More

    25% ಕುಸಿದ ಟಾಟಾ ಕಂಪನಿ ಷೇರು ಬೆಲೆ: ಈ ಸ್ಟಾಕ್​ ಖರೀದಿಸಬೇಕೆ? ಇನ್ನಷ್ಟು ಕುಸಿತಕ್ಕೆ ಕಾಯಬೇಕೆ?

    ಮುಂಬೈ: ಟಾಟಾ ಸಮೂಹದ ಕಂಪನಿ-ಟಾಟಾ ಟೆಕ್ನಾಲಜೀಸ್ ಷೇರುಗಳಲ್ಲಿ ಮಂದಗತಿಯ ವಾತಾವರಣವಿದೆ. ವಾರದ ಮೊದಲ ವಹಿವಾಟಿನ ದಿನದಂದು ಅಂದರೆ ಸೋಮವಾರದಂದು ವಹಿವಾಟಿನ ಸಮಯದಲ್ಲಿ ಟಾಟಾ ಟೆಕ್ನಾಲಜೀಸ್ ಷೇರುಗಳ ಬೆಲೆ ಶೇ. 5ರಷ್ಟು ಕುಸಿದು 1,032.95 ರೂ. ಮುಟ್ಟಿತು. ವಹಿವಾಟಿನ ಅಂತ್ಯದ ವೇಳೆಗೆ ಷೇರಿನ ಬೆಲೆ 3.77% ಕುಸಿದು 1044.95 ರೂ. ತಲುಪಿತು.

    ಟಾಟಾ ಟೆಕ್ನಾಲಜೀಸ್‌ನ ಷೇರುಗಳ ಬೆಲೆ ನವೆಂಬರ್ 2023ರಲ್ಲಿ ರೂ. 1400 ಇತ್ತು. ಇದು ಈ ಷೇರಿನ ಸಾರ್ವಕಾಲಿಕ ಗರಿಷ್ಠ ಬೆಲೆಯಾಗಿದೆ. ಸದ್ಯ ಈ ಗರಿಷ್ಠ ಬೆಲೆಯಿಂದ ಅಂದಾಜು 25 ಪ್ರತಿಶತದಷ್ಟು ಕುಸಿತವನ್ನು ಈ ಷೇರು ಕಂಡಿದೆ.

    ಟಾಟಾ ಟೆಕ್ನಾಲಜೀಸ್‌ನ ನಿವ್ವಳ ಲಾಭವು ಮಾರ್ಚ್ 31, 2024 ಕ್ಕೆ ಕೊನೆಗೊಳ್ಳುವ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 27.39 ರಷ್ಟು ಕಡಿಮೆಯಾಗಿದೆ. ಕಂಪನಿಯ ಲಾಭ 157.24 ಕೋಟಿ ರೂ. ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿಯು 216 ಕೋಟಿ ರೂಪಾಯಿ ಲಾಭ ಗಳಿಸಿತ್ತು. ಟಾಟಾ ಗ್ರೂಪ್ ಕಂಪನಿಯ ಕಾರ್ಯಾಚರಣೆಗಳಿಂದ ಆದಾಯ 7.22ರಷ್ಟು ಕುಸಿದು 1,301.05 ಕೋಟಿ ರೂ. ಮುಟ್ಟಿದೆ. ಇದರೊಂದಿಗೆ ಟಾಟಾ ಟೆಕ್ನಾಲಜೀಸ್ ಪ್ರತಿ ಷೇರಿಗೆ 10.05 ರೂಪಾಯಿಗಳ ಮಧ್ಯಂತರ ಲಾಭಾಂಶವನ್ನು ಘೋಷಿಸಿದೆ.

    ಷೇರಿನ ಗುರಿ ಬೆಲೆ?:

    ಟಾಟಾ ಟೆಕ್ನಾಲಜೀಸ್ ಕಂಪನಿಯು ಮೆಕ್ಯಾನಿಕಲ್ ಇಂಜಿನಿಯರಿಂಗ್ ಸೇವೆಗಳಿಗೆ ಹೆಚ್ಚು ಮಾನ್ಯತೆ ಹೊಂದಿದೆ. ಎಂಬೆಡೆಡ್ ಸಾಫ್ಟ್‌ವೇರ್‌ನಲ್ಲಿ ಪ್ರಬಲವಾಗುತ್ತಿದೆ ಎಂದು ಬ್ರೋಕರೇಜ್​ ಸಂಸ್ಥೆಯಾದ ಕೋಟಕ್ ಇನ್‌ಸ್ಟಿಟ್ಯೂಶನಲ್ ಇಕ್ವಿಟೀಸ್ ಹೇಳಿದೆ. ಷೇರುಗಳ ಮೇಲೆ ‘ಮಾರಾಟ’ ರೇಟಿಂಗ್ ಅನ್ನು ಈ ಸಂಸ್ಥೆ ಕಾಯ್ದುಕೊಂಡಿದೆ. ಇದರ ಗುರಿ ಬೆಲೆಯನ್ನು 700 ರೂ.ಗೆ ನಿಗದಿಪಡಿಸಿದೆ. ಅಂದರೆ, ಈ ಷೇರಿನ ಬೆಲೆ ಕುಸಿಯಲಿದ್ದು, ಮಾರಾಟ ಮಾಡಿ ಎಂದು ಅದು ಸಲಹೆ ನೀಡಿದೆ.

    ಜಾಗತಿಕ ಬ್ರೋಕರೇಜ್ ಸಂಸ್ಥೆಯಾದ ಬೋಫಾ, ಈ ಷೇರಿನ ಗುರಿ ಬೆಲೆ 1250 ರೂ.ಗೆ ನಿಗದಿಪಡಿಸಿದೆ. ಮತ್ತೊಂದೆಡೆ, ಇನ್ನೊಂದು ಬ್ರೋಕರೇಜ್​ ಸಂಸ್ಥೆ ಜೆಪಿ ಮಾರ್ಗನ್​, ಈ ಷೇರಿನ ಗುರಿ ಬೆಲೆಯನ್ನು 800 ರೂ.ಗೆ ನಿಗದಿಪಡಿಸಿದೆ.

    ಟಾಟಾ ಟೆಕ್ನಾಲಜೀಸ್​ ಕಂಪನಿಯ ಐಪಿಒ ಕಳೆದ ವರ್ಷ ಬಂದಿತ್ತು. ಕಳೆದ ವರ್ಷ ನವೆಂಬರ್ 22, 2023 ರಂದು ಟಾಟಾ ಟೆಕ್ನಾಲಜೀಸ್‌ನ ಐಪಿಒ ತೆರೆಯಲಾಗಿತ್ತು. ಈ ಐಪಿಒ ಪಟ್ಟಿಯು ನವೆಂಬರ್ 30, 2023 ರಂದು BSE, NSE ನಲ್ಲಿ ಆಗಿತ್ತು. ಕಂಪನಿಯು ಪ್ರತಿ ಷೇರಿಗೆ ರೂ. 475 ರಿಂದ ರೂ. 500 ರವರೆಗೆ ಐಪಿಒ ಷೇರಿನ ಬೆಲೆಯನ್ನು ನಿಗದಿಪಡಿಸಿತ್ತು.

    ರಾಹುಲ್​ ಗಾಂಧಿ ಸೋಲಿಸಿದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ: ಯಾವ ಯಾವ ಮ್ಯೂಚುವಲ್​ ಫಂಡ್​ಗಳಲ್ಲಿ ಹೂಡಿಕೆ ಮಾಡಿದ್ದಾರೆ ಗೊತ್ತೆ?

    ಈ ಬ್ಯಾಂಕುಗಳ ಎನ್​ಪಿಎ ಕಡಿತ: ಷೇರು ಬೆಲೆ ದುಪ್ಪಟ್ಟಾಗಲಿದೆ ಎನ್ನುತ್ತಾರೆ ತಜ್ಞರು

    ಪಿಎಸ್​ಯು ಬ್ಯಾಂಕ್​ಗಳ ಷೇರು ಬೆಲೆಯಲ್ಲಿ ಅಪಾರ ಕುಸಿತ: ಮೂಲಸೌಕರ್ಯ ಕಂಪನಿಗಳಿಗೆ ಸಾಲ ನಿಯಮದಲ್ಲಿ ಬದಲಾವಣೆ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts