More

    ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಲು ನೀರು ಕುಡಿಯೋ ಬದಲು ಈ ಹಣ್ಣುಗಳನ್ನ ಸೇವಿಸಿದ್ರೆ ಸಾಕು..!

    ಬೇಸಿಗೆಯಲ್ಲಿ ದೇಹದಿಂದ ಸಾಕಷ್ಟು ಬೆವರು ಹೊರಬರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಆರೋಗ್ಯವಾಗಿರಲು ಸಾಕಷ್ಟು ನೀರು ಕುಡಿಯುವುದು ತುಂಬಾ ಅವಶ್ಯಕ. ಆದರೆ, ಎಷ್ಟೇ ನೀರು ಕೂಡಿದರೂ ಸಾಕಾಗುವುದಿಲ್ಲ. ಈ ಸಮಸ್ಯೆಯನ್ನು ತಪ್ಪಿಸಲು, ನೀವು ಋತುಮಾನದ ಹಣ್ಣುಗಳನ್ನು ಸೇವಿಸಬಹುದು. ]

    ಬೇಸಿಗೆಯಲ್ಲಿ ಕಿತ್ತಲೆ ಹಣ್ಣನ್ನ ಹೆಚ್ಚಾಗಿ ಸೇವಿಸಬೇಕು. ಕಿತ್ತಳೆ ಹಣ್ಣಿನಲ್ಲಿರುವ ಬೀಟಾ-ಕ್ಯಾರೋಟಿನ್ ಮತ್ತು ವಿಟಮಿನ್-ಸಿ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಜತೆಗೆ ಕಿತ್ತಲೆ ಹಣ್ಣಿನ ವಿಟಮಿನ್​​ ‘ಸಿ’ ದೇಹಕ್ಕೆ ಸಾಕಷ್ಟು ಪ್ರಯೋಜನಕಾರಿ.

    ಇನ್ನು ಪವಷ್ಠಿಕಾಂಶದ ವಿಚಾರ ಬಂದ್ರೆ, ಮಾವು ತಿನ್ನಲು ತುಂಬಾ ಟೇಸ್ಟಿ ಮಾತ್ರವಲ್ಲ, ಪೌಷ್ಠಿಕಾಂಶದ ವಿಷಯದಲ್ಲಿಯೂ ಇದು ಅಗ್ರ ಸ್ಥಾನದಲ್ಲಿ ನಿಲ್ಲಲಿದೆ. ಉತ್ಕರ್ಷಣ ನಿರೋಧಕಗಳು ಮತ್ತು ಖನಿಜಗಳಿಂದ ತುಂಬಿರುವ ಮಾವು ನಿಮಗೆ ಮ್ಯಾಂಗನೀಸ್, ಕ್ಯಾಲ್ಸಿಯಂ, ಸೆಲೆನಿಯಮ್ ಮತ್ತು ಕಬ್ಬಿಣದಂತಹ ಪೋಷಕಾಂಶಗಳನ್ನು ನೀಡುತ್ತದೆ.

    ದ್ರಾಕ್ಷಿಯಲ್ಲಿ ಕಾರ್ಬೋಹೈಡ್ರೇಟ್‌ಗಳು, ಫೈಬರ್, ಸೋಡಿಯಂ, ವಿಟಮಿನ್‌ಗಳು ಮತ್ತು ಇತರ ಖನಿಜಗಳು ಸಮೃದ್ಧವಾಗಿವೆ. ದ್ರಾಕ್ಷಿಯು ದೇಹದಲ್ಲಿನ ನೀರಿನ ಕೊರತೆಯನ್ನು ನೀಗಿಸುವ ಜೊತೆಗೆ ದೇಹವನ್ನು ತಂಪಾಗಿಡುತ್ತದೆ.

    ಅನಾನಸ್ ಪ್ರೋಟೀನ್ ಮತ್ತು ಕೊಬ್ಬಿನ ಜೀರ್ಣಕ್ರಿಯೆಯಲ್ಲಿ ತುಂಬಾ ಸಹಾಯಕವಾಗಿದೆ. ಇದರಲ್ಲಿರುವ ಫೈಬರ್ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಮಾತ್ರವಲ್ಲ, ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಅನಾನಸ್ ಅನ್ನು ತಪ್ಪದೇ ಸೇವಿಸಿ.

    ಕಲ್ಲಂಗಡಿ ಹಣ್ಣು ಬೇಸಿಗೆಯಲ್ಲಿ ತಂಪಾದ ಮತ್ತು ಸಿಹಿ ಕಲ್ಲಂಗಡಿಗಿಂತ ಉತ್ತಮವಾದ ಮತ್ತೊಂದು ಹಣ್ಣಿಲ್ಲ. ಈ ಬಿಸಿ ವಾತಾವರಣದಲ್ಲಿ, ಇದು ದೇಹದಲ್ಲಿನ ನೀರಿನ ಕೊರತೆಯನ್ನು ಪೂರೈಸುತ್ತದೆ. 92 ರಷ್ಟು ನೀರಿರುವ ಈ ಹಣ್ಣು ಅತ್ಯುತ್ತಮ ಜಲಸಂಚಯನಕಾರಿ ಪದಾರ್ಥಗಳಲ್ಲಿ ಒಂದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts