ನಾನು ನಂದಿ ಅಲ್ಲ, ಜಗದೀಶ! ನಾನು ಮೂರನೇ ಕಣ್ಣು ಬಿಟ್ರೆ ಭಸ್ಮ ಆಗ್ತೀರಿ: ಸಿಡಿ ಲೇಡಿ ವಕೀಲರ ಖಡಕ್​ ವಾರ್ನಿಂಗ್​ ಯಾರಿಗೆ?

cd jagadeesh
Published on

ಬೆಂಗಳೂರು: ನಾನು ನಂದಿ ಅಲ್ಲ, ನಾನು ಜಗದೀಶ್. ನಾನು ಮೂರನೇ ಕಣ್ಣು ಬಿಟ್ರೆ ಭಸ್ಮ ಆಗ್ತೀರಿ. ಯಾರಾದ್ರೂ ನನ್ನನ್ನು ರೌಡಿಶೀಟರ್ ಅಂದ್ರೆ ಅವರ ವಿರುದ್ಧ ಕೇಸ್ ದಾಖಲು ಮಾಡ್ತೀನಿ ಎಂದು ರಮೇಶ್​ ಜಾರಕಿಹೊಳಿ ಸಿಡಿ ಕೇಸ್​ನ ಯುವತಿ ಪರ ವಕೀಲ ಜಗದೀಶ್​ ಎಚ್ಚರಿಸಿದ್ದಾರೆ.

ಬುಧವಾರ ಫೇಸ್​ಬುಕ್​ ಲೈವ್​ನಲ್ಲಿ ಮಾತನಾಡಿದ ಜಗದೀಶ್​, ನನ್ನ ವಿರುದ್ಧದ ಎಲ್ಲ ಕೇಸ್​ಗಳು ಖುಲಾಸೆ ಆಗಿವೆ. ನಾವು ಕ್ಲೀನ್​ಹ್ಯಾಂಡ್, ನಮ್ಮ ಚಾರಿತ್ರ್ಯವಧೆ ಮಾಡೋದು ಸರಿಯಲ್ಲ. ನಾನು ಕೆಂಪೇಗೌಡ ವಂಶಸ್ಥ. ಯಾರಾದ್ರೂ ನನ್ನನ್ನ ರೌಡಿಶೀಟರ್ ಅಂದ್ರೆ ಅವರ ವಿರುದ್ಧ ಕೇಸ್ ದಾಖಲು ಮಾಡ್ತೀನಿ ಎಂದ ಜಗದೀಶ್​, ಸಿಸಿಬಿ ಇನ್​ಸ್ಪೆಕ್ಟರ್ ಪುನೀತ್ ಹಿಂದೆ ಆರ್​ಎಸ್ಎಸ್ ಮತ್ತು ಭಜರಂಗದಳ ಇದೆ ಎಂದು ಗಂಭೀರ ಆರೋಪ ಮಾಡಿದರು. ಇದನ್ನೂ ಓದಿರಿ ಸಿಡಿ ಕೇಸ್​ಗೆ ಸ್ಫೋಟಕ ತಿರುವು: ಸತ್ಯ ಒಪ್ಪಿಕೊಂಡ ಡಿಕೆಶಿ

ಸಿಡಿ ಪೊಲೀಸರು ಆರೋಪಿ(ರಮೇಶ್​ ಜಾರಕಿಹೊಳಿ)ಗೆ ಸಹಕರಿಸುತ್ತಿರೋ ಬಗ್ಗೆ ದಾಖಲೆ‌ಯಿದೆ. ನಿನ್ನೆಯಿಂದ ದಾಖಲೆಯನ್ನ ಕಲೆ ಹಾಕಿದ್ದೇನೆ. ಇದಕ್ಕೆ ಎಸ್ಐಟಿ ಉತ್ತರ ಕೊಡುತ್ತಾ? ಎಸ್ಐಟಿ ಕುರಿತಾದ ಸಾಕ್ಷ್ಯಗಳು ನಮ್ಮ ಬಳಿ ಇದೆ. ನಿನ್ನೆ 164 ಹೇಳಿಕೆಯ ಸಂದರ್ಭದಲ್ಲಿ 150ಕ್ಕೂ ಹೆಚ್ಚು ವಕೀಲರು ಹಾಜರಿದ್ದರು. ನಾವು ಯಾರಿಗೂ ಬನ್ನಿ ಎಂದಿರಲಿಲ್ಲ. ಯುವತಿ ಪರವಾಗಿ ಅವರು ವಿಚಾರಣೆ ವೇಳೆ ಹಾಜರಿದ್ದಾರೆ. ವಿಚಾರಣೆ ಮುಗಿಸಿ ಹೊರ ಬಂದಾಗ ಯುವತಿಯ ವಿಡಿಯೋವನ್ನು ಪೊಲೀಸರೇ ಮಾಡಿ ಮಾಧ್ಯಮಕ್ಕೆ ಹಂಚಿದ್ದಾರೆ ಎಂದು ವಕೀಲ‌ ಜಗದೀಶ್​ ಅಸಮಾಧಾನ ಹೊರಹಾಕಿದರು.

ಕೆಪಿಸಿಸಿಯ ಸೂರ್ಯ ಮುಕುಂದರಾಜ್ ಬಂದ ಪೊಟೋವನ್ನು ಪೊಲೀಸರೇ ವೈರಲ್ ಮಾಡಿದ್ದಾರೆ. ಸೂರ್ಯ ಮುಕುಂದರಾಜ್ ವಕೀಲರಾಗಿ ಹಾಜರಿದ್ದರು. ಫೋಟೋ ವೈರಲ್ ಮಾಡಿದ ಎಸ್​ಐಟಿ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸುತ್ತೇನೆ. ನಗರ ಪೊಲೀಸ್ ಆಯುಕ್ತ ಸೇರಿದಂತೆ ಹಲವರ ವಿರುದ್ಧ ದೂರು ನೀಡುತ್ತೇನೆ ಎಂದು ಜಗದೀಶ್ ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net