VIRAL VIDEO | ವನ್ಯ ಜೀವಿಗಳ ಜತೆ ಮಕ್ಕಳ ಸೆಲ್ಫಿ! ಮಳೆ ಬಂದಾಗ ಈ ಬಸ್​ಸ್ಟ್ಯಾಂಡ್​ ಜಿಂಕೆಗಳಿಗೆ ಆಸರೆ…

rainedeer
Published on

ಜಪಾನ್: ಇತಿಹಾಸಪೂರ್ವ ಯುಗದಲ್ಲಿ ಪ್ರಾಣಿಗಳು ಮತ್ತು ಮನುಷ್ಯರು ಒಂದೇ ಪರಿಸರದಲ್ಲಿದ್ದು ಸಹಬಾಳ್ವೆ ನಡೆಸುತ್ತಿದ್ದದ್ದು ಎಲ್ಲರಿಗೂ ಗೊತ್ತೇ ಇದೆ. ಸಮಯ ಬದಲಾದ ಹಾಗೆ ಮತ್ತು ಮಾನವ ವಿಕಾಸ ಹೊಂದಿದ ಹಾಗೆಯೇ, ಸಹಬಾಳ್ವೆಯ ಸಮೀಕರಣ ಕ್ರಮೇಣ ಬದಲಾಗುತ್ತಾ ಬಂದಿದೆ. ನಾಗರಿಕತೆ ಬೆಳೆಯಲು ಶುರುವಾದಾಗ, ಪ್ರಾಣಿಗಳು ಕಾಡಿನಲ್ಲಿ ವಾಸಿಸುವುದನ್ನು ಮುಂದುವರೆಸಿದ್ದು ಮಾನವರು ತಮ್ಮದೇ ಆದ ವಾಸಸ್ಥಾನಗಳನ್ನು ನಿರ್ಮಿಸಲು ಪ್ರಾರಂಭಿಸಿದರು.

ನಾವು ಕಾಡುಗಳನ್ನು ಕತ್ತರಿಸಿ ಕಾಂಕ್ರೀಟ್ ಕಟ್ಟಡಗಳನ್ನು ರಚಿಸಲು ಪ್ರಾರಂಭಿಸಿದಾಗಿನಿಂದ, ಪ್ರಾಣಿಗಳು ಹೆಚ್ಚಾಗಿ ನಗರ ಪರಿಸರಕ್ಕೆ ಪ್ರವೇಶಿಸುವುದನ್ನು ಕಾಣಬಹುದು. ಇಂದಿಗೂ ಸಹ, ಕಾಡು ಪ್ರಾಣಿಗಳು ಆಹಾರಕ್ಕಾಗಿ ಅಥವಾ ಇತರ ಅವಶ್ಯಕತೆಗಳಿಗಾಗಿ ಮಾನವ ಪ್ರದೇಶಗಳಿಗೆ ಬರುವುದನ್ನು ನಾವು ನೋಡುತ್ತೇವೆ. ಇತ್ತೀಚೆಗಷ್ಟೇ ಜಪಾನ್‌ನಲ್ಲಿ ಜಿಂಕೆಗಳ ಹಿಂಡು ಭಾರೀ ಮಳೆಯ ನಡುವೆ ಕಟ್ಟಡದ ಕೆಳಗೆ ಮನುಷ್ಯರ ಜೊತೆಯಲ್ಲಿ ಆಶ್ರಯ ಪಡೆದಿರುವ ಘಟನೆ ನಡೆದಿದೆ. ಕೆಲವೇ ಕ್ಷಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.

ಈ ವೈರಲ್ ಆಗಿರುವ ವೀಡಿಯೊವನ್ನು ಜುಲೈ 26 ರಂದು ತನ್ನು ಯೆಗೆನ್ ಎಂಬ ನೆಟ್ಟಿಗರು ಟ್ವಿಟ್ ಮಾಡಿದ್ದಾರೆ. ಧಾರಾಕಾರ ಮಳೆಯ ನಡುವೆ ಜಪಾನ್‌ನ ನಾರಾ ನಗರದಲ್ಲಿ ಬಹುತೇಕ ಎಲ್ಲಾ ಬೀದಿಗಳು ಖಾಲಿ ಬಿದ್ದಿದ್ದು, ವ್ಯಕ್ತಿ ನಿಂತಿದ್ದ ಬಸ್​ಸ್ಟ್ಯಾಂಡ್​ನಲ್ಲಿ ಮನುಷ್ಯರೊಂಗಿಗೆ ಜಿಂಕೆಗಳು ನಿರ್ಭಯವಾಗಿ ಆಶ್ರಯ ಪಡೆದಿರುವುದನ್ನು ಕಾಣಬಹುದು. ಈ ನೋಟ ಎಷ್ಟು ಸುಂದರ ಎಂದರೆ, ಪ್ರತಿಯೊಬ್ಬ ನೋಡುಗನಿಗೂ ಆಹಾ ಎಂದು ಹೇಳಿವಂತೆ ಮಾಡಿಬಿಡುತ್ತದೆ.

ಭಾರೀ ಮಳೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಜಿಂಕೆಗಳ ಹಿಂಡು ಬಸ್​ಸ್ಟ್ಯಾಂಡ್​ ಕೆಳಗೆ ಜನರ ಗುಂಪಿನ ಜತೆಗೇ ಆಶ್ರಯವನ್ನು ಹಂಚಿಕೊಳ್ಳುವುದನ್ನು ವಿಡಿಯೋ ಸೆರೆಹಿಡಿದಿದೆ. ಕೆಲವು ಜಿಂಕೆಗಳು ನೆಲದ ಮೇಲೆ ಕೂತಿದ್ದರೆ, ಇನ್ನು ಕೆಲವು ಜಿಂಕೆಗಳು ಆವರಣದಲ್ಲಿ ತಿರುಗಾಡುತ್ತಿರುವುದು ಕಂಡುಬರುತ್ತದೆ. ಜಿಂಕೆಯ ಹಿಂಡು ಮಳೆಯಲ್ಲಿ ಸಿಲುಕಿದ್ದು ಪ್ರಯಾಣಿಕರು ತುಂಬಾ ಹತ್ತಿರದಿಂದ ಪ್ರಾಣಿಗಳನ್ನು ವೀಕ್ಷಿಸಲು ಉತ್ಸುಕರಾಗಿದ್ದರು. ಕೆಲವರು ಅವುಗಳೊಂದಿಗೆ ಚಿತ್ರಗಳನ್ನೂ ಕ್ಲಿಕ್ಕಿಸಿಕೊಂಡರು. ಆಶ್ಚರ್ಯಕರವಾಗಿ, ಮನುಷ್ಯರಿಗೆ ತುಂಬಾ ಹತ್ತಿರವಾಗಿದ್ದರೂ, ಅವು ವಿಚಲಿತರಾದಂತೆ ಕಾಣಿಸುತ್ತಿಲ್ಲ.

ಅಂತರ್ಜಾಲದಲ್ಲಿ ವಿಡಿಯೋ ಕಾಣಿಸಿಕೊಂಡ ನಂತರ, ಜನರು ಅದ್ಭುತವಾಗಿ ಪ್ರತಿಕ್ರಿಯಿಸಿದ್ದಾರೆ. ಒಬ್ಬ ಬಳಕೆದಾರನು "ಇದನ್ನು ನೋಡುವುದೇ ನಿಜವಾಗಿಯೂ ಒಂದು ಅದ್ಭುತ. ಇದು ಅಕ್ಕಪಕ್ಕದಲ್ಲಿ ತೋರಿಸುವ ಶಾಂತತೆ... ತುಂಬಾ ಸಂತೋಷವಾಗಿದೆ", ಮತ್ತೊಬ್ಬರು "ಜಿಂಕೆ ಸಂವೇದನಾಶೀಲ ಪ್ರಾಣಿಗಳು. ಅವು ಮನುಷ್ಯರ ಜತೆ ಇಂತಹ ಸಾಮರಸ್ಯದ ಸಂಬಂಧವನ್ನು ಹೊಂದಿರುವುದು ನಿಜವಾಗಿಯೂ ಗಮನಾರ್ಹ ವಿಚಾರವಾಗಿದೆ. ಜನರ ಸಮ್ಮುಖದಲ್ಲಿ ಸುರಕ್ಷಿತವಾಗಿ ಮತ್ತು ಸುಲಭವಾಗಿ ಮಾನವರು ವನ್ಯಜೀವಿಗಳೊಂದಿಗೆ ಹೇಗೆ ಶಾಂತಿಯುತವಾಗಿ ಸಹಬಾಳ್ವೆ ನಡೆಸಬಹುದು ಎಂಬುದಕ್ಕೆ ಇದು ಉದಾಹರಣೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net