More

    ಲೈಂಗಿಕ ಸಂಪರ್ಕಕ್ಕೆ ಒಪ್ಪದ ಸ್ವಚ್ಛತಾ ಕಾರ್ಮಿಕಳನ್ನು ಪತ್ನಿಗೆ ಹೇಳಿ ಕೆಲಸದಿಂದ ತೆಗೆಸಿದ ಕಾಮುಕ…

    ಫಿಲಿಬಿತ್​: ಸ್ವಚ್ಛತಾ ಕಾರ್ಮಿಕ ಮಹಿಳೆಗೆ ಒಂದು ವರ್ಷದಿಂದ ಲೈಂಗಿಕ ದೌರ್ಜನ್ಯ ನೀಡುತ್ತಿದ್ದ ಪಟ್ಟಣ ಪಂಚಾಯಿತಿ ಅಧ್ಯಕ್ಷೆಯ ಪತಿ ಅರೆಸ್ಟ್​ ಆಗಿದ್ದಾನೆ.

    ಉತ್ತರ ಪ್ರದೇಶದ ಫಿಲಿಬಿತ್​ ಜಿಲ್ಲೆಯ ಜಹನಾಬಾದ್​ ಪಟ್ಟಣದಲ್ಲಿ ಘಟನೆ ನಡೆದಿದೆ. ಆರೋಪಿಯನ್ನು ದುರ್ಗಾಚರಣ್ ಗುಪ್ತಾ ಅಲಿಯಾಸ್​ ಅಣ್ಣ ಎಂದು ಗುರುತಿಸಲಾಗಿದೆ.

    40 ವರ್ಷದ ಈ ಮಹಿಳೆಯೊಂದಿಗೆ ಅಧ್ಯಕ್ಷೆಯ ಗಂಡ ಸದಾ ಅಶ್ಲೀಲವಾಗಿ ಮಾತನಾಡುತ್ತಿದ್ದ. ಲೈಂಗಿಕವಾಗಿ ಸಹಕರಿಸಲು ಹೇಳುತ್ತಿದ್ದ. ಅಷ್ಟೇ ಅಲ್ಲ ಎಷ್ಟೋ ಬಾರಿ ರೇಪ್​ ಮಾಡಲೂ ಯತ್ನಿಸಿದ್ದ. ನೋಡಿ ನೋಡಿ ಬೇಸತ್ತಿದ್ದ ಸ್ವಚ್ಛತಾ ಕಾರ್ಮಿಕಳು ಅವನ ಮಾತುಗಳನ್ನು ರೆಕಾರ್ಡ್​ ಮಾಡಿಟ್ಟುಕೊಂಡಿದ್ದಳು. ಅದು ಗೊತ್ತಾಗ ಆ ವ್ಯಕ್ತಿ, ತನ್ನ ಪತ್ನಿಗೆ ಕೇಳಿ, ಕೆಲಸದಿಂದ ತೆಗೆಯುವ ಬೆದರಿಕೆ ಹಾಕುತ್ತಿದ್ದ.

    ಅವನ ಕಿರುಕುಳ ನೋಡಿ ಸಾಕಾದ ಮಹಿಳೆ ಕೊನೆಗೂ ಧೈರ್ಯ ಮಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿ, ದೂರನ್ನೂ ನೀಡಿದ್ದಾಳೆ. ತನ್ನ ಪತ್ನಿ ಪಟ್ಟಣ ಪಂಚಾಯಿತಿಯ ಕಚೇರಿಯಲ್ಲಿ ಇಲ್ಲದಾಗ ಎಷ್ಟೋ ಬಾರಿ ಅವನು ನನ್ನ ಕರೆದಿದ್ದ ಎಂದೂ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಅವನೊಂದಿಗೆ ಸಹಕರಿಸಿದರೆ ಕೆಲಸವನ್ನೇ ಮಾಡದಿದ್ದರೂ, ಸಂಬಳ ಕೊಡಿಸುತ್ತೇನೆ ಎಂದೂ ಹೇಳಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

    ಕೊನೆಗೂ ಸೆಕ್ಸ್​ಗೆ ಸಹಕರಿಸಿದ ಆ ಮಹಿಳೆಯ ಮೇಲೆ ಸುಳ್ಳು ಆರೋಪ ಹೊರೆಸಿ, ತನ್ನ ಪತ್ನಿಯ ಅಧಿಕಾರ ಬಳಸಿ ಕೆಲಸದಿಂದ ತೆಗೆಸಿದ್ದ. ತನ್ನ ಕೆಲಸ ಹೋಗುತ್ತಿದ್ದಂತೆ ಆಕೆ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಕಾಮುಕ ಸಿಕ್ಕಿಬಿದ್ದಿದ್ದಾನೆ. (ಏಜೆನ್ಸೀಸ್​)

    ಅಯೋಧ್ಯೆ ವಿಚಾರದಲ್ಲಿ ವಿವಾದ ಸೃಷ್ಟಿಸಿದ ನೇಪಾಳ ಪ್ರಧಾನಿ; ಶ್ರೀರಾಮ ಭಾರತೀಯನೇ ಅಲ್ಲ ಎಂದ ಓಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts