ಡಿಕೆಶಿ ಗಂಡಸಲ್ಲ, ನಾನು ಗಂಡಸು.. ನಾಲಾಯಕ್ ಮಹಾನಾಯಕನನ್ನು ಕನಕಪುರದಲ್ಲೇ ಸೋಲಿಸ್ತೀನಿ: ಜಾರಕಿಹೊಳಿ

dks jarakiholi
Published on

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ರಮೇಶ್​ ಜಾರಕಿಹೊಳಿ ಸಿಡಿ ಕೇಸ್​ ಕ್ಷಣಕ್ಕೊಂದು ತಿರುವು ಪಡೆಯುತ್ತಿದ್ದು, ಭಾರಿ ಸಂಚಲನ ಮೂಡಿಸಿದೆ. ಇದರ ಮುಂದುವರಿದ ಭಾಗ ಎಂಬಂತೆ ಶನಿವಾರ ಸಂಜೆ ಅಸಲಿ ಆಟ ಶುರುವಾಗುತ್ತೆ, ನನ್ನ ಜೇಬಿನಲ್ಲಿ ಸಾಕ್ಷಿ ಇಟ್ಟುಕೊಂಡಿದ್ದೇನೆ, ಸಮಯನೋಡಿ ಬಿಡುಗಡೆ ಮಾಡ್ತೀನಿ ಎಂದು ಬಹಿರಂಗವಾಗಿ ಹೇಳುವ ಮೂಲಕ ಕುತೂಹಲ ಮೂಡಿಸಿದ್ದ ರಮೇಶ್, ಈ ಕುರಿತು ಇಂದು ಸಂಜೆ ಮಹತ್ವದ ಸುದ್ದಿಗೋಷ್ಠಿ ನಡೆಸಿದರು.

ಇಂದು ಬೆಳಗ್ಗೆಯಿಂದ ಅಜ್ಞಾತ ಸ್ಥಳದಲ್ಲೇ ಇದ್ದ ರಮೇಶ್​ ಜಾರಕಿಹೊಳಿ ಸಂಜೆ 5ಕ್ಕೆ ಸದಾಶಿವನಗರದ ಮನೆಗೆ ಆಗಮಿಸಿದರು. 6ಕ್ಕೆ ಹೊರಬಂದ ರಮೇಶ್ ಸುದ್ದಿಗಾರರೊಂದಿಗೆ ಮಾತನಾಡುತ್ತ, ನಾನು ನಿನ್ನೆ ಹೇಳಿದಂತೆ ಇಂದು ನಾನು ಕೆಲ ಮಹತ್ವದ ಮಾಹಿತಿಯನ್ನ ಹೊರಹಾಕುತ್ತೇನೆ ಅಂದಿದ್ದೆ. ಡಿಕೆಶಿಯೇ ಕಿಂಗ್​ಪಿನ್​ ನರೇಶ್​ ತನ್ನ ಸಂಬಂಧಿ ಎಂದು ಹೇಳಿಕೊಂಡಿದ್ದಾನೆ. ಯುವತಿ ಪೋಷಕರು ಕೂಡ ಮಹಾನಾಯಕನ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ. ಆ ಮಹಾನಾಯಕ ರಾಜಕೀಯಕ್ಕೆ ನಾಲಾಯಕ್. ಅವನೆಂಥ ದೊಡ್ಡ ಗಂಡಸು, ಅವನು ಗಂಡಸಲ್ಲ, ನಾನು ಗಂಡು ಎಂದು ಡಿ.ಕೆ.ಶಿವಕುಮಾರ್​ ವಿರುದ್ಧ ಕಿಡಿಕಾರಿದರು.

ಡಿಕೆಶಿ ಷಡ್ಯಂತ್ರಕ್ಕೆ ಕ್ಷಮೆಯೇ ಇಲ್ಲ. ಕನಕಪುರದಲ್ಲಿ ಡಿಕೆಶಿಯನ್ನ ಸೋಲಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತೆ. ಅವನಂಥ ಗಾಂ... ರಾಜಕಾರಣಿ ಯಾರೂ ಇಲ್ಲ. ಎಂದು ಅವಾಚ್ಯಶಬ್ದಗಳಿಂದ ರಮೇಶ್​ ಜಾರಕಿಹೊಳಿ. ನಾಳೆ ಡಿಕೆಶಿ ವಿರುದ್ಧ ದೂರು ನೀಡ್ತೀನಿ. ಯುವತಿಯ ಪೋಷಕರ ಹೇಳಿಕೆ ಬಳಿಕ ಗೊತ್ತಾಯ್ತು ಆ ಮಹಾನಾಯಕ ರಾಜಕೀಯಕ್ಕೆ ನಾಲಾಯಕ್​ ಎಂದು ಏಕ ವಚನದಲ್ಲೇ ನಿಂದಿಸಿದರು.

ಹೆಣ್ಣನ್ನು ಮುಂದಿಟ್ಟುಕೊಂಡು ಷಡ್ಯಂತ್ರ ಮಾಡಿದ್ದಾನೆ ಡಿಕೆಶಿ. ಅವನಿಗೆ ನಾನೇಕೆ ಹೆದರಲಿ? ಗೋಕಾಕ್​ನಲ್ಲಿ ಚುನಾವಣೆಗೆ ನನ್ನ ತಮ್ಮನನ್ನು ನಿಲ್ಲಿಸ್ತೀನಿ, ಕನಕಪುರದಲ್ಲಿ ನಾನೇ ನಿಲ್ತೀನಿ. ನನ್ನ ಹತ್ತಿರ ಒಟ್ಟು 11 ಸಾಕ್ಷ್ಯಗಳಿವೆ. ಅದನ್ನು ಎಸ್​ಐಟಿಗೆ ಒಪ್ಪಿಸುತ್ತೇನೆ. ಯುವತಿ ಸತ್ತರೆ ಅದಕ್ಕೆ ಡಿಕೆಶಿಯೇ ಹೊಣೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net