More

  ಶ್ರೀ ಸತ್ಯತೀರ್ಥ ಅನುಗ್ರಹ ಪ್ರಶಸ್ತಿಗೆ ಸತ್ಯಬೋಧಾಚಾರ್ಯ ಆಯ್ಕೆ

  ದಾವಣಗೆರೆ : ಉಡುಪಿಯ ಶ್ರೀ ಭಂಡಾರಕೇರಿ ಮಹಾ ಸಂಸ್ಥಾನ ಮಠ, ಯುವ ವಿದ್ವಾಂಸರಿಗೆ ನೀಡುವ ವಾರ್ಷಿಕ ಪ್ರಶಸ್ತಿಗೆ ಈ ಬಾರಿ ಹೊನ್ನಾಳಿಯ ಸತ್ಯಬೋಧಾಚಾರ್ಯ ಆಯ್ಕೆಯಾಗಿದ್ದಾರೆ.
   ಮಠದ ಉನ್ನತ ಮಟ್ಟದ ಸಮಿತಿಯು ಪ್ರಶಸ್ತಿಗೆ ಈ ಆಯ್ಕೆ ಮಾಡಿದೆ ಎಂದು ಪೀಠಾಧಿಪತಿ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
   ಸತ್ಯಬೋಧಾಚಾರ್ಯರು ಪ್ರಸ್ತುತ ಬಸವನಗುಡಿ ಶ್ರೀ ಜಯತೀರ್ಥ ವಿದ್ಯಾಪೀಠದಲ್ಲಿ ಪಂಡಿತರಾಗಿದ್ದಾರೆ. ಪ್ರಶಸ್ತಿಯು 50 ಸಾವಿರ ರೂ. ನಗದು, ಸನ್ಮಾನ ಪತ್ರ, ಸ್ಮರಣಿಕೆ ಒಳಗೊಂಡಿದೆ.
   ಬೆಂಗಳೂರಿನ ಗಿರಿನಗರದ ಭಾಗವತಾಶ್ರಮದಲ್ಲಿ ಮೇ 20ರಂದು ಆಯೋಜಿಸಿರುವ ರಾಷ್ಟ್ರಗುರು ಶ್ರೀ ವೇದವ್ಯಾಸ ಜಯಂತಿ,
   ಮತ್ತು ಶ್ರೀ ವಿದ್ಯಾಮಾನ್ಯ ತೀರ್ಥರ 24ನೇ ಆರಾಧನೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ಮತ್ತು ಭಂಡಾರಕೇರಿ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆಂದು ಮಠದ ಪ್ರಕಟಣೆ ತಿಳಿಸಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts