

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಕೇಸ್ನ 'ಸಂತ್ರಸ್ತ' ಯುವತಿಯನ್ನ ವಿಚಾರಣೆ ಮಾಡುತ್ತಿದ್ದ ಎಸ್ಐಟಿ ಅಧಿಕಾರಿಗಳು, ಆಕೆ ವಾಸವಿದ್ದ ಪಿಜಿಯನ್ನ ಪಂಚನಾಮೆ ಮಾಡುವ ನೆಪದಲ್ಲಿ ರಮೇಶ್ ಅಣತಿಯಂತೆ ಅಲ್ಲಿದ್ದ ಪ್ರಮುಖ ಸಾಕ್ಷ್ಯ ನಾಶ ಮಾಡಲಾಗಿದೆಯೇ?
ಸ್ವತಃ ಸಿಡಿ ಲೇಡಿಯೇ ಇಂದು ನಗರ ಪೊಲೀಸ್ ಆಯುಕ್ತರಿಗೆ ಎಸ್ಐಟಿ ಮತ್ತು ಜಾರಕಿಹೊಳಿ ವಿರುದ್ಧ ಬರೆದಿರುವ ಪತ್ರದಲ್ಲಿ ಸಾಕ್ಷ್ಯ ನಾಶದ ಬಗ್ಗೆ ಪ್ರಸ್ತಾಪಿಸಿದ್ದಾಳೆ. ಇದನ್ನೂ ಓದಿರಿ ಸಿಡಿ ಲೇಡಿ ಪಿಜಿಯ ಕಪಾಟಿನಲ್ಲಿತ್ತು ಪ್ರಕರಣದ ಪ್ರಮುಖ ಸಾಕ್ಷಿ..!
ನನ್ನ ಹೆಸರು ರಮೇಶ್ ಜಾರಕಿಹೊಳಿ ಕೊಟ್ಟಿರುವ ದೂರಿನಲ್ಲಿ ಉಲ್ಲೇಖವಾಗಿಲ್ಲ. ಆದರೂ ನನ್ನ ಪಿಜಿ ಮೇಲೆ ದಾಳಿ ಅಲ್ಲಿ ಇರುವ ಸಾಕ್ಷ್ಯಗಳನ್ನು ನಾಶ ಮಾಡಿ ನನ್ನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಸರ್ಕಾರದ ಒತ್ತಡಕ್ಕೆ ಎಸ್ಐಟಿ ಮಣಿದಿದೆ ಎಂದು ಸಿಡಿ ಲೇಡಿ ಗಂಭೀರ ಆರೋಪ ಮಾಡಿದ್ದಾಳೆ.