

ಬೆಂಗಳೂರು: ಕೆಲವರಿಗೆ ಆಹಾರ ಸೇವಿಸುವಾಗ ನೀರು ಕುಡಿಯುವ ಅಭ್ಯಾಸವಿರುತ್ತದೆ. ಇತ್ತೀಚಿನ ಅಧ್ಯಯನವೊಂದರ ಪ್ರಕಾರ, ಕೆಲವು ಆಹಾರ ಸೇವಿಸುವಾಗ ಅಥವಾ ತಿಂದ ನಂತರ ನೀರು ಕುಡಿಯಲೇಬಾರದು ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಇದರಿಂದ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.
1) ಐಸ್ ಕ್ರೀಂ ತಿಂದ ನಂತರವೂ ನೀರು ಕುಡಿಯಬೇಡಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ ಏಕೆಂದರೆ ಗಂಟಲು ನೋವು ಉಂಟಾಗುತ್ತದೆ.
2) ಹುಳಿ ಹಣ್ಣುಗಳು, ಆಮ್ಲಾ, ಕಿತ್ತಳೆ, ನಿಂಬೆ, ಕೆಲವು ಋತುಮಾನದ ಹಣ್ಣುಗಳನ್ನು ತಿಂದ ನಂತರ ನೀರು ಕುಡಿಯಬೇಡಿ. ಇದು ಗಂಟಲು ನೋವು ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡುತ್ತದೆ.
3) ಹಾಲು ಕುಡಿದ ನಂತರ ನೀರು ಕುಡಿದರೆ ಚಯಾಪಚಯ ಕ್ರಿಯೆಗೆ ಹೊಡೆತ ಬೀಳುವ ಸಾಧ್ಯತೆ ಇದೆ. ಇದು ಅಸಿಡಿಟಿ ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ.
4) ಬಿಸಿ ಪಾನೀಯಗಳನ್ನು ಸೇವಿಸಿದ ನಂತರವೂ ನೀರು ಕುಡಿಯಬೇಡಿ. ಚಹಾ, ಕಾಫಿ, ಸೂಪ್ ಇತ್ಯಾದಿಗಳನ್ನು ಸೇವಿಸಿದ ನಂತರ ನೀರು ಕುಡಿದರೆ ಅದು ಜೀರ್ಣಾಂಗ ವ್ಯವಸ್ಥೆ ಮತ್ತು ಹಲ್ಲುಗಳ ಮೇಲೆ ಪರಿಣಾಮ ಬೀರುತ್ತದೆ. ಬಿಸಿ ಪಾನೀಯಗಳನ್ನು ಸೇವಿಸಿದ ನಂತರ 20 ನಿಮಿಷಗಳ ಕಾಲ ನೀರು ಕುಡಿಯಬೇಡಿ.
5) ಸಿಹಿ ತಿಂದ ನಂತರವೂ ನೀರು ಕುಡಿಯಬೇಡಿ. ಈ ರೀತಿ ಕುಡಿಯುವುದರಿಂದ ಶುಗರ್ ಲೆವೆಲ್ ಹೆಚ್ಚಾಗುವುದಲ್ಲದೆ ಹಲ್ಲಿನ ಸಮಸ್ಯೆಗಳು ಕೂಡ ಬರುತ್ತವೆ.