More

    ಸೀಮೆಬದನೆ ರೂಪದ ಮಾವಿನ ಹಣ್ಣು! ಉಡುಪಿಯಲ್ಲಿ ಪ್ರಕೃತಿ ವೈಚಿತ್ರ್ಯ ಪತ್ತೆ…

    ಉಡುಪಿ: ರೂಪ, ಬಣ್ಣ ಬದಲಿಸಿಕೊಳ್ಳುವ ಪ್ರಾಣಿಗಳ ಬಗ್ಗೆ ಕೇಳಿರುತ್ತೇವೆ. ಆದರೆ ಎಲ್ಲಾದರೂ ಆಕಾರ ಬದಲಿಕೊಂಡಿರುವ ಮಾವಿನ ಹಣ್ಣಿನ ಬಗ್ಗೆ ಕೇಳಿದ್ದೀರಾ? ಬೇವಿನ ಮರದ ಮೇಲೆ ಮಾವಿನ ಹಣ್ಣು ಹೇಗೆ ಬೆಳೆಯುವುದಿಲ್ಲವೋ, ಹಾಗೆಯೇ ಇದೂ ಅಸಾಧ್ಯ.

    ಆದೆರೆ ಉಡುಪಿ ಜಿಲ್ಲೆಯ ಕೋಟದಲ್ಲಿ ಮಾತ್ರ ಈ ಮಾವಿನ ಹಣ್ಣುಗಳು ಪ್ರಕೃತಿ ವೈಚಿತ್ರ್ಯವನ್ನು ತೋರಿಸಿ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ. ಈ ಮಾವಿನ ಹಣ್ಣುಗಳು ಸೀಮೆ ಬದನೆಕಾಯಿ ರೂಪದಲ್ಲಿದ್ದು ಉದ್ಯಮಿ ಕೋಟ ಸುಬ್ರಾಯ ಆಚಾರ್ಯ ಅವರ ಮನೆಯಲ್ಲಿ ಬೆಳೆದಿವೆ.

    ಸಾಮಾನ್ಯವಾಗಿ ಎಲ್ಲಾ ಮಾವಿನ ಹಣ್ಣುಗಳು ಒಂದೇ ರೂಪದಲ್ಲಿರುತ್ತವೆ. ಕೆಲವು ದೊಡ್ಡವು, ಕೆಲವು ಚಿಕ್ಕವು. ಆದರೆ ಈ ಹಣ್ಣುಗಳನ್ನು ಮಾವು ಎಂದು ಗುರುತಿಸುವುದೆ ಕಷ್ಟ. ಆ ಆಕೃತಿಯಲ್ಲಿ ಬೆಳೆದಿವೆ ಇವು. ಇವುಗಳನ್ನು ಕೇವಲ ವಾಸನೆ ಆದಾರದ ಮೇಲೆ ಗುರುತಿಲು ಸಾಧ್ಯ.

    ಸದ್ಯ ಕೃಷಿ ತಜ್ಞರಿಗೆ ಈ ಅಪರೂಪದ ಮಾವಿನ ಹಣ್ಣುಗಳು ಸವಾಲಾಗಿವೆ. ಈ ಬಗ್ಗೆ ಮಾಲಕ ಸುಬ್ರಾಯ ಆಚಾರ್ಯ ಪ್ರತಿಕ್ರಿಯೆ ನೀಡಿದ್ದು “ನಮ್ಮ ಮನೆಯಲ್ಲಿ ಸುಮಾರು 35 ವರ್ಷದಿಂದ ಮಾವಿನ ಹಣ್ಣು ಬಿಡುತ್ತಿದೆ. ಇದೇ ಮೊದಲ ಬಾರಿಗೆ ಸಾಮಾನ್ಯ ಮಾವಿನ ಹಣ್ಣುಗಳ ಜೊತೆ ಐದಾರು ಮಾವಿನ ಕಾಯಿ‌ ಈ ರೂಪ ತಾಳಿವೆ.

    ಇದರ ಪರಿಮಳ ಹಾಗೂ ಒಳಭಾಗದ ಬಣ್ಣ ಎಲ್ಲವೂ ಮಾವಿನ ಕಾಯಿಯಂತಿದೆ. ಮೊದಲ ಬಾರಿ ಸೀತಾಫಲದ ರೂಪದಲ್ಲಿ ಮಾವಿನ ಕಾಯಿ ಕಂಡಿದೆ. ಇದಕ್ಕೆ ಹಿನ್ನಲೆ ಏನು ಅನ್ನೋದನ್ನ ‌ಕೃಷಿ ತಜ್ಞರ ಮೂಲಕವೇ ತಿಳಿಯಬೇಕಿದೆ” ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts