ಪ್ರಧಾನಿ ಮೋದಿ ಆಗಮಿಸಿದ್ದ ಹೆಲಿಕಾಪ್ಟರ್​ನಲ್ಲಿ ತಾಂತ್ರಿಕ ದೋಷ!

Helicopter
Published on

ಬಾಗಲಕೋಟೆ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಚುನಾವಣಾ ಪ್ರಚಾರಾರ್ಥ ಬಾದಾಮಿಗೆ ಬಂದಿದ್ದು, ಅವರು ಆಗಮಿಸಿದ್ದ ಹೆಲಿಕಾಪ್ಟರ್​ನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಬೆಂಗಳೂರು ರೋಡ್ ಶೋ ಮುಗಿಸಿ ಬಾದಾಮಿಗೆ ಬಂದಾಗ ಈ ಘಟನೆ ನಡೆದಿದೆ.

ಬಾದಾಮಿ ಹೆಲಿಪ್ಯಾಡ್​​ಗೆ ಬಂದಿಳಿದಿದ್ದ ಎಂಐ 17 ಹೆಲಿಕಾಪ್ಟರ್​​ನಲ್ಲಿ ಈ ದೋಷ ಕಂಡುಬಂದಿದೆ. ಹೀಗಾಗಿ ಕಾರ್ಯಕ್ರಮ ಮುಗಿದ ಬಳಿಕ ಪ್ರಧಾನಿ ಮೋದಿ ಮತ್ತೊಂದು ಸೇನಾ ಹೆಲಿಕಾಪ್ಟರ್​ನಲ್ಲಿ ಹಾವೇರಿಗೆ ತೆರಳಿದರು.

ಪ್ರಧಾನಿ ಆಗಮಿಸಿದ್ದ ಹೆಲಿಕಾಪ್ಟರ್ ಜೊತೆಗೆ ಎರಡು ಬೆಂಗಾವಲು ಹೆಲಿಕಾಪ್ಟರ್​ಗಳು ಬಂದಿದ್ದವು. ತಾಂತ್ರಿಕ ದೋಷ ಉಂಟಾದ ಹೆಲಿಕಾಪ್ಟರ್​ ಬಾದಾಮಿ ಹೆಲಿಪ್ಯಾಡ್​ನಲ್ಲೇ ನಿಂತಿದೆ. ಮೋದಿ ಇನ್ನೊಂದು ಹೆಲಿಕಾಪ್ಟರ್​ನಲ್ಲಿ ತೆರಳಿದ್ದು, ಬೆಂಗಾವಲು ಸಿಬ್ಬಂದಿಯನ್ನು ಕರೆದೊಯ್ಯಲು ಮತ್ತೊಂದು ಹೆಲಿಕಾಪ್ಟರ್ ಬಂದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net