ಕಿಚ್ಚ ಸುದೀಪ್​-ಎಂ.ಎನ್.ಕುಮಾರ್ ಸಂಘರ್ಷ ಮತ್ತಷ್ಟು ತೀವ್ರ; ನಾಳೆ ನಿರ್ಮಾಪಕ ಕುಮಾರ್ ಧರಣಿ

M N Kumar, Kichcha Sudeep
ಎಂ.ಎನ್.ಕುಮಾರ್, ಕಿಚ್ಚ ಸುದೀಪ್
Published on

ಬೆಂಗಳೂರು: ನಟ-ನಿರ್ದೇಶಕ ಕಿಚ್ಚ ಸುದೀಪ್ ಮತ್ತು ನಿರ್ಮಾಪಕ ಎಂ.ಎನ್.ಕುಮಾರ್ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಇದು ಇನ್ನೊಂದು ಹಂತಕ್ಕೆ ತಲುಪಿ ತಾರಕಕ್ಕೆ ಹೋಗುವ ಲಕ್ಷಣಗಳು ಗೋಚರಿಸುತ್ತಿವೆ. ಆ ನಿಟ್ಟಿನಲ್ಲಿ ನಾಳೆ ಪ್ರಮುಖ ಬೆಳವಣಿಗೆಯೊಂದು ಆಗಲಿದೆ.

ಅರ್ಥಾತ್, ತಮ್ಮಿಬ್ಬರ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಎಂ.ಎನ್. ಕುಮಾರ್ ಧರಣೆ ನಡೆಸಲು ಮುಂದಾಗಿದ್ದಾರೆ. ನಾಳೆ ಬೆಳಗ್ಗೆ 11ಕ್ಕೆ ಅವರು ಕರ್ನಾಟಕ ಫಿಲಂ ಚೇಂಬರ್ ಮುಂದೆ ಧರಣಿ ಕೂರಲಿದ್ದಾರೆ. ಕುಮಾರ್​ಗೆ ಇನ್ನೂ ಕೆಲವು ನಿರ್ಮಾಪಕರು ಜೊತೆಯಾಗಲಿದ್ದಾರೆ ಎನ್ನಲಾಗಿದೆ.

ಸುದೀಪ್ ಹಣ ತೆಗೆದುಕೊಂಡೂ ಸಿನಿಮಾ ಮಾಡಲು ಮುಂದೆ ಬರುತ್ತಿಲ್ಲ ಎಂದು ನಿರ್ಮಾಪಕ ಎಂ.ಎನ್.ಕುಮಾರ್ ಆರೋಪ ಮಾಡುವ ಮೂಲಕ ವಿವಾದ ಭುಗಿಲೆದ್ದಿತ್ತು. ಬಳಿಕ ಈ ಸಂಬಂಧ ಕುಮಾರ್​ಗೆ ಸುದೀಪ್ ಲೀಗಲ್ ನೋಟಿಸ್ ಜಾರಿ ಮಾಡಿದ್ದರು. ನಂತರ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು, ಸುದೀಪ್​ ಈ ಪ್ರಕರಣವನ್ನು ನ್ಯಾಯಾಲಯದಲ್ಲೇ ಬಗೆಹರಿಸಿಕೊಳ್ಳಲು ಬಿಡಿ ಎಂದು ಫಿಲಂ ಚೇಂಬರ್ ಮತ್ತು ನಿರ್ಮಾಪಕರ ಸಂಘದವರಿಗೆ ತಿಳಿಸಿದ್ದರು. ಈ ಎಲ್ಲದರ ನಡುವೆ ಕುಮಾರ್ ಧರಣಿ ನಡೆಸಲು ಮುಂದಾಗಿರುವುದು ಪ್ರಕರಣ ತಾರಕಕ್ಕೇರುವ ಸಾಧ್ಯತೆಗಳನ್ನು ತೋರಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net