ಥ್ರೆಡ್ಸ್​ ಬಳಕೆದಾರರ ಸಂಖ್ಯೆಯಲ್ಲಿ ಅರ್ಧಕ್ಕೂ ಅಧಿಕ ಕುಸಿತ; ಆರಂಭದಲ್ಲಿದ್ದ ಜೋಶ್ ಈಗಿಲ್ಲ!

Threads
Published on

ನವದೆಹಲಿ: ಸೋಷಿಯಲ್​ ಮೀಡಿಯಾ ದಿಗ್ಗಜ ಫೇಸ್​ಬುಕ್​ನ ಮಾತೃಕಂಪನಿ ಮೆಟಾ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ್ದ ಟೆಕ್ಸ್ಟ್​ ಬೇಸ್ಡ್ ಸೋಷಿಯಲ್ ಮೀಡಿಯಾ ಥ್ರೆಡ್ಸ್​ ಆರಂಭದಲ್ಲಿ ಭರ್ಜರಿ ಸದ್ದು ಮಾಡಿದ್ದರೂ ಇದೀಗ ಅದರ ಬಳಕೆಯಲ್ಲಿ ಭಾರಿ ಕುಸಿತ ಉಂಟಾಗಿದೆ.

ಟ್ವಿಟರ್​ಗೆ ಪರ್ಯಾಯ ಎಂದು ಹೇಳಲಾದ ಥ್ರೆಡ್ಸ್ ಈ ತಿಂಗಳ ಮೊದಲ ವಾರದಲ್ಲಿ ಬಿಡುಗಡೆಗೊಂಡಿದ್ದು, ಐದೇ ದಿನಗಳಲ್ಲಿ 10 ಕೋಟಿ ಸೈನ್​ಇನ್ ಕಂಡಿತ್ತು. ಆ ಮೂಲಕ ಅತಿ ಬೇಗ 10 ಕೋಟಿ ಸೈನ್​ಇನ್ ಹೊಂದಿದ ಮೊದಲ ಆ್ಯಪ್ ಎಂಬ ಖ್ಯಾತಿಗೂ ಪಾತ್ರವಾಗಿತ್ತು.

ಆದರೆ ಆರಂಭದ ಈ ಜೋಶ್ ಈಗ ಉಳಿದಿಲ್ಲ. ಥ್ರೆಡ್ಸ್​ ಸೈನ್​ಇನ್ ಆದವರ ಪೈಕಿ ಅರ್ಧಕ್ಕಿಂತಲೂ ಅಧಿಕ ಮಂದಿ ಅದನ್ನು ಬಳಸುವುದನ್ನು ನಿಲ್ಲಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಮೆಟಾ ಸಿಇಒ ಮಾರ್ಕ್​ ಜುಕರ್​​ಬರ್ಗ್​ ಕೂಡ ಕಂಪನಿಯ ಆಂತರಿಕ ಸಭೆಯಲ್ಲಿ ಕೂಡ ಇದನ್ನೇ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.

10 ಕೋಟಿಗೂ ಅಧಿಕ ಸೈನ್​ಇನ್​ ಆಗಿದ್ದೂ ಅಷ್ಟೂ ಮಂದಿ ಇಲ್ಲವೇ ಅದರ ಅರ್ಧದಷ್ಟಾದರೂ ಮಂದಿ ಬಳಕೆಯನ್ನು ಮುಂದುವರಿಸಿದರೆ ಅದು ಅದ್ಭುತ. ಆದರೆ ನಾವಿನ್ನೂ ಆ ಹಂತಕ್ಕೆ ತಲುಪಿಲ್ಲ ಎಂಬುದಾಗಿ ಮಾರ್ಕ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net