ಸಿದ್ದರಾಮಯ್ಯ ಕಟ್ಟುಕತೆ ಎಕ್ಸ್‌ಪರ್ಟ್: ಅವ್ರಿಗೆ ಪದ್ಮಶ್ರೀ ಕೊಡಬೇಕು!

Siddaramaiah
Published on

ಬೆಂಗಳೂರು: ಸಿದ್ದರಾಮಯ್ಯ ಕಟ್ಟುಕತೆ ಕಟ್ಟುವುದರಲ್ಲಿ ಎಕ್ಸ್‌ಪರ್ಟ್. ಅವರಿಗೆ ಪದ್ಮಶ್ರೀ ಪ್ರಶಸ್ತಿ ಕೊಡಬೇಕು ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಕುಟುಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಇಲಾಖೆಯ ಎರಡು ವರ್ಷದ ಸಾಧನೆಯ ಅಕಿಅಂಶ ವಿವರಿಸಿತ್ತಲೇ ಪ್ರತಿಪಕ್ಷ ನಾಯಕರ ಟೀಕೆಗೆ ಪ್ರತ್ಯುತ್ತರ ನೀಡಿದರು.

ಸಾಹಿತಿ, ಬರಹಗಾರರಿಗೆ ಪ್ರಶಸ್ತಿ ಕೊಡುವಂತೆ ಕತೆಕಟ್ಟಿಕೊಂಡೇ ಹೋಗುವ ಸಿದ್ದರಾಮಯ್ಯಗೆ ಪದ್ಮಶ್ರೀ, ನೋಬೆಲ್ ಕೊಡಬೇಕೆಂದು ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಮೈಸೂರು ಮೇಯರ್ ಆಯ್ಕೆ ವಿಷಯದಲ್ಲಿ ಏನಾಗಿದೆ ಎಂದು ಗೊತ್ತಿದೆ. ರಮೇಶ್ ಕುಮಾರ್ ಪಕ್ಷದ ವೇದಿಕೆಯಲ್ಲಿ ಏನೆಂದರೆಂದು ಗೊತ್ತಿದೆ. ಮಾನ ಮರ್ಯಾದೆ ಇದ್ದರೆ ಪ್ರತಿಪಕ್ಷ ಸ್ಥಾನಕ್ಕೆ ಅವರು ರಾಜೀನಾಮೆ ಕೊಡಬೇಕಿತ್ತು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net