

ಮಂಡ್ಯ: ಸಾರಿಗೆ ನೌಕರರ ಮುಷ್ಕರ ಪ್ರಯಾಣಿಕರ ಕೈ ಸುಡುತ್ತಿದೆ. 90 ರೂಪಾಯಿ ಇದ್ದ ಬಸ್ ಟಿಕೆಟ್ ದರ ಇಂದು 150ರಿಂದ 180 ರೂಪಾಯಿ ಆಗಿದ್ದು, ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹೌದು, ಮಂಡ್ಯದಿಂದ ಮೈಸೂರಿಗೆ ಕೆಎಸ್ಆರ್ಟಿಸಿ ಬಸ್ನಲ್ಲಿ ಟಿಕೆಟ್ ದರ 90 ರೂಪಾಯಿ. ಪ್ರತಿಭಟನೆ ಹಿನ್ನೆಲೆ ಮಂಡ್ಯದಲ್ಲಿ ಸಾರಿಗೆ ಬಸ್ಗಳು ರಸ್ತೆಗಿಳಿದಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಬಸ್ನವರು ಟಿಕೆಟ್ ದರವನ್ನ 150 ರಿಂದ 180 ರೂಪಾಯಿಗೆ ನಿಗದಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿರಿ ಪ್ರಿಯಕರನ ಮನೆಗೆ ಬೆಂಕಿ ಇಟ್ಟ ಪ್ರೀತಿಯ ಕಿಚ್ಚು! ಪ್ರೇಯಸಿಯೊಂದಿಗೆ ಇರುವಾಗಲೇ ನಡೆಯಿತು ದುರಂತ
ಬಸ್ ನಿಲ್ದಾಣ ಮುಂಭಾಗ ಸಾಲುಗಟ್ಟಿ ನಿಂತು ಪ್ರಯಾಣಿಕರು ವಿಧಿ ಇಲ್ಲದೆ ಖಾಸಗಿ ಬಸ್ ಅನ್ನೇ ಹತ್ತುತ್ತಿದ್ದ ದೃಶ್ಯ ಕಂಡುಬಂತು. ಬೆಂಗಳೂರು ಮತ್ತು ಮೈಸೂರು ಕಡೆಗೆ ಖಾಸಗಿ ಬಸ್ಗಳ ಪ್ರಯಾಣ ಆರಂಭವಾಗಿದೆ.
ಸ್ಥಳಕ್ಕೆ ಬಂದ ಮಂಡ್ಯದ ಪಶ್ಚಿಮ ಠಾಣೆ ಸಬ್ ಇನ್ಸ್ಪೆಕ್ಟರ್ ವೆಂಕಟೇಶ್, ಬೆಂಗಳೂರಿಗೆ ಜನರನ್ನ ಹತ್ತಿಸಿಕೊಳ್ಳುವಂತಿಲ್ಲ. ಮದ್ದೂರು, ಚನ್ನಪಟ್ಟಣ ರಾಮನಗರ ಬಳಿ ಸ್ಟಾಪ್ ಕೊಡಬೇಕು. ಕೆಎಸ್ಆರ್ಟಿಸಿ ಬಸ್ಗಳ ರೀತಿಯಲ್ಲೇ ಜನರನ್ನ ಕರೆದೊಯ್ಯುಬೇಕು. ಹೆಚ್ಚು ದರ ವಸೂಲಿ ಮಾಡುವಂತಿಲ್ಲ ಎಂದು ಖಡಕ್ ವಾರ್ನಿಂಗ್ ಕೊಟ್ಟರು.
ಈ ವೇಳೆ ಸ್ಥಳದಲ್ಲೇ ಇದ್ದ ಪ್ರಯಾಣಿಕನೊಬ್ಬ ಬೆಂಗಳೂರಿಗೆ ಹೋಗಲು 150 ರೂಪಾಯಿ ಕೊಡಬೇಕಂತೆ. ನಾನು ಹೋಗಲ್ಲ ಸರ್, ಅಷ್ಟೊಂದು ಹಣ ಇಲ್ಲ ಎಂದ ಕೂಡಲೇ ಗರಂ ಆದ ವೆಂಕಟೇಶ್, ಜನರಿಂದ ಹೆಚ್ಚು ಹಣ ವಸೂಲಿ ಮಾಡಿದ್ರೆ ವಾಹನ ಸೀಜ್ ಮಾಡಬೇಕಾಗುತ್ತೆ ಎಂದು ಎಚ್ಚರಿಸಿದರು.