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ರಾಜ್ಯ ಹಾಗೂ ಕೇಂದ್ರ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದಾರೆ. ಈಗಾಗಲೇ ಹಲವು ಸುತ್ತಿನ ಮಾತುಕತೆಗಳನ್ನು ಮಾಡಿದ್ದು, ಟಿಕೆಟ್ ಪಡೆದುಕೊಳ್ಳುವ ನೀರಿಕ್ಷೆಯಲ್ಲಿ ಅಭ್ಯರ್ಥಿಗಳು ತುದಿಗಾಲಲ್ಲಿ ನಿಂತಿದ್ದಾರೆ.ಜಿಲ್ಲೆಯಲ್ಲಿ ಲಿಂಗಾಯತ, ಮುಸ್ಲಿಂ ಹಾಗೂ ದಲಿತ ಮತಗಳು ಹೆಚ್ಚಿದ್ದಾರೆ. ಹೀಗಾಗಿ, ಆಯಾ ಸಮುದಾಯ ಪ್ರಬಲವಾದ ಲೀಡರ್‌ಗಳನ್ನು ಭೇಟಿ ಮಾಡಿ ವಿಶ್ವಾಸಕ್ಕೆ ಪಡೆದುಕೊಳ್ಳುತ್ತಿದ್ದಾರೆ. ಮದುವೆ, ಸಭೆ ಹಾಗೂ ಊರಿನ ಅನೇಕ ಕಾರ್ಯಕ್ರಮಗಳಿಗೆ, ಜಾತ್ರಾ ಮಹೋತ್ಸವಕ್ಕೆ ದೇಣಿಗೆ ನೀಡುತ್ತಿದ್ದಾರೆ.

  ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಿದ್ಧತೆ
  ನಿರಂತರವಾಗಿ ಮೂರು ಬಾರಿ ಸೋತು ಸೋಲು ಕಂಡಿದೆ. ಆದರೆ ಈ ಬಾರಿ ಅಧಿಕಾರದಲ್ಲಿರುವ ಕಾರಣ ಗೆಲ್ಲುವ ವಿಶ್ವಾಸದಲ್ಲಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 8 ಕ್ಷೇತ್ರದಲ್ಲಿ 7 ಕ್ಷೇತ್ರದಲ್ಲಿ ಭರ್ಜರಿ ಜಯ ಸಾಧಿಸಿರುವ ಕಾಂಗ್ರೆಸ್ ಈ ಬಾರಿ ಗೆಲ್ಲುವ ವಿಶ್ವಾಸದಲ್ಲಿದೆ. ಗ್ಯಾರಂಟಿ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯದಲ್ಲಿ ಕೈ ಟಿಕೆಟ್ ಆಕಾಂಕ್ಷಿಗಳು ಬ್ಯೂಸಿಯಾಗಿದ್ದಾರೆ.

  ಬಿಜೆಪಿ ಪಕ್ಷದ ಆಕಾಂಕ್ಷಿಗಳು
  1. ಬಿ.ಸಿ.ಪಾಟೀಲ್: ಹಿರೆಕೇರೂರು ವಿಧಾನಸಭಾ ಕ್ಷೇತ್ರದಿಂದ ಒಟ್ಟು 6 ಭಾರಿ ಸ್ಪರ್ಧೆ ಮಾಡಿರುವ ಪಾಟೀಲ್​, 4 ಭಾರಿ ಗೆಲುವು, 2 ಬಾರಿ ಸೋಲು ಕಂಡಿದ್ದಾರೆ. 2 ಬಾರಿ ಕಾಂಗ್ರೆಸ್‌ನಿಂದ, ಒಂದು ಬಾರಿ ಜೆಡಿಎಸ್ ಹಾಗೂ ಒಂದು ಬಾರಿ ಬಿಜೆಪಿ ಪಕ್ಷದಿಂದ ಗೆಲವು ಸಾಧಿಸಿದ್ದಾರೆ. ಲಿಂಗಾಯತ ಸಮುದಾಯದ ಲೀಡರ್ ಆಗಿದ್ದು, ಕೃಷಿ ಸಚಿವರಾಗಿ 2.5 ವರ್ಷ ಕಾರ್ಯ ನಿರ್ಹಸಿದ್ದಾರೆ. ಗದಗ, ಚಿತ್ರದುರ್ಗ ಜಿಲ್ಲಾ ಉಸ್ತುವಾರಿಯಾಗಿ ಕೆಲಸ ಮಾಡಿದ್ದು, ಪ್ರಭಾವಿ ನಾಯಕರಾಗಿ ಸುಮಾರು 25 ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

  2. ಕಾಂತೇಶ ಈಶ್ವರಪ್ಪ: ಮಾಜಿ ಸಚಿವ ಈಶ್ವರಪ್ಪ ಪುತ್ರ ಕಾಂತೇಶ ಇನ್ನೂ ಡಿಗ್ರಿಯಲ್ಲಿ ಇರುವಾಗಲೇ ಕುವೆಂಪು ವಿಶ್ವವಿದ್ಯಾಲಯದ ಸೆನೆಟ್ ಮೆಂಬರ್ ಆಗುವ ಅವಕಾಶ ಸಿಕ್ಕಿದೆ. ಈ ಮೂಲಕ ವಿದ್ಯಾರ್ಥಿ ಜೀವನದಲ್ಲೇ ರಾಜಕೀಯ ಪ್ರವೇಶಕ್ಕೆ ಅಡಿಪಾಯ ದೊರಕಿದೆ. 2016ರಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಆಯ್ಕೆಯಾಗಿದ್ದಲ್ಲದೇ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಶೈಕ್ಷಣಿಕ, ಧಾರ್ಮಿಕ, ಕ್ರೀಡಾ ಕ್ಷೇತ್ರಗಳಲ್ಲೂ ತಮ್ಮ ಛಾಪು ಮೂಡಿಸಿರುವ ಕಾಂತೇಶ ಅವರು, ಅಖಿಲ ಭಾರತೀಯ ಶಬರಿಮಲೆ ಅಯ್ಯಪ್ಪಸ್ವಾಮಿ ಸೇವಾ ಸಮಾಜ ಅನ್ನದಾಸೋಹ ಸಮಿತಿ ಸದಸ್ಯರಾಗಿ, ಮಾರಿಕಾಂಬಾ ಫೈನಾನ್ಸ್ ಸಿಇಒ ಆಗಿ, ನಂದನ ವಿದ್ಯಾಸಂಸ್ಥೆ ಕಾರ್ಯದರ್ಶಿಯಾಗಿ, ಫೇಸ್ ವಿದ್ಯಾಸಂಸ್ಥೆಯ ಕಾರ್ಯದರ್ಶಿಯಾಗಿ ಕ್ಷೇತ್ರದಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನ ಹೊಂದಿದ್ದಾರೆ.

  3. ಬಸವರಾಜ ಬೊಮ್ಮಾಯಿ: ಸತತ 4 ಬಾರಿ ಶಿಗ್ಗಾಂವಿ ಸವಣೂರ ಕ್ಷೇತ್ರದಿಂದ ಗೆಲವು ಸಾಧಿಸಿದ್ದಾರೆ. 2 ಬಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಸಣ್ಣ ನೀರಾವರಿ ಹಾಗೂ ಗೃಹ ಸಚಿವರಾಗಿ ಜವಬ್ದಾರಿ ನಿಭಾಯಿಸಿದ್ದಾರೆ. 2021ರ ಜುಲೈನಲ್ಲಿ ರಾಜ್ಯದ 23ನೇ ಸಿಎಂ ಆಗಿ ಸುಮಾರು 1 ವರ್ಷ 8 ತಿಂಗಳು ಕೆಲಸ ಮಾಡಿದ್ದಾರೆ. ಹೈಕಮಾಂಡ್ ಜೊತೆ ಉತ್ತಮ ಬಾಂಧವ್ಯವಿರುವ ಕಾರಣ ಟಿಕೆಟ್ ಬಹುತೇಕ ಖಚಿತವಾಗಿದೆ. ಒಂದು ವೇಳೆ ಲೋಕಸಭಾ ಚುನಾವಣೆಯಲ್ಲಿ ಗೆದ್ದರೆ, ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಕ್ಕೆ ಮಗ ಭರತ್ ಬೊಮ್ಮಾಯಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ.

  4. ಅನಿಲ್ ಮೆಣಸಿನಕಾಯಿ: ಗದಗ ಕ್ಷೇತ್ರದಿಂದ 2013ರಲ್ಲಿ ಬಿಎಸ್‌ಆರ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲುಂಡರು. 2018ರಲ್ಲಿ ಬಿಜೆಪಿಯಿಂದ ಗದಗ ಕ್ಷೇತ್ರದಿಂದ ಸ್ಫರ್ಧಿಸಿ 1800 ಮತಗಳ ಅಂತರದಿಂದ ಸೋಲು ಕಂಡರು. 2023ರಲ್ಲಿ ಬಿಜೆಪಿಯಿಂದ ಸ್ಫರ್ಧಿಸಿ 15 ಸಾವಿರ ಮತಗಳ ಅಂತರದಿಂದ ಸೋಲುಂಡಿದ್ದಾರೆ.

  5. ಕಳಕಪ್ಪ ಬಂಡಿ: ಗದಗ ಜಿಲ್ಲೆ ರೋಣ ತಾಲೂಕಿನ ಗಜೇಂದ್ರಗಡ ಪಟ್ಟಣ ನಿವಾಸಿಯಾಗಿರುವ ಕಳಕಪ್ಪ ಬಂಡಿ, ಜಗದೀಶ ಶೆಟ್ಟರ್ ಆಪ್ತ ಆಗಿರುವ ಕಾರಣ 2004ರಲ್ಲಿ ಬಿಜೆಪಿಯಿಂದ ಟಿಕೆಟ್ ಪಡೆದು ಶಾಸಕರಾಗಿ ಆಯ್ಕೆಯಾದರು. 2004, 2008 ಹಾಗೂ 2018ರಲ್ಲಿ ರೋಣ ಕ್ಷೇತ್ರದಿಂದ ಬಿಜೆಪಿಯಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾದರು. ಮಾರ್ಚ್ 2012ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 2013 ಹಾಗೂ 2023ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ.

  6. ಶರಣಬಸವ ಅಂಗಡಿ: ಇವರು ಆರ್‌ಎಸ್‌ಎಸ್, ಎಬಿವಿಪಿ ಹಿನ್ನೆಲೆ ಇರುವ ಪ್ರಭಾವಿ ಮುಖಂಡರು. ವೃತ್ತಿಯಲ್ಲಿ ವಕೀಲರಾಗಿರುವ ಇವರು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಸೇರಿದಂತೆ ಅನೇಕ ಹೈಕಮಾಂಡ್ ಲೀಡರ್ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಕಳೆದ ಬಿಜೆಪಿ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ನಿರ್ದೇಶಕರಾಗಿ ಕೆಲಸ ಮಾಡಿದರು.

  ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳು
  1. ಸಲೀಂ ಅಹ್ಮದ್: ಹಾವೇರಿಯಿಂದ ಎರಡು ಭಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಸೋಲುಂಡಿದ್ದಾರೆ. 2 ವರ್ಷದ ಹಿಂದೆ ಎಂಎಲ್​ಸಿಯಾಗಿ ಆಯ್ಕೆಯಾದರು. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಪಕ್ಷದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಉಪಚುನಾವಣೆ ಹಾಗೂ ಸಾರ್ವತ್ರಿಕ ಚುನಾವಣೆಯಲ್ಲಿ ಹಾವೇರಿ, ಧಾರವಾಡ, ಹುಬ್ಬಳ್ಳಿ ಹಾಗೂ ಗದಗ ಭಾಗದಲ್ಲಿ ಹಿಡಿತ ಸಾಧಿಸಿ, ಪಕ್ಷದ ಅಭ್ಯರ್ಥಿಗಳ ಗೆಲವಿಗೆ ಪ್ರಮುಖ ಪಾತ್ರ ವಹಿಸಿದ್ದಾರೆ. ಎಐಸಿಸಿ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.

  2. ಆನಂದ ಗಡ್ಡದೇವರಮಠ: ಗದಗ ಜಿಲ್ಲೆಯಲ್ಲಿ ಕಾಂಗ್ರೆಸ್ ಹಿನ್ನಲೆಯ ಕುಂಟುಂಬ, ಸ್ವಂತ ವರ್ಚಸ್ಸು ಹಾಗೂ ಪ್ರಭಾವಿ ಲೀಡರ್ ಆಗಿದ್ದಾರೆ. ಜಿಲ್ಲೆಯ ಹಲವು ಸ್ಥಾನಮಾನಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.

  ಹಾವೇರಿ ಕ್ಷೇತ್ರದಲ್ಲಿ ಬಿಜೆಪಿ ಪ್ಲಸ್ ಪಾಯಿಂಟ್
  * 20 ವರ್ಷದಿಂದ ಕ್ಷೇತ್ರದಲ್ಲಿ ಬಿಗಿ ಹಿಡಿತ
  * ಜಿಲ್ಲೆಯಲ್ಲಿರುವ ಮೋದಿ ವರ್ಚಸ್ಸು
  * ಹಿಂದುತ್ವದ ಅಲೆ, ಪ್ರಬಲ ಸಮುದಾಯಗಳ ಒಗ್ಗಟ್ಟು
  * ರೈಲ್ವೆ ಹಾಗೂ ಹೆದ್ದಾರಿಗಳ ಅಭಿವೃದ್ಧಿ.

  ಹಾವೇರಿ ಕ್ಷೇತ್ರದಲ್ಲಿ ಬಿಜೆಪಿಯ ಮೈನಸ್
  * ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಕುಂಠಿತ
  * ಸಿಎಂ ಹಾಗೂ ಕೃಷಿ ಸಚಿವರಿದ್ದರೂ ಕ್ಷೇತ್ರ ಅಭಿವೃದ್ಧಿಯಾಗಿಲ್ಲ
  * ಐದು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸೋಲು
  * ಸ್ವಪಕ್ಷದಲ್ಲೇ ಹಿರಿ ನಾಯಕರ ಒಳಜಗಳ
  * ಕಾಂಗ್ರೆಸ್ ಪಾರುಪತ್ಯ.

  ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ಲಸ್
  * ಕೆಳ ಮಟ್ಟದಿಂದಲೇ ಪಕ್ಷ ಸಂಘಟನೆ
  * ವಿಧಾನಸಭಾ ಚುನಾವಣೆಯಲ್ಲಿ 5 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು.
  * ಬಿಜೆಪಿಯ ಅಧಿಕಾರವಧಿಯಲ್ಲಿ ಅಭಿವೃದ್ಧಿ ಕುಂಠಿತ
  * ಸ್ವ ಪಕ್ಷಿಯರಲ್ಲಿ ಅಸಮಾಧಾನ ಇದ್ರೂ ಪಕ್ಷ ಸಂಘಟನೆ.

  ಕ್ಷೇತ್ರದಲ್ಲಿ ಕಾಂಗ್ರೆಸ್ ಮೈನಸ್
  * ಕಳೆದ ಮೂರು ಲೋಕಸಭಾ ಚುನಾವಣೆಗಳಲ್ಲಿ ಸೋಲು
  * ಗೆಲ್ಲುವ ಅಭ್ಯರ್ಥಿಯ ಕೊರತೆ
  * ಜನರ ವಿಶ್ವಾಸವನ್ನ ಮತಗಳನ್ನಾಗಿ ಪರಿವರ್ತಿಸುವಲ್ಲಿ ವಿಫಲ
  * ಜಿಲ್ಲೆಯ ಶಾಸಕರಿಗೆ ಉತ್ತಮ ಸ್ಥಾನಮಾನವಿಲ್ಲದೆ ಬೇಸರ

  ಮಧ್ಯರಾತ್ರಿ ಸುಂದರ ಯುವತಿಯರ ಕಳ್ಳಾಟ: ನೆರೆಮನೆಯವರಿಗೆ ಪ್ರಾಣ ಸಂಕಟ, ವಿಡಿಯೋ ವೈರಲ್​

  ಚಹಾ, ಕಾಫಿ, ಹಾಲು ಕುಡಿದ ನಂತ್ರ ನೀರು ಕುಡಿದ್ರೆ ಅನಾರೋಗ್ಯ ಕಟ್ಟಿಟ್ಟಬುತ್ತಿ; ಇರಲಿ ಎಚ್ಚರ…

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts