More

    ಸ್ಪೇಸ್​ಎಕ್ಸ್ ಇಂಜಿನಿಯರ್​ಗೆ ಲಿಂಕ್ಡ್​​ಇನ್​ನಲ್ಲಿ ‘ಸ್ಪೇಸ್’ ಇಲ್ಲ; 14ರ ಹರೆಯದಲ್ಲೇ ಭಾರಿ ಸಾಧನೆ ಮಾಡಿದಾತನ ಖಾತೆ ಬ್ಲಾಕ್​ ಮಾಡಿದ್ಯಾಕೆ?

    ನವದೆಹಲಿ: 14ರ ಹರೆಯದಲ್ಲೇ ಇಂಜಿನಿಯರಿಂಗ್ ಪದವಿ ಮುಗಿಸಿದ್ದಲ್ಲದೆ ಎಲಾನ್ ಮಸ್ಕ್ ಒಡೆತನದ ಸ್ಪೇಸ್​ಎಕ್ಸ್ ಕಂಪನಿಯಲ್ಲಿ ಜೂನಿಯರ್ ಇಂಜಿನಿಯರ್ ಆಗಿ ಕೆಲಸವನ್ನೂ ಗಿಟ್ಟಿಸಿಕೊಂಡಿರುವ ಕೈರನ್ ಖ್ವಾಜಿಗೆ ಈಗ ಒಂದು ವಿಚಿತ್ರ ಸಮಸ್ಯೆ ಎದುರಾಗಿದೆ.

    ಅದೇನೆಂದರೆ 14ರ ಹರೆಯದಲ್ಲೇ ಬಹುಮುಖ್ಯವಾದ ಉದ್ಯೋಗಾವಕಾಶ ಪಡೆದಿದ್ದರೂ ವೃತ್ತಿಪರ ಸೋಷಿಯಲ್ ಮೀಡಿಯಾ ತಾಣವಾದ ಲಿಂಕ್ಡ್​ಇನ್​ ಈತನ ಖಾತೆಯನ್ನು ಬ್ಲಾಕ್ ಮಾಡಿದೆ. ಈ ಕುರಿತು ಈತ ತನ್ನ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಅಸಮಾಧಾನ ತೋಡಿಕೊಂಡಿದ್ದಾನೆ.

    ಇದನ್ನೂ ಓದಿ: 14ರ ಪೋರ ಇನ್ನು ಎಲಾನ್ ಮಸ್ಕ್ ಒಡೆತನದ ಸಂಸ್ಥೆಯಲ್ಲಿ ಇಂಜಿನಿಯರ್!

    ನನಗೆ 16 ವರ್ಷ ಪೂರ್ಣಗೊಂಡಿಲ್ಲ ಎಂದು ಲಿಂಕ್ಡ್​ಇನ್​ನವರು ನನ್ನ ಖಾತೆಯನ್ನು ಡಿಲೀಟ್ ಮಾಡಿದ್ದಾರೆ. ನಾನು ವಿಶ್ವದ ಅತಿ ಪ್ರಮುಖ ಇಂಜಿನಿಯರಿಂಗ್ ಉದ್ಯೋಗಗಳಲ್ಲಿ ಒಂದನ್ನು ಪಡೆಯಲು ಸಾಕಷ್ಟು ಅರ್ಹನಾಗಿದ್ದರೂ ವೃತ್ತಿಪರ ಸಾಮಾಜಿಕ ಮಾಧ್ಯಮ ವೇದಿಕೆಗೆ ಪ್ರವೇಶವನ್ನು ಹೊಂದಲು ಸಾಕಷ್ಟು ಅರ್ಹತೆ ಹೊಂದಿಲ್ಲ? ಎಂದು ಲಿಂಕ್ಡ್​ಇನ್ ಸಂಸ್ಥೆಯ ನೀತಿ ಕುರಿತು ಬೇಸರ ವ್ಯಕ್ತಪಡಿಸಿದ್ದಾನೆ. ನೀವು ಇದರ ಸ್ಕ್ರೀನ್​ಶಾಟ್​ ಲಿಂಕ್ಡ್​ಇನ್​ನಲ್ಲಿ ಹಂಚಿಕೊಂಡು ಅಲ್ಲಿರುವವರು ನನ್ನ ಇನ್​ಸ್ಟಾಗ್ರಾಮ್​ಗೆ ಕನೆಕ್ಟ್​ ಆಗುವಂತೆ ಮಾಡಿ ಎಂದೂ ಕೈರನ್ ಕೇಳಿಕೊಂಡಿದ್ದಾರೆ.

    ಮೂರನೇ ಮಗುವಾದರೆ 5 ಲಕ್ಷ ರೂ. ಕೊಡ್ತಾರಂತೆ!; ಶಿಕ್ಷಣ-ಚಿಕಿತ್ಸೆಯೂ ಉಚಿತ, ಮದ್ವೆ ಖರ್ಚಿಗೂ ಧನಸಹಾಯ: ಇಲ್ಲಿದೆ ವಿವರ..

    ಇದನ್ನು ಕುಡಿದರೆ ಹೃದಯಾಘಾತದ ಸಾಧ್ಯತೆ ತೀರಾ ಕಡಿಮೆ ಅಂತೆ!; ಏನಿದು, ಎಷ್ಟು ಕುಡಿಯಬೇಕು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts