

ಬೆಂಗಳೂರು: ಸಚಿವ ಆರ್.ಅಶೋಕ್ ಮತ್ತು ಕೆಲ ಐಪಿಎಸ್ ಅಧಿಕಾರಿಗಳ ವಿರುದ್ಧ ರಮೇಶ್ ಜಾರಕಿಹೊಳಿ ಸಿಡಿ ಕೇಸ್ನ ಯುವತಿ ಪರ ವಕೀಲ ಜಗದೀಶ್ ವಾಗ್ದಾಳಿ ನಡೆಸಿದ್ದಾರೆ.
ನಾನು ನಂದಿ ಅಲ್ಲ, ಜಗದೀಶ! ಮೂರನೇ ಕಣ್ಣು ಬಿಟ್ರೆ ಭಸ್ಮ ಆಗ್ತೀರಿ. ಯಾರಾದ್ರೂ ನನ್ನನ್ನು ರೌಡಿಶೀಟರ್ ಅಂದ್ರೆ ಅವರ ವಿರುದ್ಧ ಕೇಸ್ ದಾಖಲು ಮಾಡ್ತೀನಿ ಎಂದು ಬುಧವಾರ ಫೇಸ್ಬುಕ್ ಲೈವ್ನಲ್ಲಿ ಕಿಡಿಕಾರಿದ ಜಗದೀಶ್, ನನ್ನ ವಿರುದ್ಧ 13 ಕೇಸ್ ದಾಖಲಾಗಿತ್ತು. ನನ್ನ ವಿರುದ್ಧದ ಎಲ್ಲ ಕೇಸ್ಗಳು ಖುಲಾಸೆ ಆಗಿವೆ. ನಾನು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಾ ಬಂದವನು. ಕೆಲ ಐಪಿಎಸ್ ಅಧಿಕಾರಿಗಳು ಅಕ್ರಮವೆಸಗಿದ್ದಾರೆ. ಅದನ್ನ ಬಿಚ್ಚಿಡಲೇ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿರಿ ಕರೊನಾ ಸೋಂಕು: ಮಾಜಿ ಪ್ರಧಾನಿ ದೇವೇಗೌಡ ಆಸ್ಪತ್ರೆಗೆ ದಾಖಲು
ಸಿಸಿಬಿ ಇನ್ಸ್ಪೆಕ್ಟರ್ ಪುನೀತ್ ವಿರುದ್ಧ ಗರಂ ಆದ ವಕೀಲ ಜಗದೀಶ್, ಕೋಡಿಗೆಹಳ್ಳಿ ಠಾಣಾ ಇನ್ಸ್ಪೆಕ್ಟರ್ ಆಗಿದ್ದಾಗ ನನ್ನ ವಿರುದ್ಧ ಅಂದಿನ ಗೃಹ ಮಂತ್ರಿ ಆರ್. ಅಶೋಕ್ ಅಣತಿಯಂತೆ ಸುಳ್ಳು ಕೇಸ್ ದಾಖಲು ಮಾಡಿದ್ದರು. ಓರ್ವ ಐಪಿಎಸ್ ಅಧಿಕಾರಿ ಆ ನಾಯಕನಿಗೆ ಬಕೆಟ್ ಹಿಡಿದು ನನ್ನ ವಿರುದ್ಧ ಸುಳ್ಳು ಕೇಸ್ ಹಾಕಲು ಹೊರಟಿದ್ದರು. ಸುಳ್ಳು ದೂರಿನಿಂದ ನನ್ನ ಕುಟುಂಬ ದೂರವಾಯ್ತು, ನನ್ನಿಂದ ಹೆಂಡತಿ- ಮಕ್ಕಳು ದೂರವಾದರು. ಕೊಡಿಗೆಹಳ್ಳಿಯ ಅಶ್ವಥ್ ನಾರಾಯಣಗೌಡರಿಂದ ನನ್ನ ವಿರುದ್ಧ ದೂರು ದಾಖಲಾಗಿತ್ತು. ಈತ ಕೊಡಿಗೆಹಳ್ಳಿಯ ಬಿಜೆಪಿ ಮುಖಂಡ ಎಂದು ಕಿಡಿಕಾರಿದರು.
ನನ್ನ ವಿರುದ್ಧದ ಎಲ್ಲ ಕೇಸ್ಗಳು ಖುಲಾಸೆ ಆಗಿವೆ. ನಾವು ಕ್ಲೀನ್ಹ್ಯಾಂಡ್, ನಮ್ಮ ಚಾರಿತ್ರ್ಯವಧೆ ಮಾಡೋದು ಸರಿಯಲ್ಲ. ಯಾರಾದ್ರೂ ನನ್ನನ್ನ ರೌಡಿಶೀಟರ್ ಅಂದ್ರೆ ಅವರ ವಿರುದ್ಧ ಕೇಸ್ ದಾಖಲು ಮಾಡ್ತೀನಿ ಎಂದ ಜಗದೀಶ್ ಎಚ್ಚರಿಸಿದರು.
ಸಿಡಿ ಕೇಸ್ನ ಯುವತಿಯನ್ನ ಕುಟುಂಬದವರೇ ಕೈಬಿಟ್ಟಾಗ ನಾನೇ ಆಕೆಯ ಸಹೋದರನಾಗಿ ನ್ಯಾಯ ಕೊಡಿಸುತ್ತಿದ್ದೇನೆ. ಎಸ್ಐಟಿ ವಿರುದ್ಧ ಕಿಡಿಕಾರಿದ ಜಗದೀಶ್, ನ್ಯಾಯದ ವಿರುದ್ಧ ಹೋರಾಟದಲ್ಲಿ ನಾನು ಡೆಸ್ಟ್ರಾಯ್ ಆಗಲು ಸಿದ್ಧ ಎಂದರು.