ಐಸಿಯುನಲ್ಲಿದ್ದಾರೆ ರಮೇಶ್​ ಜಾರಕಿಹೊಳಿ, ಪರಿಸ್ಥಿತಿ ಗಂಭೀರ?

Ramesh Jarakiholi
Published on

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಗೆ ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡುತ್ತಿರುವುದಾಗಿ ಗೋಕಾಕ್​ ತಾಲೂಕು ವೈದ್ಯಾಧಿಕಾರಿ ಡಾ. ರವೀಂದ್ರ ಅಂಟಿನ್ ತಿಳಿಸಿದ್ದಾರೆ.

ಗುರುವಾರ ರಾತ್ರಿ ಮಹಾರಾಷ್ಟ್ರದಿಂದ ಬಂದ ರಮೇಶ್ ಜಾರಕಿಹೊಳಿಗೆ ಶನಿವಾರ ರಾತ್ರಿ ಕರೊನಾ ಪರೀಕ್ಷೆ ಮಾಡಲಾಗಿತ್ತು. ವರದಿಯಲ್ಲಿ ಕರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದನ್ನೂ ಓದಿರಿ ರಮೇಶ್ ಜಾರಕಿಹೊಳಿಗೆ ನಿಜಕ್ಕೂ ಚಳಿ ಜ್ವರವೋ ಅಥವಾ ತಲೆಮರೆಸಿಕೊಳ್ಳುವ ತಂತ್ರವೋ?

ಮಹಾರಾಷ್ಟ್ರ ಹಾಗೂ ಬೆಂಗಳೂರಿಗೆ ಹೋಗಿ ಬಂದ ಹಿಸ್ಟರಿ ರಮೇಶ್​ ಜಾರಕಿಹೊಳಿಗೆ ಇದೆ. ರ್ಯಾಪಿಡ್ ಟೆಸ್ಟ್ ಮಾಡಿದಾಗ ಅವರಿಗೆ ಕೋವಿಡ್ ಸೋಂಕು ಇರುವುದು ಗೊತ್ತಾಗಿದೆ. ಶುಗರ್ ಮತ್ತು ಬಿಪಿ ಹೆಚ್ಚಾಗಿದ್ದರಿಂದ ಅವರನ್ನ ಕೋವಿಡ್ ವಾರ್ಡ್​ನ ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡುತ್ತಿದ್ದೇವೆ. ಅವರು ಇನ್ನೂ ಮೂರ್ನಾಲ್ಕು ದಿನ ಐಸಿಯುನಲ್ಲೇ ಇರಬೇಕಾಗುತ್ತೆ ಎಂದು ವೈದ್ಯಾಧಿಕಾರಿ ಡಾ. ರವೀಂದ್ರ ಅಂಟಿನ್ ಹೇಳಿದರು. ರಮೇಶ್​ರ ಆರೋಗ್ಯ ಹದಗೆಟ್ಟಿದ್ದು, ಗಂಭೀರ ಸ್ಥಿತಿ ಇದೆ ಎಂದು ಮೂಲಗಳು ತಿಳಿಸಿವೆ.

ಇತ್ತ ವಿಚಾರಣೆಗೆ ಸಿಡಿ ಕೇಸ್​ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೋಟಿಸ್​ ನೀಡಿದ್ದು, ಕರೊನಾ ನೆಗೆಟಿವ್ ರಿಪೋರ್ಟ್ ಸಿಗುವವರೆಗೂ ವಿಚಾರಣೆಯಿಂದ ರಮೇಶ್ ಜಾರಕಿಹೊಳಿಗೆ ವಿನಾಯಿತಿ ಸಿಗುವ ಸಾಧ್ಯತೆ ಇದೆ. ಸದ್ಯ ರಮೇಶ್​ಗೆ ಕರೊನಾ ಎಸ್ಐಟಿ ವಿಚಾರಣೆ ಟೆನ್ಷನ್ ಕಡಿಮೆ ಮಾಡಿದೆ.

ರಮೇಶ್ ಜಾರಕಿಹೊಳಿಯ ಕಾರು ಚಾಲಕ ಹಾಗೂ ಓರ್ವ ಅಡುಗೆ ಸಿಬ್ಬಂದಿಗೂ ಕರೊನಾ ಪಾಸಿಟಿವ್ ಬಂದಿದೆ. ಚಾಲಕ ಮತ್ತು ಅಡುಗೆ ಸಿಬ್ಬಂದಿ ಹೋಮ್ ಐಸೋಲೇಷನ್​ನಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net