ಬೆಂಗಳೂರು: ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ಬೆಂಗಳೂರಿನಲ್ಲಿ ಬಾಡಿಗೆದಾರರ ಎಲ್ಲಾ ಭಯಾನಕ ಕಥೆಗಳ ನಡುವೆ, ಮನೆ ಮಾಲೀಕ ಮತ್ತು ಅವನ ಬಾಡಿಗೆದಾರರ ಸಂಬಂಧ ಎದ್ದು ಕಾಣುತ್ತಿದೆ.
Betterhalf.ai ನ ಸಹ-ಸಂಸ್ಥಾಪಕ ಮತ್ತು CEO ಪವನ್ ಗುಪ್ತಾ ಅವರು ತಮ್ಮ ಮನೆ ಮಾಲೀಕರು ತಮ್ಮ ಸಂಸ್ಥೆಯಲ್ಲಿ 10 ಸಾವಿರ ಡಾಲರ್ (ಅಂದಾಜು 8.2 ಲಕ್ಷ ರೂ.) ಹಣ ಹೂಡಿಕೆ ಮಾಡಿದ್ದಾರೆ ಎಂದು ಬಹಿರಂಗಪಡಿಸಿದರು. ಪವನ್ ಗುಪ್ತಾ ಟ್ವಿಟರ್‌ನಲ್ಲಿ ಸುಶೀಲ್ ಎಂಬ ಹೆಸರಿನ ತನ್ನ ಮನೆ ಮಾಲೀಕರೊಂದಿಗಿನ ಚಾಟ್ನ ಸ್ಟೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ. “ನಾನು ನಿಮ್ಮಲ್ಲಿ ಹೂಡಿಕೆ ಮಾಡುತ್ತಿದ್ದೇನೆ. ಶುಭಾಶಯಗಳು. ನೀವು ಬೆಳೆಯುತ್ತೀರಿ ಎಂದು ಭಾವಿಸುತ್ತೇನೆ’ ಎಂದು ಮನೆ ಮಾಲೀಕರು ಪವನ್ ಅವರಿಗೆ ಹೇಳಿದರು.
ಇದನ್ನೂ ಓದಿ: ಮರದಿಂದ ಹಣ್ಣು ಕಿತ್ತ ಬಾಲಕ: ಹಿಗ್ಗಾಮುಗ್ಗಾ ಥಳಿಸಿ ನೀರಿನ ಹೊಂಡಕ್ಕೆ ಎಸೆದ ಮನೆ ಮಾಲೀಕ
ಪವನ್ ಗುಪ್ತಾ ಮುಖ್ಯಸ್ಥರಾಗಿರುವ AI ಚಾಲಿತ ಮ್ಯಾಟ್ರಿಮೋನಿಯಲ್ ಆ್ಯಪ್ನ ಸ್ಟಾರ್ಟ್‌ಅಪ್‌ನಲ್ಲಿ 10 ಸಾವಿರ ಡಾಲರ್ ಹೂಡಿಕೆ ಮಾಡಿರುವುದನ್ನು ಸುಶೀಲ್ ನಂತರ ದೃಢಪಡಿಸಿದರು. “ವ್ಯಾಪಾರದ ಕಠಿಣ ಸಂದರ್ಭದಲ್ಲಿ, ನನ್ನ ಮನೆ ಮಾಲೀಕರು ಅನಿರೀಕ್ಷಿತ ಹೂಡಿಕೆದಾರರಾದರು” ಎಂದು ಗುಪ್ತಾ ಸ್ಕ್ರೀನ್‌ಶಾಟ್ ಹಂಚಿಕೊಳ್ಳುವಾಗ ಬರೆದಿದ್ದಾರೆ.
“ಅವರು ಇತ್ತೀಚೆಗೆ ನನ್ನ ಸ್ಟಾರ್ಟ್‌ಅಪ್ @betterhalfai ನಲ್ಲಿ SLOK ಹೂಡಿಕೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಪ್ರತಿಯೊಬ್ಬರೂ ತೋರಿಸುವ ಉದ್ಯಮಶೀಲತೆಯ ಮನೋಭಾವದಿಂದ ನಿಜವಾಗಿಯೂ ಆಶ್ಚರ್ಯಚಕಿತನಾಗಿದ್ದೇನೆ. ಈ ಕಾರಣಕ್ಕಾಗಿ ಬೆಂಗಳೂರು ಭಾರತದ ಸಿಲಿಕಾನ್ ವ್ಯಾಲಿ” ಎಂದು ಅವರು ಹೇಳಿದರು.
In a tough business landscape, I found an unexpected investor in my landlord. He recently invested $10K in my startup @betterhalfai. Truly amazed by the entrepreneurial spirit everyone in Bangalore shows. Silicon Valley of India for a reason. #peakbengalurumoment pic.twitter.com/IfzUn0lPkl
— Pawan Gupta (@pguptasloan) June 2, 2023
ಇದನ್ನೂ ಓದಿ: ‘ಗೂಗಲ್ ಸಂದರ್ಶನ ಪಾಸ್ ಮಾಡ್ಬೋದು ಆದ್ರೆ ಬೆಂಗ್ಳೂರಲ್ಲಿ ಮನೆ ಮಾಲೀಕನ ಸಂದರ್ಶನ ಕಷ್ಟವೋ ಕಷ್ಟ’
ಕಾಮೆಂಟ್ ವಿಭಾಗದಲ್ಲಿ, ಜನರು ಹೂಡಿಕೆ ಪಡೆದ ಪವನ್ ಗುಪ್ತಾ ಅವರನ್ನು ಅಭಿನಂದಿಸಿ ಇದು ‘ಪೀಕ್ ಬೆಂಗಳೂರು’ ಕ್ಷಣದ ಉದಾಹರಣೆ ಎಂದು ಕರೆದರು.