ಸಿಡಿ ಲೇಡಿ ಇಲ್ಲೇ ಇದ್ದಾಳೆ! ಸುಮ್ಮನೆ ಎಲ್ಲೆಲ್ಲೋ ಹುಡುಕ್ತಿದ್ರು...

CD Gril
Published on

ಬೆಂಗಳೂರು: ರಮೇಶ್​ ಜಾರಕಿಹೊಳಿ ಸಿಡಿ ಕೇಸ್​ನ ಯುವತಿ ಎಲ್ಲಿದ್ದಾಳೆ? ಕಳೆದ 25 ದಿನಗಳಿಂದ ಅಜ್ಞಾತ ಸ್ಥಳದಲ್ಲಿರುವ ಸಿಡಿ ಲೇಡಿ ಮತ್ತು ಪ್ರಕರಣದ ಕಿಂಗ್​ಪಿನ್​ ನರೇಶ್​ಗೌಡ ಹಾಗೂ ಹ್ಯಾಕರ್​ ಶ್ರವಣ್​ಗಾಗಿ ಎಸ್​ಐಟಿ ಪೊಲೀಸರು ಗೋವಾ, ರಾಜಸ್ಥಾನ, ಮಧ್ಯಪ್ರದೇಶ, ದೆಹಲಿ ಸೇರಿದಂತೆ ಹೊರ ರಾಜ್ಯಗಳಲ್ಲೂ ಹುಡುಕಾಟ ನಡೆಸಿದ್ದಾರೆ. ಕಿಂಗ್​ಪಿನ್​ ಮತ್ತು ಹ್ಯಾಕರ್​ ಉತ್ತರ ಭಾರತದಲ್ಲಿದ್ದಾರೆ ಎನ್ನಲಾಗುತ್ತಿದ್ದು, ಸಿಡಿ ಲೇಡಿ ಮಾತ್ರ ಕರ್ನಾಟಕದಲ್ಲೇ ಇದ್ದಾಳೆ!

ಇಂದು ಸಿಕ್ಕ ಮಾಹಿತಿ ಪ್ರಕಾರ ಸಿಡಿ ಯುವತಿ ಬೆಂಗಳೂರು ಹೊರಹೊಲಯದಲ್ಲೇ ಇದ್ದಾಳಂತೆ. ಕಾರು ಚಾಲಕ ಪರಶಿವಮೂರ್ತಿ ಎಂಬಾತ ಈಕೆಯ ಜತೆಯಲ್ಲಿದ್ದಾನಂತೆ. ಉದ್ಯಮಿ ಶಿವಕುಮಾರ್​ರ ಕಾರು ಚಾಲಕ ಪರಶಿವಮೂರ್ತಿ ಎಂಬ ಮಾಹಿತಿ ಲಭ್ಯವಾಗಿದೆ.

ಬೆಂಗಳೂರು ಆಸುಪಾಸಿನಲ್ಲೇ ಇದ್ದುಕೊಂಡು ಯುವತಿ ಅಲ್ಲಿಂದಲೇ ವಿಡಿಯೋ ಮಾಡಿ ಕಳಿಸುತ್ತಿದ್ದಾಳೆ ಎನ್ನಲಾಗುತ್ತಿದೆ. ರೂಂ ಚೆಕ್​ಔಟ್​ ಮಾಡಲು ಕೆಲವೇ ಕ್ಷಣ ಇರುವಾಗ ವಿಡಿಯೋ ಮಾಡಿ ಮೊಬೈಲ್​ ಮೂಲಕ ಕಳಿಸಿ ಬಳಿಕ ಆಫ್​ ಮೊಬೈಲ್​ ಅನ್ನು ಆಫ್​ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ನಡುವೆ ಇಂದು ಎಸ್​ಐಟಿ ವಿಚಾರಣೆಯನ್ನು ಯುವತಿಯ ಪೋಷಕರು ಎದುರಿಸಿದ್ದಾರೆ. ನನ್ನ ಮಗಳು ಅಮಾಯಕಿ, ಆಕೆ ಅಪಾಯದಲ್ಲಿದ್ದಾಳೆ. ಮೊದಲು ಅವಳನ್ನು ರಕ್ಷಿಸಿ. ಅವಳು ಯಾರದ್ದೋ ಮಾತು ಕೇಳುತ್ತಿರಬಹುದು ಎಂದು ಎಸ್​ಐಟಿ ಪೊಲೀಸರ ಮುಂದೆ ಸಿಡಿ ಲೇಡಿಯ ತಾಯಿ ಕಣ್ಣೀರಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net