More

    ಕರ್ತವ್ಯ ನಿರ್ವಹಿಸುತ್ತಿದ್ದ ಠಾಣೆಯ ವಿರುದ್ಧವೇ ತಿರುಗಿಬಿದ್ದ ಪೇದೆ: ಹೆದ್ದಾರಿಯಲ್ಲಿ ಮಲಗಿ ಹೈಡ್ರಾಮ!

    ಚಂಡೀಗಢ: ಪಂಜಾಬಿನ ಜಲಂಧರ್​ನಲ್ಲಿರುವ ಪ್ರಮುಖ​ ಹೆದ್ದಾರಿಯಲ್ಲಿ ಪ್ರಯಾಣಿಸುವ ಜನರು ಮೊನ್ನೆ (ಜು.21) ನಾಟಕೀಯ ಬೆಳವಣಿಗೆ ಒಂದಕ್ಕೆ ಸಾಕ್ಷಿಯಾದರು. ತಾನು ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್​ ಠಾಣೆಯ ಅಧಿಕಾರಿಗಳ ವಿರುದ್ಧವೇ ತಿರುಗಿಬಿದ್ದ ಪೊಲೀಸ್​ ಪೇದೆಯೊಬ್ಬ ನಡುರಸ್ತೆಯಲ್ಲೇ ಪ್ರತಿಭಟನೆ ನಡೆಸಿ ಗಮನ ಸೆಳೆದದರು.

    ರಸ್ತೆಯಲ್ಲೇ ಮಲಗಿ ಹೈಡ್ರಾಮ

    ನಾನು ಕಳ್ಳರನ್ನು ಹಿಡಿದಿದ್ದೆ. ಆದರೆ, ನಮ್ಮ ಪೊಲೀಸ್​ ಠಾಣೆಯ ಇತರೆ ಸಿಬ್ಬಂದಿ ಹಣ ಪಡೆದು ಖದೀಮರನ್ನು ಬಿಟ್ಟು ಕಳುಹಿಸಿದ್ದಾರೆ ಎಂದು ಪೊಲೀಸ್​ ಪೇದೆ ಹೇಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಬ್ಲಾಕ್​ ಮಾಡಿರುವ ರಸ್ತೆಯನ್ನು ತೊರೆಯುವಂತೆ ಒತ್ತಾಯಿಸಿ ಸಹೋದ್ಯೋಗಿಯೊಬ್ಬರು ರಸ್ತೆಯಲ್ಲಿ ಮಲಗಿದ್ದ ಪೇದೆಗೆ ಒದೆಯುತ್ತಿರುವ ದೃಶ್ಯವೂ ಇದೆ. ಆದರೆ, ತಾನು ಒದ್ದಿಲ್ಲ ಎಂದು ಹೇಳುವ ಮೂಲಕ ಸಹೋದ್ಯೋಗಿ ಆರೋಪವನ್ನು ನಿರಾಕರಿಸಿದ್ದಾರೆ.

    ಇದನ್ನೂ ಓದಿ: ಗ್ರೆನೇಡ್ ರಹಸ್ಯದ ಬೆನ್ನತ್ತಿದ ಸಿಸಿಬಿ ಪೊಲೀಸರು: ಶಂಕಿತ ಉಗ್ರರ ಮೊಬೈಲ್ ರಿಟ್ರೖೆವ್​ಗೆ ರವಾನೆ

    ಸಿಬ್ಬಂದಿಯಿಂದ ಬರಲಿಲ್ಲ ಉತ್ತರ

    ಈ ಘಟನೆ ಜಲಂಧರ್​ನ ಭೋಗಪುರ ಏರಿಯಾದಲ್ಲಿರುವ ಪಠಾಣ್​ಕೋಟ್​ ಹೆದ್ದಾರಿಯಲ್ಲಿ ಜುಲೈ 21ರಂದು ನಡೆದಿದೆ. ಪೇದೆ, ಕಳ್ಳನೊಬ್ಬನನ್ನು ಬಂಧಿಸಿ ತಾನು ಕರ್ತವ್ಯ ನಿರ್ವಹಿಸುವ ಭೋಗಪುರ ಪೊಲೀಸ್​ ಠಾಣೆಗೆ ಕರೆದೊಯ್ದು ಜೈಲಿನಲ್ಲಿ ಇರಿಸಿದ್ದ. ಮಾರನೇ ದಿನ ಪೊಲೀಸ್ ಠಾಣೆಗೆ ಹೋದಾಗ ಖದೀಮ ಅಲ್ಲಿ ಇರಲಿಲ್ಲ. ಖದೀಮ ಎಲ್ಲಿ ಎಂದು ಸಹೋದ್ಯೋಗಿಗಳನ್ನು ಪೇದೆ ಪ್ರಶ್ನೆ ಮಾಡಿದಾಗ ಅವರಿಂದ ಯಾವುದೇ ಸರಿಯಾದ ಉತ್ತರ ಬರಲಿಲ್ಲ. ಇದರಿಂದ ಅಸಮಾಧಾನಗೊಂಡ ಪೇದೆ ಪ್ರತಿಭಟನೆ ಮಾಡಿದ್ದಾರೆ.

    ಅಡ್ಡಲಾಗಿ ಮಲಗಿ ಪ್ರತಿಭಟನೆ

    ನೇರವಾಗಿ ಹೆದ್ದಾರಿಗೆ ತೆರಳಿದ ಪೇದೆ, ರಸ್ತೆಗೆ ಅಡ್ಡಲಾಗಿ ಹಗ್ಗವನ್ನು ಕಟ್ಟಿ ವಾಹನಗಳನ್ನು ಬ್ಲಾಕ್​ ಮಾಡಲು ಪ್ರಯತ್ನಿಸಿದರು. ಸಹೋದ್ಯೋಗಿಯೊಬ್ಬರು ಹಗ್ಗವನ್ನು ಕಳಚಿದರು. ಆದರೂ ತನ್ನ ಪಟ್ಟು ಬಿಡದ ಪೇದೆ ಬಸ್​ ಮುಂದೆಯೇ ರಸ್ತೆಯಲ್ಲೇ ಅಡ್ಡಲಾಗಿ ಮಲಗಿ ಪ್ರತಿಭಟಿಸಲು ಮುಂದಾದರು. ಈ ವೇಳೆ ಸಹೋದ್ಯೋಗಿ ಆತನೊಂದಿಗೆ ವಾಗ್ವಾದ ನಡೆಸಿರುವ ದೃಶ್ಯ ವಿಡಿಯೋದಲ್ಲಿದೆ.

    ಇದನ್ನೂ ಓದಿ: ಕೊರಳಪಟ್ಟಿಯೇ ಉರುಳು?: ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಎಂಟು ಚಿರತೆ ಸಾವು

    ಜಾಮೀನಿನ ಮೇಲೆ ಬಿಡುಗಡೆ

    ಈ ಘಟನೆ ಬಗ್ಗೆ ಭೋಗ್‌ಪುರ ಠಾಣೆಯ ಪ್ರಭಾರಿ ಸುಖ್‌ಜಿತ್‌ ಸಿಂಗ್‌ ಮಾತನಾಡಿ, ಜಗಳಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನನ್ನು ಪೇದೆ ಠಾಣೆಗೆ ಕರೆತಂದಿದ್ದರು. ಆ ವ್ಯಕ್ತಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಆ ಬಳಿಕ ಬಿಡುಗಡೆಗೊಳಿಸಲಾಗಿದೆ. ಪೇದೆ ಮಾಡಿರುವ ಆರೋಪ ಸುಳ್ಳೆಂದು ಹೇಳಿದ್ದಾರೆ. (ಏಜೆನ್ಸೀಸ್​)

    ಜೀವನದಲ್ಲಿ ಜಿಗುಪ್ಸೆ ಹೊಂದಿ ಕೆರೆಗೆ ಹಾರಿದ ಮಹಿಳೆ: ಪ್ರಾಣ ಪಣಕ್ಕಿಟ್ಟು ರಕ್ಷಣೆ ಮಾಡಿದ ಬೆಳಗಾವಿ ಕಾನ್ಸ್​ಟೆಬಲ್​

    ಭಾಷಾ ಮಾಧ್ಯಮ ಚರ್ಚೆ ಮತ್ತೆ ಮುನ್ನೆಲೆಗೆ; ಪ್ರಾದೇಶಿಕ ಭಾಷೆಯಲ್ಲಿ ಬೋಧನೆಗೆ ಹತ್ತಾರು ಸವಾಲುಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts