More

    ‘ಗೂಗಲ್​ ಸಂದರ್ಶನ ಪಾಸ್​ ಮಾಡ್ಬೋದು ಆದ್ರೆ ಬೆಂಗ್ಳೂರಲ್ಲಿ ಮನೆ ಮಾಲೀಕನ ಸಂದರ್ಶನ ಕಷ್ಟವೋ ಕಷ್ಟ’

    ಬೆಂಗಳೂರು: ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಹೊಸ ವಸತಿ ಸೌಕರ್ಯಗಳನ್ನು ಹುಡುಕುವುದು ಸವಾಲಿನ ಕೆಲಸವಾಗಿದೆ. ರಾಜ್ಯ ರಾಜಧಾನಿಯಲ್ಲಿ ಹೇರಳವಾದ ಉದ್ಯೋಗ ಅವಕಾಶಗಳು ಒಂದೆಡೆಯಾದರೆ, ಇನ್ನೊಂದೆಡೆ ಮನೆಗೆ ಬಾಡಿಗೆ ಮೊತ್ತ ಗಗನಮುಖಿಯಾಗಿವೆ ಮತ್ತು ಮನೆ ಮಾಲೀಕರ ವಿಚಿತ್ರ ಬೇಡಿಕೆಗಳು ಮನೆ ಬಾಡಿಗೆ ಪಡೆದುಕೊಳ್ಳಲು ಹಿಂದೇಟು ಹಾಕುವಂತಿವೆ.

    ಭಾರತೀಯ ಐಟಿ ಹಬ್‌ನ ಜಗತ್ತಿನಲ್ಲಿ ತನ್ನ ಗುರುತನ್ನು ಸೃಷ್ಟಿಸಲು ಬೆಂಗಳೂರಿಗೆ ಬರುವ ಅನೇಕರು ಬಾಡಿಗೆ ಸಮಯದಲ್ಲಿ ಮನೆ ಮಾಲೀಕರ ಅಸಾಮಾನ್ಯ ಬೇಡಿಕೆಗಳಿಂದ ಅನಗತ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೆಚ್ಚಿನ ಬೇಡಿಕೆಗಳ ಕಾರಣದಿಂದಾಗಿ, ಮನೆ ಮಾಲೀಕರು ತಮ್ಮ ಬಾಡಿಗೆದಾರರನ್ನು ಸಂದರ್ಶಿಸುತ್ತಾರೆ. ಈ ಸಂದರ್ಶನ ಗೂಗಲ್​ ಸಂದರ್ಶನದಲ್ಲಿ ಉತ್ತೀರ್ಣರಾಗುವುದಕ್ಕಿಂತ ಹೆಚ್ಚು ಕಷ್ಟಕರವೆಂದು ತೋರುತ್ತದೆಯಂತೆ.

    ಇದನ್ನೂ ಓದಿ: ಪಿಎಸ್​ಐ ನೇಮಕಾತಿ ಹಗರಣ; ಗರ್ಲ್​ಫ್ರೆಂಡ್ ಸಹಾಯದಿಂದ ತಲೆಮರೆಸಿಕೊಂಡಿದ್ದ PSI ನವೀನ್ ಬಂಧನ

    ಇತ್ತೀಚೆಗೆ ರಿಪು ದಮನ್​ ಭಡೊರಿಯಾ ಎಂಬುವರು ಇದೇ ರೀತಿಯಾದ ಕಠಿಣ ಅನುಭವನ್ನು ಹೊಂದಿದ್ದಾರಂತೆ. ಬೆಂಗಳೂರಿನಲ್ಲಿ ಮನೆ ಹುಡುಕುವುದು ಗೂಗಲ್​ ಸಂದರ್ಶನ ಎದುರಿಸುವುದಕ್ಕಿಂತಲೂ ಕಷ್ಟಕರ ಎಂದು ಹೇಳಿಕೊಂಡಿದ್ದಾರೆ. ತಮ್ಮ ಲಿಂಕ್​ಡಿನ್​ ಮೂಲಕ ಬರೆದುಕೊಂಡಿರುವ ರಿಪು, ನಾನು ಗೂಗಲ್​ ಸಂದರ್ಶನವನ್ನು ಪಾಸ್​ ಮಾಡಿದೆ. ಆದರೆ, ಬೆಂಗಳೂರಿನ ಮನೆ ಮಾಲೀಕನ ಸಂದರ್ಶನದಲ್ಲಿ ಸೋತೆ ಎಂದಿದ್ದಾರೆ.

    ಕಳೆದ ವರ್ಷ ನಾನು ಸಿಯಾಟಲ್‌ನಿಂದ ಬೆಂಗಳೂರಿಗೆ ಸ್ಥಳಾಂತರಗೊಂಡಾಗ, ನಾನು ಬಾಡಿಗೆಗೆ ಯೋಗ್ಯವಾದ ಸ್ಥಳವನ್ನು ಹುಡುಕುತ್ತಿದ್ದೆ. ಆದರೆ, ಕೋವಿಡ್ ನಂತರದ ಹೆಚ್ಚಿನ ಬೇಡಿಕೆಯಿಂದಾಗಿ ಇದು ತುಂಬಾ ಕಷ್ಟಕರವಾಗಿತ್ತು. ಬೇಡಿಕೆಗೆ ಅನುಗುಣವಾಗಿ ಅನೇಕ ಅಪಾರ್ಟ್ಮೆಂಟ್ ಮಾಲೀಕರು ನಿರೀಕ್ಷಿತ ಬಾಡಿಗೆದಾರರನ್ನು ಸಂದರ್ಶಿಸಲು ಪ್ರಾರಂಭಿಸಿದರು. ನನ್ನ ಮೊದಲ ಬಾಡಿಗೆದಾರರ ಸಂದರ್ಶನದಲ್ಲಿ ನಾನು ವಿಫಲವಾದೆ ಎಂದಿದ್ದಾರೆ.

    ನನ್ನ ಸಂದರ್ಶನದ ಕಾರ್ಯಕ್ಷಮತೆಯ ಕುರಿತು ಪ್ರತಿಕ್ರಿಯೆಗಾಗಿ ನಾನು ನೇರವಾಗಿ ಮನೆ ಮಾಲೀಕನನ್ನು ಕೇಳಿದೆ ಮತ್ತು ಯಾವುದೇ ದೋಷಗಳಿದ್ದರೆ ಹೇಳಿ ಎಂದು ಕೇಳಿದೆ. ಮನೆ ಮಾಲೀಕ ಕೂಡ ನಾನು ಏನು ತಿಳಿದುಕೊಳ್ಳುತ್ತೇನೋ ಅಂತ ಭಾವಿಸದೇ ನೇರವಾಗಿಯೇ ಹೇಳಿದರು. ನಾನು ಗೂಗಲ್‌ನಲ್ಲಿ ಕೆಲಸ ಮಾಡುತ್ತಿರುವುದರಿಂದ ಹೊಸ ಮನೆಯನ್ನೇ ಖರೀದಿಸುವ ಸಾಧ್ಯತೆಯಿದೆ ಎಂದು ಅವರು ನಂಬಿದ್ದರು. ಗೂಗಲ್‌ನಲ್ಲಿ ಕೆಲಸ ಮಾಡುವುರಿಂದ ಇಷ್ಟೊಂದು ಅನಾನುಕೂಲಕರವಾಗಿರುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ ಎಂದು ರಿಪು ಅವರು ಹೇಳಿದ್ದಾರೆ.

    ಇದನ್ನೂ ಓದಿ: ಇನ್​ಸ್ಟಾಗ್ರಾಂ ಪರಿಚಿತ ಯುವತಿ ಕರೆದಳು ಅಂತ ಬನ್ನೇರುಘಟ್ಟಕ್ಕೆ ಹೋದ ಯುವಕನಿಗೆ ಕಾದಿತ್ತು ಶಾಕ್​!

    ಆದಾಗ್ಯೂ ಎರಡನೇ ಬಾರಿ ಮನೆ ಮಾಲೀಕನ ಸಂದರ್ಶನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ರಿಪು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

    ಮೋದಿಯ ಫೋಟೋ ಹರಿದ ಕಾಂಗ್ರೆಸ್ ಶಾಸಕ; ದಂಡ ವಿಧಿಸಿದ ನ್ಯಾಯಾಲಯ

    ವಿದ್ಯಾರ್ಥಿನಿಯರ ಮೈ-ಕೈ ಮುಟ್ಟಿ ಅನುಚಿತ ವರ್ತನೆ: ತುಮಕೂರಲ್ಲಿ ಕಾಮುಕ ಶಿಕ್ಷಕನ ಬಂಧನ

    ‘ಗೇಮ್​ ಚೇಂಜರ್​’ ಆದ ರಾಮ್​ಚರಣ್​ ತೇಜ; ಸಂಕ್ರಾಂತಿಗೆ ಚಿತ್ರ ಬಿಡುಗಡೆ ಸಾಧ್ಯತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts