

ಕಲಬುರಗಿ: ಗುಲ್ಬರ್ಗಾ ವಿಶ್ವವಿದ್ಯಾಲಯದ ಸಿಬ್ಬಂದಿಯ ಕಾಮಕಾಂಡ ತಡವಾಗಿ ಬಯಲಾಗಿದೆ.
ಬೆತ್ತಲೆ ವಿಡಿಯೋ ಶೂಟ್ ಮಾಡಿ ತನ್ನ ಮೊಬೈಲ್ಗೆ ಕಳುಹಿಸಿದರೆ ಪರ್ಮನೆಂಟ್ ಜಾಬ್ ನೀಡುತ್ತೇನೆ ಎಂದವನ ಮಾತು ನಂಬಿದ ಗುತ್ತಿಗೆ ನೌಕರರೊಬ್ಬಳು, ತನ್ನ ಬೆತ್ತಲೆ ದೃಶ್ಯವನ್ನು ಕಳಿಸಿ ಪೇಚಿಗೆ ಸಿಲುಕಿದ್ದಾಳೆ.
ಗುಲ್ಬರ್ಗಾ ವಿವಿ ಗ್ರಂಥಾಲಯ ವಿಭಾಗದಲ್ಲಿ ಗುತ್ತಿಗೆ ನೌಕರಳಾಗಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಉದ್ಯೋಗ ಕಾಯಂ ಮಾಡಿಸುವುದಾಗಿ ಆಮಿಷವೊಡ್ಡಿದ ವಿವಿಯ ಗ್ರಂಥಾಲಯ ಅಧಿಕ್ಷಕ ಹೇಳಿದ್ದು, ಅದಕ್ಕಾಗಿ ಬೆತ್ತಲೆ ವಿಡಿಯೋ ಕಳಿಸುವಂತೆ ಸೂಚಿಸಿದ್ದನಂತೆ.
ವಿವಿ ಉದ್ಯೋಗಿಯ ಮಾತಿಗೆ ಮರುಳಾಗಿ ತನ್ನದೇ ಬೆತ್ತಲೆ ವಿಡಿಯೋ ಶೂಟ್ ಮಾಡಿ ಆತನಿಗೆ ಆಕೆ ಶೇರ್ ಮಾಡಿದ್ದು, ವಿಡಿಯೋ ನೋಡಿ ಸುಮ್ಮನಾಗುವ ಬದಲು ಅದನ್ನು ಬೇರೆ ಗ್ರೂಪ್ಗಳಿಗೆ ಮಾಡಿದ್ದಾನೆ. ಈ ಬಗ್ಗೆ ಕಲಬುರಗಿ ವಿವಿ ಗ್ರಂಥಾಲಯ ಅಧಿಕ್ಷಕ ಶರಣಪ್ಪ ಮಾಕುಂಡಿ ವಿರುದ್ಧ ಮಹಿಳಾ ಉದ್ಯೋಗಿ ಕಲಬುರಗಿ ವಿವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಆರೋಪಿಯನ್ನು ಬಂಧಿಸಲಾಗಿದೆ.
ಕಲಬ