ಆಕೆ ಅವನನ್ನು ರಾತ್ರಿಯಿಡೀ ಮಾತನಾಡಿಸುತ್ತಲೇ ಇದ್ದಳು: ಬೆಳಿಗ್ಗೆ ಎದ್ದಾಗ ಗೊತ್ತಾಯ್ತು ಆತ ಮೃತಪಟ್ಟಿದ್ದಾನೆಂದು..

madhyapradesh
Published on

ಜಬಲ್‌ಪುರ: ಮೃತ ಪತಿಯೊಂದಿಗೆ ಪತ್ನಿಯೊಬ್ಬಳು ರಾತ್ರಿಯಿಡೀ ಏಕಪಕ್ಷೀಯವಾಗಿ ಮಾತನಾಡಿನಾರುವ ಮನಸ್ಸನ್ನು ಕಲಕುವ ಘಟನೆಯೊಂದು ಬೆಳಕಿಗೆ ಬಂದಿದ್ದು, ಮಧ್ಯಪ್ರದೇಶದ ಸಾಂಸ್ಕೃತಿಕ ನಗರಿ ಜಬಲ್‌ಪುರದಲ್ಲಿ ನಡೆದಿದೆ.

ಮಾಯಾ ಠಾಕೂರ್​ ಮತ್ತು ಆಕೆಯ ಪತಿ ಶಂಕರ್​ ಹಲವು ವರ್ಷಗಳಿಂದ ಫುಟ್‌ಪಾತ್‌ನಲ್ಲಿ ಜೀವನ ಸಾಗಿಸುತ್ತಿದ್ದರು. ಅನೇಕ ವರ್ಷಗಳಿಂದ ಫುಟ್‌ಪಾತ್‌ನಲ್ಲಿಯೇ ತಮ್ಮ ಜೀವನ ನಡೆಸುತ್ತಿದ್ದು, ಮಹಿಳೆಯು ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್​​ನಲ್ಲಿ ವಾಸವಾಗಿರುವ ವಿದ್ಯಾರ್ಥಿನಿಯರಿಗೆ ಮಹಿಳೆ ಅಡುಗೆ ಮಾಡಿಕೊಟ್ಟು ಬಂದ ಆದಾಯದಲ್ಲಿ ಜೀವನ ಸಾಗಿಸುತ್ತಿದ್ದಳು.

ಆದರೆ ಶುಕ್ರವಾರ ರಾತ್ರಿ ಈ ವೃದ್ಧ ದಂಪತಿಯ ಪತಿಯು ಮಲಗಿದ್ದಲ್ಲೇ ನಿಧನವಾಗಿದ್ದು, ಆಕೆಗೆ ತನ್ನ ಪತಿ ಸತ್ತಿದ್ದಾನೆ ಎಂಬುದೇ ತಿಳಿದಿರಲಿಲ್ಲ. ಮಹಿಳೆ ರಾತ್ರಿಯಿಡೀ ತನ್ನ ಸತ್ತ ಪತಿಯೊಂದಿಗೆ ಕುಳಿತು ಮಾತನಾಡುತ್ತಿದ್ದಳು. ಕೊನೆಗೆ ಬೆಳಗು ಮುಂಜಾನೆ ಪತಿ ಪ್ರತಿಕ್ರಿಯಿಸದಿದ್ದನ್ನು ಕಂಡು ಆಕೆ ಆತನ ಬಳಿ ತೆರಳಿದಾಗ ಆತ ಸುಮ್ಮನಿರುವುದನ್ನು ಕಂಡು ಆಘಾತಕ್ಕೆ ಒಳಗಾಗಿ ಅವನ ಪಕ್ಕದಲ್ಲಿಯೇ ಕುಳಿತಿದ್ದಾಳೆ.

ಕೂಡಲೇ ಅಕ್ಕಪಕ್ಕದ ಜನರು ಈ ಮಾಹಿತಿಯನ್ನು ಪೊಲೀಸರಿಗೆ ಹಾಗೂ ಸಾಮಾಜಿಕ ಕಾರ್ಯಕರ್ತರಿಗೆ ತಿಳಿಸಿದ್ದಾರೆ. ಪತಿಯ ಅಂತ್ಯಕ್ರಿಯೆಗೂ ಮಹಿಳೆ ಬಳಿ ಹಣವಿರದ ಕಾರಣ ಸಮಾಜ ಸೇವಕರು ಪತಿಯ ಅಂತಿಮ ಸಂಸ್ಕಾರ ನೆರವೇರಿಸಿದ್ದು, ಪತಿಯ ಮರಣದ ನಂತರ ಮಾಯಾ ಠಾಕೂರ್ ಈಗ ಅನಾಥಳಾಗಿ ಅಸಹಾಯಕಳಾಗಿದ್ದಾಳೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net