More

    ‘A’ ಪಾರ್ಟ್​ 2 ಖಂಡಿತ ಬರುತ್ತೆ ಎಂದ ನಟಿ ಚಾಂದಿನಿ! ಉಪೇಂದ್ರ ನಿರ್ದೇಶಿಸಿ, ನಟಿಸೋದು ಪಕ್ಕಾ?

    ಬೆಂಗಳೂರು: ಕನ್ನಡ ಚಿತ್ರರಂಗದ ಕ್ಲಾಸಿಕ್‍ ಚಿತ್ರಗಳಲ್ಲಿ ಒಂದಾದ ‘ಎ’ 28 ವರ್ಷಗಳ ಹಿಂದೆ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಗೊಂಡು, ಸಿನಿಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ಇದೀಗ ಆ ಚಿತ್ರವು ಮತ್ತೊಮ್ಮೆ ಕಳೆದ ವಾರ ರೀ-ರಿಲೀಸ್ ಆಗಿದ್ದು, ನಟ, ರಿಯಲ್ ಸ್ಟಾರ್ ಉಪೇಂದ್ರ ಅವರ ಅಭಿಮಾನಿಗಳಲ್ಲಿ ಭಾರೀ ಕುತೂಹಲವನ್ನು ಹೆಚ್ಚಿಸಿತು. ಚಿತ್ರಕ್ಕೆ ಜನ ತೋರಿಸಿದ ಪ್ರತಿಕ್ರಿಯೆ ನೋಡಿ, ಚಿತ್ರತಂಡ ಫುಲ್ ಖುಷ್​ ಆಗಿದೆ.

    ಇದನ್ನೂ ಓದಿ: ರೆಡ್‌ಕ್ರಾಸ್‌ನಿಂದ ಪ್ರತಿ ವರ್ಷ 6 ಸಾವಿರ ಯುನಿಟ್ ಉಚಿತ ರಕ್ತ – ಸಿಎ ಶಾಂತಾರಾಮ ಶೆಟ್ಟಿ

    ಇನ್ನು ಚಿತ್ರಮಂದಿರಗಳಲ್ಲಿ ಮರುಬಿಡುಗಡೆಯಾದ ‘ಎ’ ಸಿನಿಮಾ ನೋಡಿದ ಬಳಿಕ ಸಿನಿಪ್ರೇಕ್ಷಕರು ಹಾಗೂ ಉಪ್ಪಿ ಅಭಿಮಾನಿಗಳು, ನಟನ ನಟನೆಗೆ, ಚಿತ್ರೀಕರಣ ಹಾಗೂ ಕಥಾಹಂದರಕ್ಕೆ ಫಿದಾ ಆಗಿದ್ದು, ನಿಮ್ಮ ನಿರ್ದೇಶನದಲ್ಲಿ ಮತ್ತಷ್ಟು ಸಿನಿಮಾಗಳನ್ನು ನೋಡಲು ಬಯಸುತ್ತೇವೆ. ನೀವು ನಟಿಸುವುದಕ್ಕಿಂತ ನಿರ್ದೇಶನಕ್ಕೆ ಇಳಿಯಿರಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿದ್ದಾರೆ.

    “ಇದೇ ಸಂದರ್ಭದಲ್ಲಿ ಚಿತ್ರದ ಮುಂದುವರೆದ ಭಾಗ ಮಾಡುವುದಾಗಿ ಚಿತ್ರದ ನಾಯಕಿ ಚಾಂದಿನಿ ಘೋಷಿಸಿದ್ದು, ಅಂದು ಇಡೀ ದೇಶದಲ್ಲಿ ‘ಎ’ ಸಿನಿಮಾ ಬಿಡುಗಡೆಗೊಂಡು ಸಂಚಲನ ಮೂಡಿಸಿತ್ತು. ಶಾರುಖ್‍ ಖಾನ್​​ ಅವರಿಗೂ ‘ಎ’ ಚಿತ್ರವನ್ನು ರೀಮೇಕ್‍ ಮಾಡಬೇಕು ಎಂಬ ಆಸೆ ಇತ್ತು. ‘ಓಂ ಶಾಂತಿ ಓಂ’ ಚಿತ್ರದಲ್ಲಿ ಎ ಸಿನಿಮಾದ ಛಾಯೆ ಇದೆ. ಹಾಗಾಗಿ ಚಿತ್ರವನ್ನು ಮುಂದುವರೆಸುವುದು ನನ್ನ ಆಸೆ” ಎಂದು ಚಾಂದಿನಿ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಅಟಲ್ ಪಿಂಚಣಿ ಯೋಜನೆಯ ಸಮರ್ಪಕ ಅನುಷ್ಠಾನ ಎಸ್‌ಸಿಡಿಸಿಸಿ ಬ್ಯಾಂಕ್ ಸಾಧನೆಗೆ ಪ್ರಶಂಸೆ

    ಕಥೆ ಮತ್ತು ಚಿತ್ರಕಥೆ ನಾನೇ ಬರೆದಿದ್ದೇನೆ ಎಂದ ಚಾಂದಿನಿ, “ಚಿತ್ರದ ನಿರ್ಮಾಪಕ ಮಂಜು, ಸಂಗೀತ ನಿದೇರ್ಶಕ ಗುರುಕಿರಣ್‍ ಮುಂತಾದವರು ಸಿನಿಮಾಗೆ ಕೈಜೋಡಿಸಲಿದ್ದಾರೆ. ಉಪೇಂದ್ರ ಬಳಿ ಹೋಗಿ ಮುಂದುವರೆದ ‘ಎ’ ಚಿತ್ರವನ್ನು ನಿರ್ದೇಶಿಸಿ, ನಟಿಸಲು ಮನವಿ ಮಾಡುತ್ತೇನೆ. ಅವರು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಈ ಸಿನಿಮಾ ಮಾಡಬೇಕೆಂದು ನಾವು ತೀರ್ಮಾನ ಮಾಡಿದ್ದೇವೆ” ಎಂದು ಚಾಂದಿನಿ ತಿಳಿಸಿದ್ದಾರೆ.

    ಮುಂದಿನ ವರ್ಷ ಈ 4 ಸ್ಟಾರ್​ ಆಟಗಾರರನ್ನು ಕೈಬಿಡಲಿದೆ ಆರ್​ಸಿಬಿ ಫ್ರಾಂಚೈಸಿ! ಫ್ಯಾನ್ಸ್​ ಕಂಗಾಲು

    ಇವರಿಬ್ಬರಿಲ್ಲ ಅಂದ್ರೆ IPL​ಗೆ ಕಳೆಯೇ ಇಲ್ಲ! ಮುಂದೆ ಯಾರೂ ಹೀಗೆ ಹುಚ್ಚೆದ್ದು ನೋಡೋದಿಲ್ಲ: ನವಜೋತ್ ಸಿಂಗ್ ಸಿಧು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts