

ಬೆಂಗಳೂರು: ದಿನೇದಿನೆ ಕೊವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣಕ್ಕೆ ಕೇವಲ ಸರ್ಕಾರಿ ಆಸ್ಪತ್ರೆಗಳಲ್ಲದೆ, ಖಾಸಗಿ ಆಸ್ಪತ್ರೆಗಳಲ್ಲೂ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಖಾಸಗಿ ಆಸ್ಪತ್ರೆಗಳು ಕೊವಿಡ್ ಸೋಂಕಿತರಿಗೆ ಚಿಕಿತ್ಸೆ ನಿರಾಕರಿಸುವಂತಿಲ್ಲ, ಹಾಸಿಗೆ ಇಲ್ಲ ಎಂದು ಹಿಂದೆ ಕಳಿಸುವಂತಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ.
ಅಷ್ಟೇ ಅಲ್ಲ, ಸೋಂಕಿತರಿಗೆ ಚಿಕಿತ್ಸೆ ನೀಡಲು ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರು ಖಡಕ್ ಆಗಿ ಹೇಳಿದ್ದಾರೆ. ಇದನ್ನೂ ಓದಿ: ಲೈಂಗಿಕ ಸಂಪರ್ಕಕ್ಕೆ ಒಪ್ಪದ ಸ್ವಚ್ಛತಾ ಕಾರ್ಮಿಕಳನ್ನು ಪತ್ನಿಗೆ ಹೇಳಿ ಕೆಲಸದಿಂದ ತೆಗೆಸಿದ ಕಾಮುಕ…
ಇಷ್ಟಾದರೂ ಬೆಂಗಳೂರಿನ ಎರಡು ಆಸ್ಪತ್ರೆಗಳು ಸರ್ಕಾರವೇ ಶಿಫಾರಸು ಮಾಡಿದ ಕೊವಿಡ್-19 ರೋಗಿಗಳಿಗೆ ಪ್ರವೇಶ ನಿರಾಕರಿಸಿ ವಿವಾದ ಸೃಷ್ಟಿಸಿವೆ. ಕೊವಿಡ್-19 ರೋಗಿಗಳ ಚಿಕಿತ್ಸೆಗೆ ನಿರಾಕರಿಸಿದ ವಿಕ್ರಮ್ ಆಸ್ಪತ್ರೆ ಮತ್ತು ಸಾಗರ್ ಅಪೊಲೋ ಆಸ್ಪತ್ರೆಗಳಿಗೆ ದಿಢೀರ್ ಕೊಟ್ಟ ಆರೋಗ್ಯ ಇಲಾಖೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಸರ್ಕಾರದ ಆದೇಶಗಳನ್ನು ಪಾಲನೆ ಮಾಡದೆ ಇದ್ದರೆ, ಆಸ್ಪತ್ರೆಗಳನ್ನು ಸೀಲ್ಡೌನ್ ಮಾಡುವುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.