ಇಂದಿರಾ ಕ್ಯಾಂಟೀನ್​​ ಮರುಜೀವಕ್ಕೆ 355 ಕೋಟಿ ರೂ. ಬೇಡಿಕೆ

h15-Indira Canteen 2
Published on

ಬೆಂಗಳೂರು: ಕಾಂಗ್ರೆಸ್​ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದ್ದು, ಹಿಂದಿನ ಬಾರಿ ಅಧಿಕಾರದಲ್ಲಿದ್ದಾಗ ಶುರು ಮಾಡಿದ್ದ ಅನೇಕ ಯೋಜನೆಗಳ ಪುನರುಜ್ಜೀವನಕ್ಕೆ ಮುಂದಾಗಿದೆ. ಅವುಗಳಲ್ಲಿ ಇಂದಿರಾ ಕ್ಯಾಂಟೀನ್​ ಕೂಡ ಒಂದು.

ಎಲ್ಲಾ ಗ್ಯಾರಂಟಿ ಯೋಜನೆಗಳಿಗೂ ಹಣ ನೀಡಬೇಕಾಗಿದ್ದು ಇದೀಗ ಸರ್ಕಾರದ ಮುಂದೆ ಇಂದಿರಾ ಕ್ಯಾಂಟೀನ್ ಕೂಡ ನಿಂತಿದೆ. ಸರ್ಕಾರದ ಮುಂದೆ ಪಾಲಿಕೆ ಇದೀಗ ಇಂದಿರಾ ಕ್ಯಾಂಟೀನ್​ಗಳ ಪುನರುಜ್ಜೀವನಕ್ಕೆ 355 ಕೋಟಿ ರೂ. ಹಣದ ಬೇಡಿಕೆ ಇಟ್ಟಿದೆ.

ಈ ಹಿಂದೆಯೇ ಇಂದಿರಾ ಕ್ಯಾಂಟೀನ್​ಗೆ ಮರುಜೀವ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದರು. ಈ ಬಗ್ಗೆ ವಿವರವಾದ ರಿಪೋರ್ಟ್ಸ ಸಿದ್ಧಪಡಿಸಲು ಪಾಲಿಕೆಗೆ ಸೂಚನೆ ಹೋಗಿತ್ತು. ಅದರಂತೆ ವಿಸ್ತೃತ ವರದಿಯನ್ನು ತಯಾರಿಸಲಾಗಿದ್ದು ಸುಮಾರು 355 ಕೋಟಿ ರೂ. ಹಣ ಎಲ್ಲಾ ಕೆಲಸಗಳಿಗೂ ಅಗತ್ಯವಿದೆ ಎನ್ನಲಾಗಿದೆ.

ಇಂದಿರಾ ಕ್ಯಾಂಟೀನ್ ಆಹಾರ ಪೂರೈಕೆದಾರರಿಗೆ 300 ಕೋಟಿ ಬಾಕಿ!

ವರದಿಯಲ್ಲಿ ಇಂದಿರಾ ಕ್ಯಾಂಟೀನ್ ಆಹಾರ ಪೂರೈಕೆದಾರರಿಗೆ 300 ಕೋಟಿ ಬಾಕಿ ಇದೆ ಎನ್ನಲಾಗಿದ್ದು ಇದೇ ಬೇಡಿಕೆಯ ಹಣದ ಬಹುಪಾಲು ಆಗಿರುತ್ತದೆ. ಅದರ ಜತೆಗೆ 175 ಕ್ಯಾಂಟೀನ್ ಮತ್ತು 25 ಮೊಬೈಲ್ ಕ್ಯಾಂಟೀನ್​ಗಳ ದುರಸ್ತಿಯೂ ಮಾಡಬೇಕಿದೆ. ಇದಕ್ಕಾಗಿ ಹೆಚ್ಚುವರಿ ಹಣದ ಅಗತ್ಯ ಇದೆ ಎನ್ನಲಾಗಿದೆ. ಹೀಗಾಗಿ ಇಂದಿರಾ ಕ್ಯಾಂಟೀನ್ ಮರುಸ್ಥಾಪನೆಗೆ 335 ಕೋಟಿಗೆ ಪಾಲಿಕೆ ಪ್ರಸ್ತಾವನೆ ಸಲ್ಲಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net