

ಮುಂಬೈ: ಸಿನಿಮಾದಲ್ಲಿ ನಟಿಸಬೇಕು ಎಂಬ ಆಸೆ ಅದೆಷ್ಟೋ ಜನರ ಕನಸು. ಕೆಲವರಂತು ಈ ಒಂದು ಮಹಾದಾಸೆಯನ್ನು ಈಡೇರಿಸಿಕೊಳ್ಳಲು ಮಾಡುವಂತ ಕಸರತ್ತು ಅಷ್ಟಿಷ್ಟಲ್ಲ. ಚಿತ್ರರಂಗಕ್ಕೆ ಎಂಟ್ರಿ ಕೊಡುವ ಮೊದಲು ಇರುವ ಜೀವನವೇ ಒಂದಾದರೆ, ಸಿನಿ ರಂಗ ಪ್ರವೇಶಿಸಿದ ಬಳಿಕವಿರುವ ಜೀವನವೇ ಬೇರೆ. ಒಂದು ಫಿಲಂನಲ್ಲಿ ನಾಯಕ ನಟನಾದರೆ, ಮುಂಬರುವ ಚಿತ್ರಗಳಲ್ಲಿ ಅವಕಾಶಗಳು ಹೆಚ್ಚುತ್ತವೆ ಹಾಗೂ ಬಾಕ್ಸ್ ಆಫೀಸ್ ಲೆಕ್ಕಾಚಾರ ಕೂಡ ಬದಲಾಗುತ್ತವೆ. ಆದರೆ, ಒಬ್ಬ ಖಳನಾಯಕನಾಗಿ ಆಯ್ಕೆಯಾಗಿ ಸಿನಿಮಾಗಳಲ್ಲಿ ಮಿಂಚಿ, ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸುವುದು ಕಷ್ಟಸಾಧ್ಯ. ಆದ್ರೆ, ಇಲ್ಲೊಬ್ಬ ಖಳನಟ ಜೈಲಿಗೆ ಹೋದರೂ ಕುಗ್ಗದೆ, ನಾಲ್ಕು ವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದರೂ ಸಹ ಸಿನಿಪ್ರೇಕ್ಷಕರನ್ನು ಮನರಂಜಿಸುವಲ್ಲಿ ವಿಫಲನಾಗದೆ, 1000 ಕೋಟಿ ರೂ. ಗಳಿಕೆ ಕಂಡ ಎರಡು ಸೂಪರ್ ಹಿಟ್ ಸಿನಿಮಾಗಳ ಮೂಲಕ ಚಿತ್ರರಂಗಕ್ಕೆ ಮರಳಿದ್ದಾರೆ.
ಬಾಲಿವುಡ್ನಲ್ಲಿ ಕಿಂಗ್ ಖಾನ್ ನಟ ಶಾರುಖ್ ಖಾನ್ ಕಳೆದ ವರ್ಷ 'ಪಠಾಣ್', 'ಜವಾನ್', 'ಡಂಕಿ' ಸಿನಿಮಾಗಳ ಮುಖೇನ ಬ್ಯಾಕ್ ಟು ಬ್ಯಾಕ್ ಸಕ್ಸಸ್ ನೋಡಿದರು. 2023ರಲ್ಲಿ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತ್ಯುತ್ತಮ ಕಮ್ಬ್ಯಾಕ್ ಮಾಡಿದ ನಟರಲ್ಲಿ ಶಾರುಖ್ ಪ್ರಮುಖರಾದರು. ಆದರೆ, ಈ ನಟ ನಾಲ್ಕು ವರ್ಷಗಳಿಂದ ಬೆಳ್ಳಿ ತೆರೆಯಿಂದ ದೂರ ಉಳಿದಿದ್ದರು. ಆದರೂ ಸಹ ಮೂರು ಹಿಟ್ ಚಿತ್ರಗಳಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ದೊಡ್ಡ ಕಮ್ಬ್ಯಾಕ್ ಮಾಡಿದರು.
ಎರಡು ಸಾರ್ವಕಾಲಿಕ ಬ್ಲಾಕ್ಬಸ್ಟರ್ ಚಿತ್ರಗಳು 1000 ಕೋಟಿ ರೂ. ಗಳಿಕೆಯನ್ನು ಮೀರಿ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿತು. ಈ ಮುಖೇನ ಬಾಲಿವುಡ್ಗೆ ಮತ್ತೊಮ್ಮೆ ದೊಡ್ಡ ಮಟ್ಟದ ಕಮ್ಬ್ಯಾಕ್ ಮಾಡಿ, ಸಿನಿರಸಿಕರಿಂದ ಸೈಎನಿಸಿಕೊಂಡ ನಟ ಬೇರಾರು ಅಲ್ಲ ಅದು ಸಂಜಯ್ ದತ್. 2022ರಲ್ಲಿ 'ಕೆಜಿಎಫ್ 2'ನಲ್ಲಿ ವಿಲನ್ ಆಗಿ ಎಂಟ್ರಿ ಕೊಟ್ಟ ಸಂಜಯ್, ವಿಭಿನ್ನ ಲುಕ್ನಲ್ಲಿ ಎಲ್ಲರ ಗಮನಸೆಳೆದರು.
ಕನ್ನಡದ ಈ ಬ್ಲಾಕ್ಬಸ್ಟರ್ ಚಿತ್ರ ಬಾಕ್ಸ್ ಆಫೀಸ್ನಲ್ಲಿ 1,200 ಕೋಟಿ ರೂ. ಗಳಿಸುವ ಮೂಲಕ ದಾಖಲೆ ಮಾಡಿತು. ಅದರ ಮುಂದಿನ ವರ್ಷ, ಶಾರುಖ್ ಅವರ 'ಜವಾನ್'ನಲ್ಲಿ ಅತಿಥಿ ಪಾತ್ರ ನಿರ್ವಹಿಸುವ ಮುಖೇನ ಮತ್ತೊಂದು ಸೂಪರ್ ಹಿಟ್ ಚಿತ್ರದಲ್ಲಿ ಕಾಣಿಸಿಕೊಂಡರು. ಇತರೆ ಬಾಲಿವುಡ್ ನಟರಿಗೆ ಹೋಲಿಸಿದರೆ ಹೆಚ್ಚು ಬಾರಿ ವೈಫಲ್ಯ ಕಂಡ ನಟ ಎಂದರೆ ಅದು ಸಂಜಯ್ ದತ್. ಕಳೆದ ವರ್ಷ ಸ್ಟ್ರಾಂಗ್ ಆಗಿ ಕಮ್ಬ್ಯಾಕ್ ಮಾಡಿದ ಇವರು, ಸದ್ಯ ಯಶಸ್ವಿ ನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ,(ಏಜೆನ್ಸೀಸ್).