More

    ಮೂರನೇ ಮಗುವಾದರೆ 5 ಲಕ್ಷ ರೂ. ಕೊಡ್ತಾರಂತೆ!; ಶಿಕ್ಷಣ-ಚಿಕಿತ್ಸೆಯೂ ಉಚಿತ, ಮದ್ವೆ ಖರ್ಚಿಗೂ ಧನಸಹಾಯ: ಇಲ್ಲಿದೆ ವಿವರ..

    ಬೆಂಗಳೂರು: ಭಾರತ ಜಗತ್ತಿನ ಅತ್ಯಧಿಕ ಜನಸಂಖ್ಯೆಯ ದೇಶವಾಗಿ ಹೊರಹೊಮ್ಮಿದೆ. ಮತ್ತೊಂದೆಡೆ ಜನಸಂಖ್ಯೆ ಎಂಬುದು ಸಂಪನ್ಮೂಲವೋ ಸಮಸ್ಯೆಯೋ ಎಂಬ ಚರ್ಚೆಯೂ ಜಾರಿಯಲ್ಲಿದೆ. ಅದಾಗ್ಯೂ ಮೂರನೇ ಮಗುವನ್ನು ಹೊಂದುವ ದಂಪತಿಗೆ 5 ಲಕ್ಷ ರೂ. ನೀಡುವ ಬಂಪರ್ ಯೋಜನೆಯೊಂದು ಘೋಷಣೆಯಾಗಿದೆ.

    ಇಬ್ಬರು ಮಕ್ಕಳಿರುವ ದಂಪತಿಗೆ ಮೂರನೇ ಮಗುವಾದರೆ 5 ಲಕ್ಷ ರೂ. ನಗದು ನೀಡಲಾಗುವುದು. ಅದು ಗಂಡಾಗಲಿ, ಹೆಣ್ಣಾಗಲಿ.. ಆ ಮಗುವಿನ ಶಿಕ್ಷಣವನ್ನು ಸಂಪೂರ್ಣ ಉಚಿತವಾಗಿ ನೀಡಲಾಗುವುದು. ಅಲ್ಲದೆ 16ನೇ ವರ್ಷದವರೆಗಿನ ಆರೋಗ್ಯ ನಿರ್ವಹಣೆಯ ಖರ್ಚನ್ನೂ ನಾವೇ ಭರಿಸುತ್ತೇವೆ. ಅಲ್ಲದೆ, ನಂತರ ಮದುವೆಯ ವೆಚ್ಚವನ್ನೂ ನೀಡಲಾಗುವುದು ಎಂಬ ಘೋಷಣೆಯನ್ನೂ ಮಾಡಲಾಗಿದೆ.

    ಇದನ್ನೂ ಓದಿ: ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

    ಅಂದಹಾಗೆ ಇದು ದೂರದಲ್ಲೆಲ್ಲೋ ಘೋಷಣೆಯಾಗಿರುವ ಯೋಜನೆಯಲ್ಲ. ಇದು ಇಲ್ಲೇ ಬೆಂಗಳೂರಿನ ಜೈನ್ ಸಮಾಜದ ವ್ಯಕ್ತಿಯೊಬ್ಬರು ಘೋಷಣೆ ಮಾಡಿರುವ ಯೋಜನೆ. ಸಮುದಾಯದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಈ ಘೋಷಣೆಯನ್ನು ಮಾಡಿದ್ದು, ಅದರ ವಿಡಿಯೋ ಕೂಡ ಹರಿದಾಡಲಾರಂಭಿಸಿದೆ.

    ಇದನ್ನೂ ಓದಿ: ಕಾಲೇಜು ವಿದ್ಯಾರ್ಥಿಗಳೇ.. ವೀರ್ಯಾಣು ದಾನ ಮಾಡಿ: ಸ್ಪರ್ಮ್ ಬ್ಯಾಂಕ್​ಗಳಿಂದ ಹೀಗೊಂದು ಮನವಿ; ಎಲ್ಲಿ, ಏಕೆ?

    ಸಮುದಾಯದಲ್ಲಿ ಎಲ್ಲವೂ ಇದೆ. ಆದರೆ ಅದರ ರಕ್ಷಣೆಗೆ ಸಮುದಾಯದವರೇ ಇಲ್ಲದಂತಾದರೆ ಹೇಗೆ? ಎಂಬ ಆತಂಕ ವ್ಯಕ್ತಪಡಿಸಿದ ಈ ವ್ಯಕ್ತಿ, ಸಮುದಾಯದಲ್ಲಿ ಜನಸಂಖ್ಯೆ ಕ್ಷೀಣಿಸುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ಮಕ್ಕಳಾದರೆ ಖರ್ಚು ನಿಭಾಯಿಸುವುದು ಕಷ್ಟ ಎಂಬ ಕಾರಣಕ್ಕೇ ಕೆಲವರು ಮಕ್ಕಳಾಗುವುದನ್ನು ತಪ್ಪಿಸುತ್ತಿದ್ದಾರೆ. ಹೀಗಾಗಿ ನಮ್ಮ ಸಮುದಾಯದಲ್ಲಿ ಇಬ್ಬರು ಮಕ್ಕಳಿರುವ ಯಾವುದೇ ದಂಪತಿ ಮೂರನೇ ಮಗುವನ್ನು ಹೊಂದಿದರೆ ಅವರಿಗೆ 5 ಲಕ್ಷ ರೂ. ನಗದು ನೀಡಲಾಗುವುದು. ಶಿಕ್ಷಣ, ಆರೋಗ್ಯ, ಮದುವೆ ವೆಚ್ಚ ನೀಡುವ ಜತೆಗೆ, ಮುಂದೆ ಅಂಥ ಮಗು ದೀಕ್ಷೆಯನ್ನು ಪಡೆದರೆ ಅದರ ಖರ್ಚನ್ನೂ ಕೂಡ ನೀಡುವುದಾಗಿ ಘೋಷಿಸಿದ್ದಾರೆ.

    ಇದನ್ನೂ ಓದಿ: ಜನಸಂಖ್ಯೆ ಸಂಪತ್ತೋ ಆಪತ್ತೋ?; ಭಾರತ ಈಗ ಅತ್ಯಧಿಕ ಜನಸಂಖ್ಯೆಯ ದೇಶ

    ಭಾರತ ಅತ್ಯಧಿಕ ಜನಸಂಖ್ಯೆಯ ದೇಶವಾಗಿ ಹೊರಹೊಮ್ಮಿದ್ದರೂ ಕೆಲವು ಸಮುದಾಯಗಳಲ್ಲಿ ಜನಸಂಖ್ಯೆ ಕ್ಷೀಣಿಸುತ್ತಿರುವುದು ಕೂಡ ಆತಂಕಕಾರಿಯಾಗಿ ಪರಿಣಮಿಸಿದೆ. ಹೀಗಾಗಿ ಕೆಲವೊಂದು ಸಮುದಾಯದಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಲು ಇಂಥ ಯೋಜನೆ, ನಗದು ಬಹುಮಾನಗಳನ್ನು ಘೋಷಣೆ ಮಾಡಲಾಗುತ್ತಿದೆ. ಜನಸಂಖ್ಯೆ ಕುಸಿತ ಕಂಡಿರುವ ಚೀನಾದಲ್ಲಂತೂ ವೀರ್ಯದಾನ ಮಾಡುವಂತೆ ಕಾಲೇಜು ವಿದ್ಯಾರ್ಥಿಗಳನ್ನು ಕೋರಲಾಗಿದೆ.

    ಇನ್ನು ಹಾಡು ಕೇಳುತ್ತ ಸ್ನಾನ ಮಾಡಲ್ಲ ಎಂದು ಕ್ಷಮೆ ಕೋರಿದ ವಿದ್ಯಾರ್ಥಿನಿ!; ದಯವಿಟ್ಟು ಫೋನ್​ ಹಿಂದಿರುಗಿಸಿ ಎಂದು ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts