ಟಾಲಿವುಡ್​ ನಟಿಯರ ಹಿನ್ನಡೆಗೆ ಸ್ಟೈಲಿಶ್ ಸ್ಟಾರ್​ ಬೇಸರ; ಶ್ರೀಲೀಲಾ ಕೈಯಲ್ಲಿವೆ ಬರೋಬ್ಬರಿ 10 ಚಿತ್ರಗಳು!

Untitled design - 2023-07-23T095708.586
Published on

ಆಂಧ್ರಪ್ರದೇಶ: ಟಾಲಿವುಡ್​​ ಅಂಗಳದಲ್ಲಿ ಸ್ಯಾಂಡಲ್​ವುಡ್​ ಚಿತ್ರರಂಗದ ನಟಿ ಶ್ರೀಲೀಲಾ ಹೆಸರು ಮುಂಚೂಣಿಯಲ್ಲಿದ್ದು, ಬರೋಬ್ಬರಿ 10 ಸಿನಿಮಾಗಳಲ್ಲಿ ಟಾಪ್​ ನಟರಿಗೆ ಇವರೇ ನಾಯಕಿಯಾಗಿ ಕಾಣಿಸಿಕೊಳ್ಳುವ ಮುಖೇನ ಟಾಲಿವುಡ್​ನಲ್ಲಿ ಇದೀಗ ಹೊಸ ಅಲೆಯನ್ನೇ ಸೃಷ್ಟಿಸಿದ್ದಾರೆ.

ಕನ್ನಡ ಚಿತ್ರರಂಗದ ನಟಿ ಶ್ರೀಲೀಲಾ ಇದೀಗ ಟಾಲಿವುಡ್​​ ಅಂಗಳದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ತೆಲುಗು ಚಿತ್ರರಂಗದ ಸ್ಟಾರ್​ ನಟರ ಜತೆ ತೆರೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ಬರೋಬ್ಬರಿ 10 ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿರುವ ಶ್ರೀಲೀಲಾ, ಟಾಲಿವುಡ್​​ನ ಖ್ಯಾತ ಹಿರೋಯಿನ್​​ಗಳನ್ನು ಹಿಂದಿಕ್ಕುವಲ್ಲಿ ಪ್ರಮುಖರಾಗಿದ್ದಾರೆ.

ಕನ್ನಡ ನಟಿಯರ ಬಗ್ಗೆ ಇತ್ತೀಚೆಗೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಸ್ಟೈಲಿಶ್ ಸ್ಟಾರ್​, ವೇದಿಕೆಯ ಮೇಲೆ ಈ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕಡಿಮೆ ಅವಧಿಯಲ್ಲಿ ಶ್ರೀಲೀಲಾ ಮತ್ತು ರಶ್ಮಿಕಾ ಮಂದಣ್ಣ ಟಾಲಿವುಡ್​​ನಲ್ಲಿ ಮಾಡಿರುವ ಸಿನಿಮಾಗಳ ಸಂಖ್ಯೆ ಇದೀಗ ಸುದ್ದಿಯಾಗಿದೆ. ನಮ್ಮ ಮಣ್ಣಿನ ನಟಿಯರು ಹೆಚ್ಚಾಗಿ ಕಾಣಿಸುತ್ತಿಲ್ಲ. ಇಲ್ಲಿನ ಸಿನಿಮಾಗಳಲ್ಲಿ ನಮ್ಮ ನಟಿಯರು ಕೂಡ ಬರಬೇಕು ಎಂದು ಹೇಳುವ ಮೂಲಕ ನಟ ಅಲ್ಲು ಅರ್ಜುನ್​​ ಬೇಸರ ಹೊರಹಾಕಿದ್ದಾರೆ.

ಕೇವಲ ಎರಡು ವರ್ಷಗಳ ಅವಧಿಯಲ್ಲಿ ಟಾಲಿವುಡ್​​ನ 10 ಸಿನಿಮಾಗಳು ನಟಿ ಶ್ರೀಲೀಲಾ ಕೈಯಲ್ಲಿವೆ. ತೆಲುಗು ಚಿತ್ರರಂಗದ ಸ್ಟಾರ್​ ನಟರ ಚಿತ್ರಗಳಿಗೆ ಇವರೇ ನಾಯಕಿಯಾಗಿ ಮಿಂಚಲಿದ್ದಾರೆ ಎಂಬ ಸಂಗತಿ ಇದೀಗ ಸಿನಿಪ್ರೇಕ್ಷಕರಿಗೆ ಸಾಕಷ್ಟು ಸಂತಸ ತಂದೊಡ್ಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net