

ಪ್ರತಾಪಗಢ: ನರ್ಸಿಂಗ್ ಹೋಂನಲ್ಲಿ ಕಿಡ್ನಿಸ್ಟೋನ್ ಆಪರೇಷನ್ ಬಳಿಕ ಕಿಡ್ನಿಯೇ ನಾಪತ್ತೆಯಾಗಿರುವ ಆರೋಪ ಉತ್ತರ ಪ್ರದೇಶದ ಪ್ರತಾಪಗಢದಲ್ಲಿ ಬೆಳಕಿಗೆ ಬಂದಿದೆ.
ಜಿಲ್ಲೆಯ ಲಾಲ್ಗಂಜ್ ಕೊಟ್ವಾಲಿ ಪ್ರದೇಶದ ದೇವಪುರ್ ಚೌಕರ್‌ನಲ್ಲಿ ವಾಸಿಸುವ ಸಂಗೀತಾ ವರ್ಮಾ ತನ್ನ 18 ವರ್ಷದ ಮಗ ಸಚಿನ್ಗೆ ನಗರದ ನರ್ಸಿಂಗ್ ಹೋಂನಲ್ಲಿ ಕಿಡ್ನಿಸ್ಟೊನ್ ಆಪರೇಷನ್ ಮಾಡಿಸಿದ್ದರು. ಆ ಬಳಿಕ ಔಷಧಿಗಳನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳುವಂತೆ ಹೇಳಿ ಆತನನ್ನು ಡಿಸ್ಚಾರ್ಜ್ ಮಾಡಲಾಗಿತ್ತು. ಮನೆಗೆ ತೆರಳಿದ ಹಲವು ದಿನಗಳವರೆಗೆ ಬಾಲಕ ಚೆನ್ನಾಗಿಯೇ ಇದ್ದ.
ಆದರೆ ಈ ನಡುವೆ ಔಷಧಿ ನಿಲ್ಲಿಸಿದ ನಂತರ ಆತನಿಗೆ ಆತನಿಗೆ ಮತ್ತೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಆಗ ಆತ ಎರಡು ವಿಭಿನ್ನ ಕೇಂದ್ರಗಳಲ್ಲಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡಿಸಿಕೊಂಡಿದ್ದಾನೆ. ಈ ವೇಳೆ ಆತನ ಒಂದು ಕಿಡ್ನಿ ಇಲ್ಲದಿರುವುದು ಕಂಡುಬಂದಿದೆ. ನೊಂದ ಕುಟುಂಬಸ್ಥರು ಕೊತ್ವಾಲಿ ಪೊಲೀಸರಿಗೆ ಈ ಕುರಿತು ದೂರು ನೀಡುವ ಮೂಲಕ ಕ್ರಮಕ್ಕೆ ಆಗ್ರಹಿಸಿದ್ದು, ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದ್ದರು.
ಕೊನೆಗೆ ಕುಟುಂಬಸ್ಥರು ಶನಿವಾರ ಸಂಬಂಧಿಕರು ಎಸ್ಪಿ ಕಚೇರಿಯಲ್ಲಿ ದೂರು ದಾಖಲಿಸಿದ್ದು, ಆಪರೇಷನ್ ನಡೆಸಿದ ವೈದ್ಯರನ್ನು ತನಿಖೆಗೆ ಒಳಪಡಿಸಲಾಗಿದೆ. ಈ ಕುರಿತು ವೈದ್ಯರು ಪ್ರತಿಕ್ರಿಯೆ ನೀಡಿದ್ದು, ರೋಗಿಯು ಆಪರೇಷನ್‌ಗಾಗಿ ಆಸ್ಪತ್ರೆಗೆ ಬಂದಾಗ ಅವನ ಮೂತ್ರಪಿಂಡವು ಕುಗ್ಗಿತ್ತು. ಆಪರೇಷನ್ ಬಳಿಕ ಮತ್ತಷ್ಟು ಕುಗ್ಗಿರಬೇಕು. ಅದಕ್ಕಾಗಿಯೇ ಅಲ್ಟ್ರಾಸೌಂಡ್ ಪರೀಕ್ಷೆಯಲ್ಲಿ ಇದು ಗೋಚರಿಸುವುದಿಲ್ಲ. ಎಂಆರ್‌ಐನಲ್ಲಿ ಮೂತ್ರಪಿಂಡವು ಖಂಡಿತವಾಗಿಯೂ ಗೋಚರಿಸುತ್ತದೆ ಎಂದು ಹೇಳಿದ್ದಾರೆ.(ಏಜೆನ್ಸೀಸ್)