More

    ಜ್ಞಾನ ನೀಡದ ಶಿಕ್ಷಣ ಅಪ್ರಯೋಜಕ

    ಚಿತ್ರದುರ್ಗ: ಸ್ಪರ್ಧಾತ್ಮಕ ಯುಗದಲ್ಲಿ ಸ್ವಾವಲಂಬಿ ಜೀವನಕ್ಕೆ ಶಿಕ್ಷಣ ಅಗತ್ಯ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ. ಸಿ.ಸೋಮಶೇಖರ್ ಹೇಳಿದರು.
    ನಗರದ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ‘ಹತ್ತು ಬೆಳದಿಂಗಳು’ವಿಶೇಷ ಕಾರ್ಯಕ್ರಮ, ಪ್ರಥಮ ಬಿಇಡಿ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ, ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
    ಶಿಕ್ಷಣದಿಂದ ಮಾತ್ರ ಮನುಷ್ಯ ಚಾರಿತ್ರ್ಯವಂತನಾಗಿ ಬದುಕಬಹುದು. ಜ್ಞಾನ ದೊರೆಯದ ಶಿಕ್ಷಣದಿಂದ ಏನೂ ಪ್ರಯೋಜನ ವಿಲ್ಲ. ಶಿಕ್ಷಣ ಜೀವನದಲ್ಲಿ ಶಿಸ್ತು ಕಲಿಸುತ್ತದೆ. ಜೀವನದಲ್ಲಿ ನಾವು ಎಷ್ಟೇ ಎತ್ತರಕ್ಕೆ ಹೋದರೂ ಪಾಲಕರನ್ನು ಮರೆಯಬಾರದು ಎಂದರು.
    ಬಿಇಡಿ ವಿಶೇಷವಾದ ಕೋರ್ಸ್, ಮಕ್ಕಳ ಬದುಕನ್ನು ರೂಪಿಸುವ ಶಕ್ತಿ ಶಿಕ್ಷಕರಲ್ಲಿ ಇರಬೇಕು. ಶಿಕ್ಷಕ ವೃತ್ತಿ ತೃಪ್ತಿ ತರಬೇಕು. ಶಿಕ್ಷಕರಲ್ಲೂ ಪ್ರತಿಭೆಯಿರಬೇಕು. ಏಕೆಂದರೆ ಈಗಿನ ಮಕ್ಕಳಲ್ಲಿ ಅಗಾಧ ಬುದ್ದಿವಂತಿಕೆಯಿರುತ್ತದೆ. ಪದವಿ ಮುಖ್ಯವಲ್ಲ, ಸಾಮಾನ್ಯ ಜ್ಞಾನವೂ ಅಗತ್ಯ. ಆದರ್ಶ ಶಿಕ್ಷಕನಿಂದ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಸಾಧ್ಯ. ಸ್ಪರ್ಧಾತ್ಮಕ ಪರೀಕ್ಷೆ ಬರೆದು ಉನ್ನತ ಮಟ್ಟದ ಅಧಿಕಾರಿ ಆಗುವ ಅವಕಾಶಗಳೂ ಇವೆ ಎಂದರು.
    ದಾವಣಗೆರೆ ವಿಶ್ವವಿದ್ಯಾನಿಲಯದ ಶಿಕ್ಷಣ ನಿಕಾಯದ ಮುಖ್ಯಸ್ಥ ಡಾ.ಕೆ. ವೆಂಕಟೇಶ್ ಮಾತನಾಡಿ, ಶಿಕ್ಷಣ ಸಂಸ್ಥೆ ಕಟ್ಟುವುದು ಸುಲಭವಲ್ಲ, ಸರ್ಕಾರ, ಸಮಾಜ, ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರ ಪಾತ್ರವೂ ಮುಖ್ಯವಾಗಿದೆ ಎಂದರು.
    ಮುರುಘಾಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಾಪೂಜಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಕೆ.ಎಂ. ವೀರಶ್ ಅಧ್ಯಕ್ಷತೆ ವಹಿಸಿದ್ದರು.
    ನಿವೃತ್ತ ಪ್ರಾಧ್ಯಾಪಕ ಡಾ.ಎಂ.ಕೆ. ಪ್ರಭುದೇವ್, ಬಾಪೂಜಿ ಸಮೂಹ ಸಂಸ್ಥೆಗಳ ನಿರ್ದೇಶಕ ಕೆ.ಎಂ. ಚೇತನ್, ಬಾಪೂಜಿ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಚಾರ‌್ಯೆ ಪ್ರೊ.ಎಂ.ಆರ್. ಜಯಲಕ್ಷ್ಮೀ, ಉಪ ಪ್ರಾಂಶುಪಾಲ ಪ್ರೊ.ಎಚ್.ಎನ್. ಶಿವಕುಮಾರ್, ಹಂಪಯ್ಯ, ಹೊನ್ನಲಿಂಗಯ್ಯ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts