More

    ಒತ್ತಡಕ್ಕ್ಕೆ ಮಣಿಯದೆ ಕರ್ತವ್ಯ ನಿರ್ವಹಿಸಿ: ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರಸಾದ್ ವಿ.ಕುಲಕರ್ಣಿ ಸಲಹೆ

    ಮೈಸೂರು: ಯಾವುದೇ ಒತ್ತಡಕ್ಕೂ ಮಣಿಯದೆ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರಸಾದ್ ವಿ.ಕುಲಕರ್ಣಿ ಸಿಬ್ಬಂದಿಗೆ ಸಲಹೆ ನೀಡಿದರು.
    ನಗರದ ಸಿಟಿ ಸರ್ವೇ ಕಚೇರಿಯಲ್ಲಿ ಅಧೀಕ್ಷಕರ ಹುದ್ದೆಯಿಂದ ಭೂದಾಖಲೆಗಳ ಸಹಾಯಕ ನಿರ್ದೇಶಕರ ಹುದ್ದೆಗೆ ಮುಂಬಡ್ತಿ ಹೊಂದಿ ಸುಳ್ಯ ತಾಲೂಕಿಗೆ ವರ್ಗಾವಣೆಗೊಂಡ ಜಿನೇಶ್‌ಕುಮಾರ್ ಅವರಿಗೆ ಬುಧವಾರ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಇಲಾಖೆಯಲ್ಲಿ ದಿನೇ ದಿನೆ ಸಾಕಷ್ಟು ಸುಧಾರಣೆಗಳಾಗುತ್ತಿದೆ. ಅದಕ್ಕೆ ತಕ್ಕಂತೆ ಭೂಮಾಪಕರು ತಾಂತ್ರಿಕ ಕೌಶಲ್ಯ ಹೆಚ್ಚಿಸಿಕೊಳ್ಳಲು ಕಾರ್ಯಪ್ರವೃತ್ತರಾಗಿರಬೇಕು ಎಂದರು.
    ಸನ್ಮಾನ ಸ್ವೀಕರಿಸಿ ಪಿ.ಸಿ.ಜನೀಶ್‌ಕುಮಾರ್, ತನ್ನ 30 ವರ್ಷ ಸೇವೆಯಲ್ಲಿ ಕಲಿತಿರುವುದು ಕಡಿಮೆ. ಇನ್ನು ಕಲಿಯುವುದು ಇದೆ ಎಂದರು.
    ಸಹಾಯಕ ನಿರ್ದೇಶಕರಾದ ಚಿಕ್ಕಣ್ಣ, ಮಂಜುನಾಥ್, ಮೇಘಾ, ಪರ್ಯಾಯ ವೀಕ್ಷಕ ರಮೇಶ್‌ಕುಮಾರ್, ಹಿರಿಯ ಭೂ ಮಾಪಕರಾದ ಎಂ. ಕೆ.ಪ್ರಕಾಶ್, ಪ್ರೀತಮ್ ಮಾತನಾಡಿದರು.
    ಭೂದಾಖಲೆಗಳ ಉಪ ನಿರ್ದೇಶಕರಾದ ಸೀಮಂತಿನಿ (ಯುಪಿಒಆರ್), ಅಧೀಕ್ಷಕ ಕೆ.ಬಿ.ಸಿದ್ದಯ್ಯ ಎಡಿಎಲ್‌ಆರ್ ಸುಮಲತಾ, ಪರ್ಯಾಯ ವೀಕ್ಷಕರಾದ ಪ್ರವೀಣ್, ಚಂದ್ರು, ಭೂಮಾಪಕರಾದ ಕಂಚಿನಕೆರೆ ಇ.ದೇವರಾಜು, ಜಯಬೋರೇಗೌಡ, ನಿಂಗಪ್ಪನಾಯಕ ಜಯಪಾಲ್, ನಾಗೇಂದ್ರ ಕುಮಾರ್, ಉಮಾ, ಪದ್ಮಾ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts