More

    ಸ್ಪೆಷಲ್​ ಮಸಾಲೆ ದೋಸೆ ಜತೆ ಸಾಂಬಾರ್ ನೀಡದ್ದಕ್ಕೆ ಹೋಟೆಲ್ ಮಾಲೀಕರಿಗೆ 3,500 ರೂ. ದಂಡ!

    ನವದೆಹಲಿ: ಸ್ಪೆಷಲ್ ಮಸಾಲೆ ದೋಸೆ ಜತೆ ಸಾಂಬಾರ್ ನೀಡಲಿಲ್ಲ ಎಂಬ ಕಾರಣಕ್ಕೆ ಹೋಟೆಲ್ ಮಾಲೀಕರೊಬ್ಬರು 3,500 ರೂ. ದಂಡ ತೆರಬೇಕಾದ ಪರಿಸ್ಥಿತಿ ಬಂದಿದೆ. ಅಲ್ಲದೆ ನಿಗದಿತ ಅವಧಿಯೊಳಗೆ ದಂಡ ಪಾವತಿಸದಿದ್ದರೆ ಅದಕ್ಕೆ ಶೇ. 8 ಬಡ್ಡಿ ಸೇರಿಸಿ ಕೊಡಬೇಕಾಗುತ್ತದೆ ಎಂದೂ ಆದೇಶ ಮಾಡಲಾಗಿದೆ.

    ವಕೀಲ ಮನೀಶ್ ಗುಪ್ತಾ ಎಂಬವರು ದಾಖಲಿಸಿದ್ದ ಪ್ರಕರಣದ ಹಿನ್ನೆಲೆಯಲ್ಲಿ ಈ ದಂಡ ವಿಧಿಸಲಾಗಿದೆ. ಮನೀಶ್ ತಮ್ಮ ಜನ್ಮದಿನದ ಸಲುವಾಗಿ ನಮಕ್ ರೆಸ್ಟೋರೆಂಟ್ ಎಂಬ ಹೋಟೆಲೊಂದರಲ್ಲಿ ಪಾರ್ಟಿ ಆಯೋಜಿಸಿದ್ದರು. ಅಲ್ಲಿ ಎಲ್ಲ ಗೆಳೆಯರಿಗೂ ಸ್ಪೆಷಲ್ ಮಸಾಲೆ ದೋಸೆ ಆರ್ಡರ್ ಮಾಡಿದ್ದರು. ಆ ದೋಸೆಯೊಂದಕ್ಕೆ 140 ರೂಪಾಯಿ ಬೆಲೆ. ಆದರೆ ದೋಸೆ ಜೊತೆಗೆ ಸಾಂಬಾರ್ ನೀಡದ್ದಕ್ಕೆ ಕೋಪಗೊಂಡು ಕೌಂಟರ್ ಬಳಿ ಹೋಗಿ ಮನೀಶ್ ಪ್ರಶ್ನೆ ಮಾಡಿದ್ದರು.

    ಇದನ್ನೂ ಓದಿ: ನಾಳೆ ವಿಶ್ವ ಕುಂದಾಪುರ ಕನ್ನಡ ದಿನಾಚರಣೆ; ಈ ಸಂಭ್ರಮದಲ್ಲಿ ಇದೇ ಮೊದಲ ಸಲ ಸಿಎಂ ಉಪಸ್ಥಿತಿ!

    ಆದರೆ ಇದಕ್ಕೆ ಮಾಲೀಕರು ಸರಿಯಾಗಿ ಸ್ಪಂದಿಸಲಿಲ್ಲ. ಅಲ್ಲದೆ 140 ರೂಪಾಯಿಗೆ ನೀನೇನು ಹೋಟೆಲ್ ಖರೀದಿಸ್ತಿಯಾ? ಎಂದು ಉಡಾಫೆಯಾಗಿ ಉತ್ತರಿಸಿದ್ದರು. ಇದರಿಂದ ಸಿಟ್ಟಾದ ಮನೀಶ್ ಹೋಟೆಲ್ ಮಾಲೀಕರಿಗೆ ಲೀಗಲ್ ನೋಟಿಸ್ ಜಾರಿ ಮಾಡಿದ್ದರು. ಆದರೆ ಆತ ಅದಕ್ಕೂ ಉತ್ತರಿಸಿರಲಿಲ್ಲ. ಆದ್ದರಿಂದ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದರು.

    ಇದನ್ನೂ ಓದಿ: ಯಂಗ್​ ಆಗಿಯೇ ಇರಲು ಕೋಟ್ಯಂತರ ರೂ. ಖರ್ಚು ಮಾಡಿದ, ಮಗನ ರಕ್ತ ತನ್ನ ದೇಹಕ್ಕೆ ಸೇರಿಸಿಕೊಂಡ: ಕೊನೆಗೆ ಆಗಿದ್ದೇನು?

    ಗ್ರಾಹಕ ಆಯೋಗದ ಅಧ್ಯಕ್ಷ ವೇದ್ ಪ್ರಕಾಶ್ ಸಿಂಗ್ ಮತ್ತು ಸದಸ್ಯ ವರುಣ್ ಕುಮಾರ್ ಅವರ ವಿಭಾಗೀಯ ಪೀಠವು ಪ್ರಕರಣ ನಡೆದ 11 ತಿಂಗಳ ಬಳಿಕ ಹೋಟೆಲ್ ಮಾಲೀಕರನ್ನು ತಪ್ಪಿತಸ್ಥರೆಂದು ಪರಿಗಣಿಸಿ 3,500 ರೂ. ದಂಡ ವಿಧಿಸಿದ್ದಾರೆ. ಹೋಟೆಲ್ ಮಾಲೀಕರಿಂದ ಅರ್ಜಿದಾರರಿಗೆ ಮಾನಸಿಕ, ದೈಹಿಕ ಮತ್ತು ಆರ್ಥಿಕ ಯಾತನೆ ಉಂಟಾಗಿದೆ ಎಂದು ಆಯೋಗ 3,500 ರೂ. ದಂಡ ವಿಧಿಸಿದೆ. ಆ ಪೈಕಿ 2 ಸಾವಿರ ರೂ. ದಂಡದ ಮೊತ್ತವಾಗಿದ್ದು, ಪ್ರಕರಣದ ಖರ್ಚಿನ ಬಾಬ್ತು 1,500 ರೂ. ನೀಡುವಂತೆಯೂ ಸೂಚಿಸಲಾಗಿದೆ. ಅಂದಹಾಗೆ ಈ ಪ್ರಕರಣ ಬಿಹಾರದ ಬುಕ್ಸಾರ್​ನ ನಮಕ್ ರೆಸ್ಟೋರೆಂಟ್​ನಲ್ಲಿ 2022ರ ಆ. 15ರಂದು ನಡೆದಿತ್ತು. ಅದಾಗಿ ಹನ್ನೊಂದು ತಿಂಗಳ ಬಳಿಕ ಇತ್ಯಾರ್ಥಗೊಂಡಿದೆ. –ಏಜೆನ್ಸೀಸ್

    ಎದೆಹಾಲಿನಿಂದಲೇ ಗಿನ್ನೆಸ್ ದಾಖಲೆ ಮಾಡಿದ ಮಹಾತಾಯಿ!; ಇಷ್ಟೊಂದು ಎದೆಹಾಲು ಇದುವರೆಗೆ ಯಾರೂ ಕೊಟ್ಟಿಲ್ಲ!

    ತಂದೆ-ತಾಯಿಯಿಂದ ದೂರ ಮಾಡಿದ್ದಕ್ಕೆ ಪತ್ನಿಯನ್ನೇ ಕೊಲೆ ಮಾಡಿಸಲು ಮುಂದಾದ ಪತಿ: ಆರು ತಿಂಗಳ ಬಳಿಕ ಆಗಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts