More

    ಪಿಂಕ್​​ ಫ್ರಾಕ್​​​ನಲ್ಲಿ ಕಂಗೊಳಿಸಿದ ನಮ್ರತಾ ಗೌಡ; ಸ್ನೇಹಿತ್​​ ಜತೆಗೆ ಮುನಿಸು ಬೇಡ ಮಾತನಾಡಿ ಎಂದ ಫ್ಯಾನ್ಸ್​ ​..!

    ಬಿಗ್​​ಬಾಸ್​ ನಟಿ ನಮ್ರತಾ ಗವಡ ಪಿಂಕ್​ ಫ್ರಾಕ್​ ಧರಿಸಿ ಕ್ಯಾಮರಾಗೆ ಪೋಸ್​​ ಕೊಟ್ಟಿರುವಂತಹ ಪೋಟೋಗಳು ಇದೀಗ ಸೊಷಿಯಲ್​ ಮೀಡಿಯಾದಲ್ಲಿ ವೈರಲ್ ಆಗಿವೆ. ನಮ್ರತಾ ಗೌಡ ಈ ಹೊಸ ಸ್ಟೈಲ್​ ಫ್ರಾಕ್​ನಲ್ಲಿ ಬೊಂಬೆಯಂತೆ ಕಾಣಿಸಿಕೊಂಡಿದ್ದಾರೆ.

    ನಮ್ರತಾ ಬಿಗ್​ಬಾಸ್​​ ಮನೆಯಲ್ಲಿದ್ದಾಗ ಸ್ನೇಹಿತ್​​ ಮತ್ತು ಆಕೆಯ ನಡುವೆ ಪ್ರೀತಿ ಹುಟ್ಟಿತ್ತು. ಆದ್ರೆ ಸ್ನೇಹಿತ್​​ ಮತ್ತೆ ಮನೆಗೆ ಎಂಟ್ರಿ ಕೊಟ್ಟ ನಂತರದಲ್ಲಿ ಇಬ್ಬರ ಪ್ರೀತಿ ಅಂತ್ಯ ಕಂಡಿತ್ತು. ಇದಿಗ ಇವರಿಬ್ಬರ ಮದ್ಯೆ ಏನು ಸರಿ ಇಲ್ಲ ಎಂಬಂತಾಗಿದೆ. ಬಿಗ್ ಬಾಸ್ ಮನೆಯಲ್ಲಿ 100 ದಿನಗಳನ್ನು ಕಂಪ್ಲೀಟ್ ಮಾಡಿದ ನಮ್ರತಾ ಬಳಿಕ ನಾಮಿನೇಟ್​ ಆದ್ರು. ಬಿಗ್​ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಅಭಿಮಾನಿಗಳನ್ನು ರಂಜಿಸಿದ್ರು.

    ಯೂಟ್ಯೂಬ್​ ಚಾನೆಲ್​ನಲ್ಲಿ ಸದ್ದು ಮಾಡ್ತಿದ್ದ ನಮ್ರತಾ ಗೌಡ, ಇದೀಗ ಪಿಂಕ್ ಫ್ರಾರ್ಕ್​ ತೊಟ್ಟು ಮಿಂಚುತ್ತಿದ್ದಾರೆ.

    ಪಿಂಕ್ ಕಲರ್ ಡ್ರೆಸ್​ನಲ್ಲಿ ನಮ್ಮು ಬಾರ್ಬಿ ಗರ್ಲ್ ತರ ಕಾಣುತ್ತಿದ್ದಾರಾ, ಸ್ನೇಹಿತ್ ಜೊತೆ ಪ್ಲೀಸ್ ಮಾತಾಡಿ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ನಮ್ಮು ಬ್ಯೂಟಿಫುಲ್ ಎಂದು ಇನ್ನೂ ಕೆಲವರು ಕಮೆಂಟ್ ಮಾಡಿದ್ದಾರೆ.\

    ಸದ್ಯ ಸ್ನೇಹಿತ್​​ ಅವರನ್ನ ಮಾತನಾಡಿಸಿ ಅನ್ನುವಂತಹ ಕಾಮೆಂಟ್​ಗೆ ಹೆಚ್ಚಿನ ಪ್ರತಿಕ್ರಿಯೆ ಬರುತ್ತಿವೆ. ಇಬ್ಬರೂ ಇದೀಗ ಬಿಗ್​​ ಮನೆಯಿಂದ ಹೊರಗೆ ಬಂದಿದ್ದೀರಿ, ಇಬ್ಬರೂ ಮತ್ತೆ ಮುಂಚೆಯ ರೀತಿಯೇ ಫ್ರೆಂಡ್ಸ್​​ ಆಗಬೇಕು ಎಂದು ಫ್ಯಾನ್ಸ್​ ನಮ್ರತಾ ಅವರನ್ನ ಟ್ಯಾಗ್​ ಮಾಡುತ್ತಿದ್ದಾರೆ.

    ಸದ್ಯ ನಮ್ರತಾ ಮತ್ತು ಸ್ನೇಹಿತ್​​​ ಮೊದಲಿನಂತೆಯೇ ಒಂದಾಗುತ್ತಾರಾ? ಒಬ್ಬರೊನ್ನೊಬ್ಬರು ಮಾತನಾಡಿಸುತ್ತಾರಾ? ಅನ್ನೋದನ್ನ ಕಾದು ನೋಡ ಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts