More

    ಟಿ20 ವಿಶ್ವಕಪ್​ಗೆ ತಂಡದಲ್ಲಿ ಸಿಗದ ಸ್ಥಾನ: ತಾಯಿ ಬಳಿ ರಿಂಕು ಸಿಂಗ್​ ಹೇಳಿದ್ದನ್ನು ಕೇಳಿ ತಂದೆ ಭಾವುಕ

    ನವದೆಹಲಿ: ಜೂನ್​​ 01ರಿಂದ ಯುಎಸ್​ಎ ಹಾಗೂ ವೆಸ್ಟ್​ ಇಂಡೀಸ್​ ಆತಿಥ್ಯದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್​ಗೆ ಟೀಮ್​ ಇಂಡಿಯಾದ ಪ್ರಕಟವಾಗಿದೆ. ತಂಡದಲ್ಲಿ ಯುವ ಆಟಗಾರ ರಿಂಕು ಸಿಂಗ್​ಗೆ ಸ್ಥಾನ ಸಿಗದಿದ್ದಕ್ಕೆ ಅವರ​ ಕುಟುಂಬ ತೀವ್ರ ನಿರಾಸೆಗೆ ಒಳಗಾಗಿದೆ.

    ಮಂಗಳವಾರ (ಏಪ್ರಿಲ್​ 30) 15 ಸದಸ್ಯರ ತಂಡವನ್ನು ಬಿಸಿಸಿಐ ಪ್ರಕಟಿಸಿತು. ಇದರಲ್ಲಿ ರೋಹಿತ್​ ಶರ್ಮ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಉಪನಾಯಕನಾಗಿ ಹಾರ್ದಿಕ್​ ಪಾಂಡ್ಯರನ್ನು ನೇಮಿಸಲಾಗಿದ್ದು, ಸಂಜು ಸ್ಯಾಮ್ಸನ್​ ಹಾಗೂ ರಿಷಭ್​ ಪಂತ್​ ಸಹ ಆಯ್ಕೆ ಮಾಡಲಾಗಿದೆ. ಅಚ್ಚರಿ ಎಂಬಂತೆ ಕೆ.ಎಲ್​. ರಾಹುಲ್, ಇಶಾನ್​ ಕಿಶನ್​ ಹಾಗೂ ಶ್ರೇಯಸ್​ ಅಯ್ಯರ್​ಗೆ ಕೊಕ್​ ಕೊಡಲಾಗಿದೆ.

    ಐಪಿಎಲ್​ನಲ್ಲಿ ಗಮನಾರ್ಹ ಸಾಧನೆ ಮಾಡಿರುವ ರಿಂಕು ಸಿಂಗ್​ಗೆ ಟಿ20 ವಿಶ್ವಕಪ್​ ಆಡುವ ಸಿಗುತ್ತದೆ ಎಂದು ಅವರ ಕುಟುಂಬ ಭಾವಿಸಿತ್ತು. ಆದರೆ, ಸ್ಥಾನ ಸಿಗದಿರುವುದಕ್ಕೆ ತುಂಬಾ ಬೇಸರಗೊಂಡಿದೆ.

    ಈ ಬಗ್ಗೆ ರಿಂಕು ಸಿಂಗ್​ ತಂದೆ ಖಾನ್​ಚಂದ್ರ ಸಿಂಗ್ ಮಾತನಾಡಿ, ಟಿ20 ವಿಶ್ವಕಪ್ ಟೂರ್ನಿಗೆ ರಿಂಕು ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದೆವು. ಅಲ್ಲದೆ, ಅದನ್ನು ಆಚರಿಸಲು ಸಿಹಿತಿಂಡಿಗಳು ಮತ್ತು ಪಟಾಕಿಗಳನ್ನು ಸಹ ತಂದಿದ್ದೆವು. ಆದರೆ ನಮ್ಮ ನಿರೀಕ್ಷೆ ತಲೆಕೆಳಗಾಯಿತು. ಟೀಮ್​ ಇಂಡಿಯಾ ಪ್ರಕಟವಾದ ಬಳಿಕ ರಿಂಕು ತನ್ನ ತಾಯಿಯೊಂದಿಗೆ ನಾನು ಆಯ್ಕೆಯಾಗಲಿಲ್ಲ ಎಂದು ದುಃಖದಿಂದ ಮಾತನಾಡಿದರು ಅಂತ ರಿಂಕು ತಂದೆ ನೋವಿನಿಂದಲೇ ಹೇಳಿದರು.

    ಜೂನ್​ 01ರಿಂದ ಯುಎಸ್​ಎ ಹಾಗೂ ವೆಸ್ಟ್​ ಇಂಡೀಸ್​ ಆತಿಥ್ಯದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್​ಗೆ ಭಾರತ ತಂಡ ಪ್ರಕಟಗೊಂಡಿದ್ದು, ಟೀಮ್​ ಇಂಡಿಯಾ ತನ್ನ ಆಭಿಯಾನವನ್ನು ಜೂನ್​ 05ರಂದು ಐರ್ಲೆಂಡ್​ ವಿರುದ್ಧ ಆಡುವ ಮೂಲಕ ಆರಂಭಿಸಲಿದೆ.

    ಟಿ-20 ವಿಶ್ವಕಪ್​ಗಾಗಿ ಭಾರತ ತಂಡ
    ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್​​ದೀಪ್ ಯಾದವ್, ಯಜುವೇಂದ್ರ ಚಹಾಲ್, ಅರ್ಷ್​ದೀಪ್​ ಸಿಂಗ್, ಮೊಹಮ್ಮದ್ ಸಿರಾಜ್, ಜಸ್​ಪ್ರೀತ್ ಬುಮ್ರಾ. ಅದರಂತೆ ಶುಭ್​ಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಹಾಗೂ ಅವೇಶ್ ಖಾನ್​ ಅವರನ್ನು ಮೀಸಲು ಆಟಗಾರರನ್ನಾಗಿ ಆಯ್ಕೆ ಮಾಡಲಾಗಿದೆ. (ಏಜೆನ್ಸೀಸ್​)

    ಟಿ-20 ವಿಶ್ವಕಪ್​ಗೆ ಭಾರತ ತಂಡ ಪ್ರಕಟ; ಕೆ.ಎಲ್. ರಾಹುಲ್​, ಶ್ರೇಯಸ್​ ಅಯ್ಯರ್​ಗೆ ಕೊಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts