ಹಾವು ಕಚ್ಚಿದರೂ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಹಾಜರಾದ ವಿದ್ಯಾರ್ಥಿನಿ! ಮುಂದೇನಾಯ್ತು?

Odisha Girl
Published on

ಭುವನೇಶ್ವರ: ಹಾವು ಕಡಿತಕ್ಕೆ ಒಳಗಾಗಿದ್ದರೂ ದ್ವಿತೀಯ ಪಿಯು ಪರೀಕ್ಷೆ ಎದುರಿಸಿದ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆಯ ನಡುವೆಯೇ ಅಸ್ವಸ್ಥಗೊಂಡ ಘಟನೆ ಒಡಿಶಾದ ಕಿಯೊಂಜರ್​ ಜಿಲ್ಲೆಯಲ್ಲಿ ಕಳೆದ ಶನಿವಾರ ನಡೆದಿದೆ.

ವಿದ್ಯಾರ್ಥಿನಿಯನ್ನು ಲಿಪ್ಸಾ ರಾಣಿ ಸಾಹೋ ಎಂದು ಗುರುತಿಸಲಾಗಿದೆ. ಈಕೆ ದಾಧಿಬಾಬನ್ಪುರ್​ ಗ್ರಾಮದ ನಿವಾಸಿ. ದ್ವಿತೀಯ ಪಿಯುಸಿಯ ವಾರ್ಷಿಕ ಪರೀಕ್ಷೆಯನ್ನು ಎದುರಿಸಲು ಆನಂದಪುರ್​ ಕಾಲೇಜಿಗೆ ತೆರಳುವಾಗ ಹಾವು ಕಡಿದಿದೆ. ಆದಾಗ್ಯೂ ಲಿಪ್ಸಾ ಕಾಲೇಜಿಗೆ ತೆರಳಿ ಪರೀಕ್ಷೆ ಬರೆಯುತ್ತಿರುವ ನಡುವೆಯೇ ಆಕೆಯ ಆರೋಗ್ಯದಲ್ಲಿ ಏರುಪೇರಾಗಿದೆ.

ಸುಸ್ತಾಗುತ್ತಿದೆ ಎಂದು ಲಿಪ್ಸಾ ಹೇಳಿಕೊಂಡಾಗ ಆಕೆಯನ್ನು ತಕ್ಷಣ ಆನಂದಪುರದ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ.

ಲಿಪ್ಸಾ ಪರೀಕ್ಷೆಗೆ ಹಾಜರಾಗಲು ಮನೆಯಿಂದ ಹೊರಡುವ ಮುನ್ನ ಹಿತ್ತಲಿಗೆ ಹೋಗಿದ್ದಳು. ಈ ವೇಳೆ ಆಕೆಗೆ ಕಪ್ಪು ಬಣ್ಣದ ಹಾವು ಕಡಿದಿತ್ತು. ಆದಾಗ್ಯೂ, ಆಕೆ ಪರೀಕ್ಷೆಗೆ ಬಂದಿದ್ದಳು. ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಲಿಪ್ಸಾಳ ಸಂಬಂಧಿಕರೊಬ್ಬರು ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net