More

    ಆರೋಪಗಳ ತನಿಖೆಗೆ ತಂಡ ರಚಿಸಿ

    ಕೋಲಾರ: ಎಪಿಎಂಸಿ ಮಾರುಕಟ್ಟೆಯಲ್ಲಿನ ತರಕಾರಿ ದಲ್ಲಾಳರ ಹಾಗೂ ಅಧಿಕಾರಿಗಳ ನಡುವಿನ ಆರೋಪಗಳ ಬಗ್ಗೆ ತನಿಖೆ ನಡೆಸಲು ಪ್ರತ್ಯೇಕ ತಂಡ ರಚನೆ ಮಾಡಿ 10 ದಿನಗಳೊಳಗೆ ಇತ್ಯರ್ಥಪಡಿಸಬೇಕು ಎಂದು ದಲಿತ ಸಂರ್ಷ ಸಮಿತಿ ಸಂಚಾಲಕ ಟಿ.ವಿಜಯ ಕುಮಾರ್​ ಒತ್ತಾಯಿಸಿದರು.

    ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾರುಕಟ್ಟೆಯಲ್ಲಿ ರೈತರಿಗೆ ಆಗುತ್ತಿರುವ ಶೋಷಣೆ ತಪ್ಪಿಸಲು ವಿಶೇಷ ತನಿಖಾಧಿಕಾರಿಯನ್ನು ನೇಮಕ ಮಾಡಿ, ದಲ್ಲಾಳರು ನಿರ್ವಹಿಸುತ್ತಿರುವ ದಾಖಲೆಗಳನ್ನು ಪರಿಶೀಲಿಸಿ, ರೈತರಿಗೆ ಆಗುತ್ತಿರುವ ಮೋಸವನ್ನು ತಡೆಹಿಡಿಯಬೇಕು ಎಂದರು.

    ಮಾರುಕಟ್ಟೆಯಲ್ಲಿ 3 ಕೋಟಿ ರೂ. ತೆರಿಗೆ ಸಂಗ್ರಹವಾಗುತ್ತಿತ್ತು, ಅದು ಈಗ 5 ಕೋಟಿಗೆ ಏರಿಕೆಯಾಗಿದೆ. ಇದಕ್ಕೆ ದಲ್ಲಾಳರು ಎಪಿಎಂಸಿ ಕಾರ್ಯದರ್ಶಿ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿ, ಸುಳ್ಳು ಮಾಹಿತಿಯನ್ನು ಎಪಿಎಂಸಿ ಮೇಲಧಿಕಾರಿಗಳಿಗೆ ದೂರು ನೀಡಿ, ರೈತರ ಮತ್ತು ಅಧಿಕಾರಿಗಳಿಗೆ ಧಕ್ಕೆ ತರುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.

    ಪರವಾನಿಗೆ ಪಡೆದಿರುವ ದಲ್ಲಾಳಿಗಳು ವ್ಯಾಪಾರ ಮಾಡಲು ಬಂದರೆ, ಅವರಿಗೆ ಸ್ಥಳಾವಕಾಶ ನೀಡದೆ, ಹಾಗೂ ರೈತರಿಂದ ಖರೀದಿಸದಂತೆ, ಉದ್ದೇಶಪೂರ್ವಕವಾಗಿ ಕಿರುಕುಳ ನೀಡುತ್ತಿದ್ದಾರೆ. ಹೊಸ ಪರವಾನಿಗೆದಾರರು, ಹೆಸರಿಗೆ ಲಕ್ಷಾಂತರ ರೂ. ಹಣ ನೀಡಿದರೆ ಅವರಿಗೆ ವ್ಯಾಪಾರ ಮಾಡಿಕೊಳ್ಳಲು ವ್ಯವಸ್ಥೆಯಾಗುತ್ತದೆ, ದಲ್ಲಾಳಿಗಳ ಸಂಘದ ಹೆಸರಿನಲ್ಲಿ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ದೂರಿದರು.

    ರೈತ ಸಂಘದ ಕಾರ್ಯಾಧ್ಯಕ್ಷ ಅಬ್ಬಣಿ ಶಿವಪ್ಪ, ಜಿಲ್ಲಾ ಕಾರ್ಯಾಧ್ಯಕ್ಷ ದಿನ್ನೆಹೊಸಹಳ್ಳಿ ರಮೇಶ್​, ಸಾಮಾಜಿಕ ಕಾರ್ಯಕರ್ತ ಹೂವಳ್ಳಿ ನಾಗರಾಜ್​, ತಾಲೂಕು ಸಂಚಾಲಕ ರಮೇಶ್​, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಆನಂದಕುಮಾರ್​, ಮಹಿಳಾ ಸಂರಕ್ಷಣಾ ಸಮಿತಿ ಅಧ್ಯಕ್ಷೆ ಎಂ.ಶಶಿಕಲಾ, ಪರಿಸರ ಭೂ ಪರಿಸರ ಸಂರಕ್ಷಣಾ ಸಮಿತಿ ತಾರಾ ಮಂಜುನಾಥ್​ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts