More

    ಆಂಜನೇಯ ದೇವಳದ ಹುಂಡಿಯಲ್ಲಿ ನೇಪಾಳದ ಕರೆನ್ಸಿ; ‘ಸಾಲ ಮಾಡಿದ್ದೇನೆ, ಪರಿಹಾರ ತೋರು’ ಎಂದು ಚೀಟಿ ಬರೆದು ಕೋರಿದ ಭಕ್ತ

    ವಿಜಯಪುರ: ನಿಡಗುಂದಿ ತಾಲೂಕಿನ ಸುಕ್ಷೇತ್ರ ಯಲಗೂರಿನ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಆರಂಭವಾಗಿದ್ದು, ನೇಪಾಳದ ಕರೆನ್ಸಿ ಕೂಡ ಪತ್ತೆಯಾಗಿದೆ. ಮಾತ್ರವಲ್ಲ, ತರಹೇವಾರಿ ಬೇಡಿಕೆಗಳಿರುವ ಚೀಟಿಗಳೂ ಸಿಕ್ಕಿವೆ.

    ಜಾಗೃತ ದೇವರೆಂದೇ ಖ್ಯಾತಿಯಾಗಿರುವ ಶ್ರೀಯಲಗೂರ ಆಂಜನೇಯ ದೇವಸ್ಥಾನದಲ್ಲಿ ನಿಡಗುಂದಿ ತಹಶೀಲ್ದಾರ್ ಕಿರಣಕುಮಾರ ನೇತೃತ್ವದಲ್ಲಿ ಆಂಜನೇಯ ದೇವಸ್ಥಾನದ ಆಡಳಿತ ಮಂಡಳಿ ಹುಂಡಿ ಎಣಿಕೆ ಕಾರ್ಯದಲ್ಲಿ ತೊಡಗಿದ್ದಾರೆ.

    ಇದನ್ನೂ ಓದಿ: ಸ್ಪೆಷಲ್​ ಮಸಾಲೆ ದೋಸೆ ಜತೆ ಸಾಂಬಾರ್ ನೀಡದ್ದಕ್ಕೆ ಹೋಟೆಲ್ ಮಾಲೀಕರಿಗೆ 3,500 ರೂ. ದಂಡ!

    ಈ ವೇಳೆ ಹುಂಡಿಯಲ್ಲಿ ನೇಪಾಳ ದೇಶದ ಕರೆನ್ಸಿಗಳು ಪತ್ತೆಯಾಗಿವೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಬರೆದ ಪತ್ರಗಳೂ ಲಭಿಸಿವೆ. ಒಬ್ಬರು ನನ್ನನ್ನು ಪಿಎಸ್ಐ ಮಾಡು ಎಂದು ಚೀಟಿ ಮೂಲಕ ದೇವರಲ್ಲಿ ಕೇಳಿಕೊಂಡಿದ್ದಾರೆ. ಎಸ್​ಡಿಎ ಸೇರಿದಂತೆ ಇತರ ಸರ್ಕಾರಿ ನೌಕರಿಗಾಗಿಯೂ ಬೇಡಿಕೆ ಸಲ್ಲಿಸಲಾಗಿದೆ. ಇನ್ನೊಬ್ಬರು ಸಾಲ ಮಾಡಿದ್ದೇನೆ, ಪರಿಹಾರ ತೋರಿಸು ಎಂದು ಪತ್ರ ಬರೆದಿದ್ದಾರೆ. ಎಣಿಕೆ ಕಾರ್ಯ ಮುಂದುವರಿದಿದ್ದು, ಕೊಟ್ಟು ಎಷ್ಟು ಹಣ ಸಂಗ್ರಹವಾಗಿದೆ ಎಂಬ ಮಾಹಿತಿ ತಡರಾತ್ರಿ ಲಭ್ಯವಾಗಲಿದೆ.

    ಎದೆಹಾಲಿನಿಂದಲೇ ಗಿನ್ನೆಸ್ ದಾಖಲೆ ಮಾಡಿದ ಮಹಾತಾಯಿ!; ಇಷ್ಟೊಂದು ಎದೆಹಾಲು ಇದುವರೆಗೆ ಯಾರೂ ಕೊಟ್ಟಿಲ್ಲ!

    ತಂದೆ-ತಾಯಿಯಿಂದ ದೂರ ಮಾಡಿದ್ದಕ್ಕೆ ಪತ್ನಿಯನ್ನೇ ಕೊಲೆ ಮಾಡಿಸಲು ಮುಂದಾದ ಪತಿ: ಆರು ತಿಂಗಳ ಬಳಿಕ ಆಗಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts