ಇನ್​ಸ್ಟಾಗ್ರಾಂ ಪರಿಚಿತ ಯುವತಿ ಕರೆದಳು ಅಂತ ಬನ್ನೇರುಘಟ್ಟಕ್ಕೆ ಹೋದ ಯುವಕನಿಗೆ ಕಾದಿತ್ತು ಶಾಕ್​!

Honeytrap, Anekal,
Published on

ಆನೇಕಲ್: ಇನ್​ಸ್ಟಾಗ್ರಾಂ ಮೂಲಕ ಯುವಕನಿಗೆ ಗಾಳ ಹಾಕಿ ಹನಿಟ್ರ್ಯಾಪ್​​ ಬಲೆಗೆ ಬೀಳಿಸಿ, ಸುಲಿಗೆ ಮಾಡಿದ್ದ ಆರೋಪಿಗಳನ್ನು ಬನ್ನೇರುಘಟ್ಟ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಯುವತಿಯೊಬ್ಬಳು ಇನ್​ಸ್ಟಾಗ್ರಾಂನಲ್ಲಿ ಶಶಾಂಕ್ ಎಂಬುವವರಿಗೆ ಪದೇ ಪದೆ ಮೆಸೇಜ್​ ಮಾಡುತ್ತಿದ್ದಳು. ಪರಿಚಯ ಮಾಡಿಕೊಂಡ ಬಳಿಕ ಆಮಿಷವೊಡ್ಡಿ ಶಶಾಂಕ್​ರನ್ನು ಬನ್ನೇರುಘಟ್ಟ ಸಮೀಪದ ಬಂಡೆಯೊಂದರ ಬಳಿ ಕರೆಸಿಕೊಂಡಿದ್ದಳು. ಇದೇ ವೇಳೆ ಉಳಿದ ಆರೋಪಿಗಳು ಸ್ಥಳಕ್ಕೆ ಎಂಟ್ರಿ ಕೊಟ್ಟಿದ್ದರು.

Honeytrap Accused

ಒಬ್ಬಂಟಿ ಹುಡುಗಿ ಜತೆ ಏನು ಮಾಡುತ್ತಿದ್ದೀಯ ಎಂದು ಅವಾಜ್ ಹಾಕಿದ ಆರೋಪಿಗಳು ದೊಣ್ಣೆಯಿಂದ ಹಲ್ಲೆ ನಡೆಸಿ, ಶಶಾಂಕ್​ ಬಳಿ ಇದ್ದ ಐಪೋನ್ ಮತ್ತು ಚಿನ್ನಾಭರಣವನ್ನು ಕಳವು ಮಾಡಿದ್ದರು. ವೃತ್ತಿಯಲ್ಲಿ ಪೌರೋಹಿತ್ಯ ಮಾಡುತ್ತಿದ್ದ ಶಶಾಂಕ್, ಮರ್ಯಾದೆಗೆ ಅಂಜಿ ದೂರು ನೀಡುವುದಿಲ್ಲ ಅಂತ ಆರೋಪಿಗಳು ಭಾವಿಸಿದ್ದರು. ಆದರೆ, ವಂಚನೆ ಬಗ್ಗೆ ಬನ್ನೇರುಘಟ್ಟ ಪೊಲೀಸರಿಗೆ ಶಶಾಂಕ್​ ದೂರು ನೀಡಿದ್ದರು.

ದೂರು ಆಧರಿಸಿ ತನಿಖೆಗೆ ಇಳಿದ ಬನ್ನೇರುಘಟ್ಟದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ರುತೀಕ್ ಅಲಿಯಾಸ್​ ವಿಷ್ಣು, ಮಹಮದ್ ಆಸೀಫ್​, ಯಾಸೀನ್ ಪಾಷಾ, ಸಮೀರ್ ಮತ್ತು ಶಾಹಿದ್ ಅಲಿ ಎಂದು ಗುರುತಿಸಲಾಗಿದೆ.

Honeytrap Accused 1

ಹನಿಟ್ರ್ಯಾಪ್​ನಲ್ಲಿ ಪ್ರಮುಖ ಪಾತ್ರ ವಹಿಸಿದ್ದವಳು ಯುವತಿ ಎನ್ನಲಾಗಿತ್ತು. ಆದರೆ, ಬಂಧಿಸಿದಾಗಲೇ ಆಕೆ ಅಪ್ರಾಪ್ತೆ ಎಂದು ತಿಳಿದುಬಂದಿದೆ. ಆಕೆಯನ್ನು ಬಾಲಾಪರಾಧಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಬನ್ನೇರುಘಟ್ಟ ಪೊಲೀಸ್​ ಠಾಣೆಯಲ್ಲಿ ಐಪಿಸಿ 397 ಅಡಿಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಿ, ಜೈಲಿಗಟ್ಟಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net