ಅಡುಗೆ ತಯಾರಿಯಲ್ಲಿದ್ದ ಮಹಿಳೆಯರ ಮೇಲೇ ಬಿದ್ದ ಶಾಮಿಯಾನ; ಒಬ್ಬರ ಸಾವು, ನಾಲ್ವರಿಗೆ ಗಂಭೀರ ಗಾಯ

Tent injured woman
ಗಾಯಗೊಂಡ ಮಹಿಳೆ
Published on

ಕೊಪ್ಪಳ: ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮದ ಸಲುವಾಗಿ ಹಾಕಿದ್ದ ಶಾಮಿಯಾನ ಬಿದ್ದು ಮಹಿಳೆಯೊಬ್ಬರು ಸಾವಿಗೀಡಾಗಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಇಂಥದ್ದೊಂದು ದುರಂತ ಸಂಭವಿಸಿದೆ.

ಕೊಪ್ಪಳದ ಕಾರಟಗಿ ತಾಲೂಕಿನ ಮುಷ್ಟೂರು ಕ್ಯಾಂಪ್​ನಲ್ಲಿ ಇಂದು ಈ ಅವಘಡ ಸಂಭವಿಸಿದೆ. ಶ್ರೀನಿವಾಸ ಕಲ್ಯಾಣ ಪ್ರಯುಕ್ತ ಅಡುಗೆ ಮಾಡುವ ಜಾಗದಲ್ಲಿ ಹಾಕಿದ್ದ ಶಾಮಿಯಾನ, ಜೋರಾದ ಗಾಳಿ ಬೀಸಿದ್ದರಿಂದ ಕಿತ್ತು ಹಾರಿ ಹೋಗಿ ಅಡುಗೆಗೆ ತರಕಾರಿ ಕತ್ತರಿಸುತ್ತಿದ್ದ ಮಹಿಳೆಯರ ಮೇಲೆ ಬಿದ್ದಿದೆ.\

ಶಾಮಿಯಾನದ ಕಂಬಗಳು ಮೈಮೇಲೆ ಬಿದ್ದ ಪರಿಣಾಮವಾಗಿ ಪ್ರಗತಿನಗರ ನಿವಾಸಿ ಅಂಜಿನಮ್ಮ (45) ಸಾವಿಗೀಡಾಗಿದ್ದಾರೆ. ಇತರ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಗಂಗಾವತಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net