ಪಬ್​ಜಿ ಆಟವಾಡುತ್ತಲೇ ಬಾಲಕನ ಭೀಕರ ಹತ್ಯೆ! ಬೆಚ್ಚಿಬೀಳಿಸುತ್ತೆ ಆರೋಪಿ ಬಾಯ್ಬಿಟ್ಟ ರಹಸ್ಯ

pubg
Published on

ಮಂಗಳೂರು: ನಗರ ಹೊರವಲಯದ ಉಳ್ಳಾಲದ ಕೆಸಿ ರೋಡ್​ ಸಮೀಪ ನಿನ್ನೆ ಸಂಜೆ ನಡೆದಿದ್ದ 12 ವರ್ಷದ ಬಾಲಕನ ಭೀಕರ ಹತ್ಯೆ ಪ್ರಕರಣದ ಆರೋಪಿಯನ್ನ ಪೊಲೀಸರು ಬಂಧಿಸಿದ್ದು, ಆತನ ಹೇಳಿಕೆ ಬೆಚ್ಚಿಬೀಳಿಸುತ್ತೆ.

ಸ್ನೇಹಿತನೊಂದಿಗೆ ಪಬ್​ಜಿ​ ಆಟವಾಡಲು ಶನಿವಾರ ಮೊಬೈಲ್​ ಹಿಡಿದು ಮನೆಯಿಂದ ಹೊರ ಹೋದ 12 ವರ್ಷದ ಬಾಲಕ ಆಕೀಫ್ ಬರ್ಬರವಾಗಿ ಹತ್ಯೆಯಾಗಿದ್ದಾನೆ. ಮೃತ ಬಾಲಕ ಪೋಷಕರು ಆತನ ಸ್ನೇಹಿತನ ಮೇಲೆ ಅನುಮಾನ ವ್ಯಕ್ತಪಡಿಸಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದನ್ನೂ ಓದಿರಿ ಪಿಜಿಯಲ್ಲಿದ್ದ ಸಾಕ್ಷ್ಯವನ್ನ ಎಸ್​ಐಟಿ ನಾಶ ಮಾಡಿದೆ: ಸಿಡಿ ಲೇಡಿ ಗಂಭೀರ ಆರೋಪ

ಪ್ರಕರಣ ಬೆನ್ನುಹತ್ತಿದ ಪೊಲೀಸರಿಗೆ ಶಾಕ್​ ಕಾದಿತ್ತು. ಮಕ್ಕಳಿರುವ ಪ್ರತಿ ಮನೆಯವರಿಗೂ ಎಚ್ಚರಿಕೆಯ ಗಂಟೆ.

ಕೆಲ ತಿಂಗಳಿಂದ ಆಕೀಫ್ ಮತ್ತು ಈತನ ಸ್ನೇಹಿತ ದೀಪಕ್ ಇಬ್ಬರೂ ಒಟ್ಟಿಗೆ ಕೂತು ಪಬ್​ಜಿ ಆಡುತ್ತಿದ್ದರು. ಆಟದಲ್ಲಿ ಪ್ರತಿ ಬಾರಿಯೂ ಆಕೀಫ್ ಗೆಲ್ಲುತ್ತಿದ್ದ. ಅದರಂತೆ ನಿನ್ನೆ ಸಂಜೆಯೂ ಆಟವಾಡಲು ಆಕೀಫ್​​ ಮನೆ ಸಮೀಪದ ಗ್ರೌಂಡ್​ಗೆ ಹೋಗಿದ್ದ. ಆದರೆ ಅಂದು ಮೊದಲ ಬಾರಿಗೆ ಫಕೀಪ್​ ಸೋತಿದ್ದ. ಆಟದಲ್ಲಿ ಮೋಸವಾಗುತ್ತಿದೆ ಆಕೀಫ್ ಮತ್ತು ದೀಪಕ್ ಇಬ್ಬರ ನಡುವೆಯೂ ಗಲಾಟೆಯಾಗಿದ್ದು, ಪರಸ್ಪರ ಕಲ್ಲಿನಿಂದ ಹೊಡೆದಾಡಿಕೊಂಡಿದ್ದಾರೆ.

ಈ ವೇಳೆ ಫಕೀಪ್​ ಮೇಲೆ ಆಕೀಫ್ ಮೇಲೆ ದೀಪಕ್ ದೊಡ್ಡ ಕಲ್ಲು ಎತ್ತಿ ಹಾಕಿದ್ದು, ಕಲ್ಲಿನೇಟಿಗೆ ಸ್ಥಳದಲ್ಲೇ ಆಕೀಫ್ ಪ್ರಾಣಬಿಟ್ಟಿದ್ದಾನೆ. ಮೈದಾನದ ಬದಿಯಲ್ಲಿ ಶವ ಹಾಕಿ ದೀಪಕ್ ಪರಾರಿಯಾಗಿದ್ದ. ಮಗ ಕಾಣೆಯಾಗಿದ್ದಾನೆ ಎಂದು ಪೋಷಕರು ಹುಡುಕಾಟ ನಡೆಸಿದ್ದರು. ಇಂದು ಬೆಳಗಿನ ಜಾವ ಆಕೀಫ್​ನ ಶವ ಪತ್ತೆಯಾಗಿದೆ.

ವಿಚಾರಣೆ ವೇಳೆ ಆರೋಪಿ ದೀಪಕ್(17) ತಪ್ಪೊಪ್ಪಿಕೊಂಡಿದ್ದು, ಪಬ್​ಜಿ ಆಟದ ವಿಚಾರವಾಗಿ ಆರಂಭವಾಗ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net