More

  ಈ ನಟನ ಮೊದಲ ಪೇಮೆಂಟ್​ ಕೇವಲ 50 ರೂ.! ಇಂದು ಅತಿ ಹೆಚ್ಚು ಸಂಭಾವನೆ ಪಡೆಯುವ ಕನ್ನಡದ ಸ್ಟಾರ್​…

  ಬೆಂಗಳೂರು: ಸಿನಿಮಾ ಪ್ರಪಂಚವೇ ಹಾಗೇ! ಯಾವ ನಟನ ಸಿನಿಮಾ ಎಷ್ಟರ ಮಟ್ಟಿಗೆ ಸೂಪರ್ ಡೂಪರ್ ಹಿಟ್ ಆಗುತ್ತೆ, ಅವರ ಯಶಸ್ಸಿನ ಬಳಿಕ ಅವರ ಬಗ್ಗೆ ನಮಗೆ ಮಾಹಿತಿ ಲಭಿಸುತ್ತದೆ. ಚಿತ್ರರಂಗದಲ್ಲಿ ಒಳ್ಳೊಳ್ಳೆ ಸಿನಿಮಾಗಳನ್ನು ಮಾಡಿ, ಸೈಎನಿಸಿಕೊಂಡರೆ ಸಿನಿಪ್ರೇಕ್ಷಕರು ಸುಲಭವಾಗಿ ಗುರುತು ಹಿಡಿಯುತ್ತಾರೆ ಹಾಗೂ ಇವರೊಬ್ಬ ಖ್ಯಾತ ನಟರು ಎನ್ನುತ್ತಾರೆ. ಸಿನಿಮಾಗಳ ಮೂಲಕ ಹೆಸರು ಮಾಡಿದ ಕಲಾವಿದರನ್ನು ಗುರುತಿಸುವ ಜನರು, ಅವರ ಹಿಂದಿನ ಪರಿಶ್ರಮದ ಹಾದಿ ಹೇಗಿತ್ತು? ಚಿತ್ರರಂಗಕ್ಕೆ ಬರುವ ಮುನ್ನ ಒದ್ದಾಡಿದ ಸಂಕಷ್ಟಗಳೇನು? ಪಟ್ಟ ಕಷ್ಟವೇನು? ಎಂಬುದನ್ನು ತಿಳಿದಿರುವುದಿಲ್ಲ. ಕಾರಣ, ಅವರು ಹೆಸರು ಮಾಡುವ ಮೊದಲು ಇದ್ಯಾವುದು ಯಾರ ಗಮನಕಗ್ಕೂ ಬಂದಿರುವುದಿಲ್ಲ. ಖ್ಯಾತಿ ಹೆಚ್ಚಿಸಿಕೊಂಡ ಬಳಿಕ ಇದೆಲ್ಲವೂ ಮುನ್ನೆಲೆಗೆ ಬರುವುದು ಸಹಜ. ಇಂದು ನಾವು ಹೇಳುತ್ತಿರುವ ನಟ ಚಿತ್ರರಂಗಕ್ಕೆ ಕಾಲಿಡಬೇಕು, ಇಲ್ಲೊಂದು ಹೆಸರು ಸ್ಥಾಪನೆ ಮಾಡಬೇಕು ಎಂದು ಪಣತೊಟ್ಟು, ಇಂದು ಅತೀ ಹೆಚ್ಚು ಸಂಭಾವನೆ ಪಡೆಯುವ ಪ್ಯಾನ್ ಇಂಡಿಯಾ ನಟರಾಗಿ ಹೊರಹೊಮ್ಮಿದ್ದಾರೆ.

  ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದ ಮಂಡಲ ಪೂಜೆಗೆ ಮುಧೋಳದ ಅರ್ಚಕರ ಆಯ್ಕೆ!

  17 ವರ್ಷಗಳ ಹಿಂದೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಈ ನಟ, ಪ್ರಾರಂಭದ ದಿನಗಳಲ್ಲಿ ಅತ್ಯಂತ ಕಷ್ಟದ ದಿನಗಳನ್ನು ಎದುರಿಸಿದರು. ಅಪಮಾನ, ಅವಮಾನಗಳು ಎದುರಾದಾಗ ಕುಗ್ಗದೆ ಚಿಕ್ಕ ಚಿಕ್ಕ ಅವಕಾಶಗಳಿಗೂ ಕಾದು, ತಮ್ಮ ಅಭಿನಯ ಕೌಶಲ್ಯವನ್ನು ನಿರ್ದೇಶಕರು, ಚಿತ್ರತಂಡಕ್ಕೆ ಪರಿಚಯಿಸುತ್ತಿದ್ದರು. ಅವಕಾಶಗಳನ್ನು ಅರಸಿ ಬಂದ ಇವರು, ಅನೇಕ ಒದ್ದಾಟಗಳ ಮಧ್ಯೆಯೂ ಛಲಬಿಡದೆ, ನಿರಂತರ ಶ್ರಮದಿಂದ ಧಾರವಾಹಿಗಳಲ್ಲಿ ಸಿಗುವ ಸಣ್ಣ ಪಾತ್ರಗಳನ್ನು ಮಾಡಿ, ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

  ಮುಂದೊಂದು ದಿನ ಅತ್ಯುತ್ತಮ ನಟನಾಗಿ ಬೆಳೆದು ನಿಲ್ಲುವ ಎಲ್ಲಾ ಲಕ್ಷಣಗಳು ಇವರಲ್ಲಿದೆ ಎಂದು ಭಾವಿಸಿ, ನಟಿಸಲು ಅವಕಾಶ ಕೊಟ್ಟವರು ಇಂದು ಬಹಳ ಖುಷಿಯಿಂದ, ಹೆಮ್ಮೆಯಿಂದ ನಮ್ಮ ಕನ್ನಡದ ನಟ ಎಂದು ಹೇಳುತ್ತಾರೆ. ಜನಪ್ರಿಯ ಧಾರವಾಹಿಗಳ ಮುಖೇನ ಒಳ್ಳೆಯ ಕಲಾವಿದ ಎಂದು ಗುರುತಿಸಿಕೊಂಡ ಇವರು, ಹಲವಾರು ಯಶಸ್ವಿ ಚಿತ್ರಗಳನ್ನು ನೀಡಿ, ಇಂದು ಇಡೀ ಜಗತ್ತೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಹಾಗಾದ್ರೆ, ಯಾರು ಈ ಸೂಪರ್​ಸ್ಟಾರ್​ ಎಂಬ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.

  ಇದನ್ನೂ ಓದಿ: ರಾತ್ರೋ ರಾತ್ರಿ ಕಣ್ಮರೆಯಾಯ್ತು ಇಲ್ಲಿನ ಗ್ರಾಮ! ಇಂದಿಗೂ ಈ ಜಾಗದ ಹೆಸರು ಕೇಳಿದ್ರೆ ಬೆಚ್ಚಿ ಬೀಳ್ತಾರೆ ಜನ

  ಸಾಮಾನ್ಯ ಬಸ್​ ಡ್ರೈವರ್‌ ಮಗನಾಗಿ, ಬಡತನದ ನೋವನ್ನು ಅನುಭವಿಸಿ, ಮನೆಯ ಜವಾಬ್ದಾರಿಯನ್ನು ಹೊತ್ತ ನಟ ಯಶ್​, ಸಣ್ಣ-ಪುಟ್ಟ ಕೆಲಸಗಳನ್ನು ಮಾಡುತ್ತಲೇ ಚಿತ್ರರಂಗಕ್ಕೆ ಬಂದರು. ಸಿಕ್ಕ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು, ತಮ್ಮ ಪ್ರತಿಭೆಯನ್ನು ಪಸರಿಸಿದ ಯಶ್​, ತಮ್ಮ ಮೊದಲ ಸಂಭಾವನೆಯಾಗಿ ಪಡೆದಿದ್ದು ಕೇವಲ 50 ರೂ.

  2003ರಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಲು ಮನೆಬಿಟ್ಟು ಬೆಂಗಳೂರಿಗೆ ಬಂದ ಯಶ್​ ಅವರಿಗೆ ಪೋಷಕರು ಹೇಳಿದ್ದ ಮಾತು ಮಾತ್ರ ಒಂದೇ. ಒಂದು ಬಾರಿ ಮನೆಗೆ ವಾಪಾಸ್​ ಬಂದರೆ, ಮತ್ತೆ ಬೆಂಗಳೂರಿಗೆ ಹಿಂತಿರುಗಲು ಅನುಮತಿ ಕೊಡುವುದಿಲ್ಲ ಎಂದು. ಇದಾದ ನಂತರ ನಟ ಗಾಂಧಿನಗರದಲ್ಲಿ ಮಾಡಿದ್ದು ಮಾತ್ರ ಇತಿಹಾಸ.

  ಇದನ್ನೂ ಓದಿ: ಸಾರ್ವಜನಿಕರ ಮುಂದೆ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ಬಿಗ್ ಬಾಸ್ ಒಟಿಟಿ ವಿಜೇತ!

  ‘ಕೆಜಿಎಫ್’ ಸಿನಿಮಾ ಮೂಲಕ ಇಡೀ ಪ್ರಪಂಚವೇ ಕನ್ನಡ ಸಿನಿಮಾಗಳತ್ತ ಹಾಗೂ ಕನ್ನಡ ಚಿತ್ರರಂಗವನ್ನು ತಿರುಗಿ ನೋಡುವಂತೆ ಮಾಡಿದ ಯಶ್​, ಇಂದು ಅತ್ಯಂತ ಯಶಸ್ವಿ ನಟರ ಪೈಕಿ ಪ್ರಮುಖರಾಗಿದ್ದಾರೆ.​ ಇಂದು ಒಂದು ಪ್ರಾಜೆಕ್ಟ್​ಗೆ ನಟ​ 50ರಿಂದ 100 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎಂದು ವರದಿಯಾಗಿದೆ. ಇಷ್ಟೇ ಅಲ್ಲ, ತಮ್ಮ ಮುಂಬರುವ ನಿತೇಶ್ ತಿವಾರಿ ಅವರ ‘ರಾಮಾಯಣ’ ಸಿನಿಮಾದಲ್ಲಿನ ರಾವಣ ಪಾತ್ರಕ್ಕೆ ಬರೋಬ್ಬರಿ 150 ಕೋಟಿ ರೂಪಾಯಿ ಪೇಮೆಂಟ್​ ಪಡೆದಿದ್ದಾರೆ ಎಂದು ಹೇಳಲಾಗಿದೆ,(ಏಜೆನ್ಸೀಸ್).

  ‘ಓಂ’ ಚಿತ್ರದಲ್ಲಿರುವ ಈ ಇಬ್ಬರು ಮಕ್ಕಳು ಈಗ ಹೇಗಿದ್ದಾರೆ ಗೊತ್ತಾ? ಸ್ಟಾರ್​ ನಟನ ಮಕ್ಕಳಿವರು!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts