ಅಕ್ಕಿ ಪಡೆಯಲು ಬಾಗಿಲು ತೆಗೆದ ಯುವತಿಯನ್ನ ಬೆತ್ತಲೆ ಮಾಡಿ ಚಿತ್ರೀಕರಿಸಿದ! ಮುಂದೆ ಆಗಿದ್ದೆಲ್ಲವೂ ಅವಾಂತರ

accused
Published on

ಹುಬ್ಬಳ್ಳಿ: ಗ್ರಾಹಕರೊಬ್ಬರ ಮನೆಗೆ ಅಕ್ಕಿ ಮೂಟೆಯನ್ನು ಇಡಲು ಹೋದ ಆಟೋ ಚಾಲಕನೊಬ್ಬ ಮಾಡಬಾರದ ಕೆಲಸ ಮಾಡಿದ್ದಾನೆ. ಮನೆಯಲ್ಲಿದ್ದ ಯುವತಿಯ ಬಟ್ಟೆ ವಿವಸ್ತ್ರಗೊಳಿಸಿ ಬೆತ್ತಲೆ ಚಿತ್ರವನ್ನ ಮೊಬೈಲ್​ ಕ್ಯಾಮರಾದಲ್ಲಿ ಸೆರೆ ಹಿಡಿದವ ಮಾಡಿದ ಅವಾಂತರ ಅಷ್ಟಿಷ್ಟಲ್ಲ.

ಈ ಬಗ್ಗೆ ಸಂತ್ರಸ್ತ ಯುವತಿಯ ತಾಯಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹುಬ್ಬಳ್ಳಿಯ ಆಟೋ ಚಾಲಕ ಅನಿಲ್ ರಾಜ್ ಆರೋಪಿ. ಯುವತಿ ತಾಯಿ ಸರ್ಕಾರಿ ಉದ್ಯೋಗಿ. ಇವರಿಗೆ ಅನಿಲ್ ರಾಜ್​ ಪರಿಚಯವಿದ್ದ. ಆ ಹಿನ್ನೆಲೆಯಲ್ಲಿ ಯುವತಿಯ ತಾಯಿಯನ್ನು ಈತ ತನ್ನ ಆಟೋದಲ್ಲಿ ಕಚೇರಿಗೆ ಕರೆದುಕೊಂಡು ಹೋಗಿ ಬಿಡುತ್ತಿದ್ದ. ಇದನ್ನೂ ಓದಿರಿ ಅಯ್ಯೋ, ಮಗಳೇ ಆ ಒಂದು ಮಾತಿಗೆ ಎಂಥ ಸಾವು ತಂದುಕೊಂಡವ್ವ…

'ಜ.21ರಂದು ನಾನು ಕಚೇರಿಗೆ ಹೋದ ಬಳಿಕ ಬೆಳಗ್ಗೆ 10.45ರ ಸುಮಾರಿಗೆ ನನ್ನ ಮಗಳು ಮಾತ್ರವೇ ಮನೆಯಲ್ಲಿ ಇರುವುದನ್ನ ಅರಿತ ಆರೋಪಿ ಅನಿಲ್​ ರಾಜ್​, ನಿಮ್ಮ ಅಮ್ಮ ಅಕ್ಕಿ ಕಳಿಸಿದ್ದಾರೆ ತೆಗೆದುಕೊಳ್ಳಿ ಎಂದು ಬಾಗಿಲು ತಟ್ಟಿದ್ದಾನೆ. ನನ್ನ ಮಗಳು ಬಾಗಿಲು ತೆಗೆಯುತ್ತಿದ್ದಂತೆ ಅಕ್ಕಿ ಕೊಟ್ಟವ ಕುಡಿಯಲು ನೀರು ಕೇಳಿದ್ದಾನೆ. ಆಕೆ ಒಳಗೆ ಹೋಗುತ್ತಿದ್ದಂತೆ ಒಳಗಿನಿಂದ ಬಾಗಿಲು ಹಾಕಿ ಚಾಕು ತೋರಿಸಿ ಬೆದರಿಸಿ ಬಟ್ಟೆ ಬಿಚ್ಚಿಸಿ ವಿಡಿಯೋ ಮಾಡಿಕೊಂಡಿದ್ದಾನೆ. ಈ ವಿಡಿಯೋ ಇಟ್ಟುಕೊಂಡು ನನ್ನ ಬಳಿ 25 ಲಕ್ಷ ರೂಪಾಯಿ ಕೊಡುವಂತೆ ಬೇಡಿಕೆ ಇಟ್ಟಿದ್ದಾನೆ. ಜತೆಗೆ ಅನೈತಿಕ ಚಟುವಟಿಕೆ ನಡೆಸಲು ಯುವತಿಯನ್ನ ಕಳಿಸಬೇಕು. ಇಲ್ಲವಾದಲ್ಲಿ ಈ ವಿಡಿಯೋವನ್ನು ವೈರಲ್​ ಮಾಡುತ್ತೇನೆ ಎಂದು ಬ್ಲ್ಯಾಕ್​ಮೇಲ್​ ಮಾಡುತ್ತಿದ್ದಾನೆ' ಎಂದು ಸಂತ್ರಸ್ತೆಯ ತಾಯಿ ದೂರಿನಲ್ಲಿ ವಿವರಿಸಿದ್ದಾರೆ.

ಆರೋಪಿಯ ಬ್ಲ್ಯಾಕ್​ಮೇಲ್​ಗೆ ರೋಸಿಹೋದ ಸಂತ್ರಸ್ತೆಯ ತಾಯಿ ಮಾ.23ರಂದು ಹಳೇ ಹುಬ್ಬಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net