More

    26/11 ಮುಂಬೈ ದಾಳಿ ಪ್ರಕರಣದ ಆರೋಪಿ ತಹಾವ್ವುರ್ ರಾಣಾ ಭಾರತಕ್ಕೆ

    ನವದೆಹಲಿ: 2008ರ ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಭಾಗಿಯಾಗಿರುವ ಪಾಕಿಸ್ತಾನಿ ಮೂಲದ ಕೆನಡಾದ ಉದ್ಯಮಿ ತಹವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಅಮೆರಿಕ ಸರ್ಕಾರದ ಮೂಲಕ ಸಲ್ಲಿಸಲಾಗಿದ್ದ ಭಾರತೀಯ ಮನವಿಗೆ ಅಮೆರಿಕ ನ್ಯಾಯಾಲಯವು ಸಮ್ಮತಿಸಿದೆ.

    ಜೂನ್ 10, 2020 ರಂದು, ಹಸ್ತಾಂತರದ ದೃಷ್ಟಿಯಿಂದ 62 ವರ್ಷದ ರಾಣಾ ಅವರನ್ನು ತಾತ್ಕಾಲಿಕವಾಗಿ ಬಂಧಿಸುವಂತೆ ಭಾರತವು ದೂರು ಸಲ್ಲಿಸಿತ್ತು. ಬಿಡೆನ್ ಆಡಳಿತವು ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವುದನ್ನು ಬೆಂಬಲಿಸಿ ಅನುಮೋದಿಸಿದೆ.

    ಇದನ್ನೂ ಓದಿ: ಮುಂಬೈ ದಾಳಿಕೋರರನ್ನು ಹಿಡಿಯಲು ಭಾರತ ಶ್ರಮಿಸುತ್ತಿದೆ: ವಿದೇಶಾಂಗ ಸಚಿವರ ಮಹತ್ವದ ಹೇಳಿಕೆ

    “ಕೋರ್ಟ್ ವಿನಂತಿಯನ್ನು ಬೆಂಬಲಿಸಿ ಮತ್ತು ವಿರೋಧವಾಗಿ ಸಲ್ಲಿಸಲಾಗಿದ್ದ ಎಲ್ಲಾ ದಾಖಲೆಗಳನ್ನು ಪರಿಗಣಿಸಿ ಪರಿಶೀಲಿಸಿದ್ದು ವಿಚಾರಣೆಯಲ್ಲಿ ಪ್ರಸ್ತುತಪಡಿಸಲಾದ ವಾದಗಳನ್ನು ಪರಿಗಣಿಸಿದೆ” ಎಂದು ನ್ಯಾಯಾಧೀಶ ಜಾಕ್ವೆಲಿನ್ ಚೂಲ್ಜಿಯಾನ್, ಅಮೆರಿಕ ಡಿಸ್ಟ್ರಿಕ್ಟ್ ಕೋರ್ಟ್ ಸೆಂಟ್ರಲ್ ಡಿಸ್ಟ್ರಿಕ್ಟ್ ಆಫ್ ಕ್ಯಾಲಿಫೋರ್ನಿಯಾದ ಅಮೆರಿಕದ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರು ಬುಧವಾರ ಬಿಡುಗಡೆಯಾದ ಮೇ 16ರ 48 ಪುಟಗಳ ನ್ಯಾಯಾಲಯದ ಆದೇಶದಲ್ಲಿ ತಿಳಿಸಿದ್ದಾರೆ.

    ಇದನ್ನೂ ಓದಿ: ಮುಂಬೈ ದಾಳಿಕೋರರನ್ನು ಹಿಡಿಯಲು ಭಾರತ ಶ್ರಮಿಸುತ್ತಿದೆ: ವಿದೇಶಾಂಗ ಸಚಿವರ ಮಹತ್ವದ ಹೇಳಿಕೆ

    ಈ ದಾಳಿಯಲ್ಲಿನ ಪಾತ್ರಕ್ಕಾಗಿ ಭಾರತದ ಹಸ್ತಾಂತರ ಕೋರಿಕೆಯ ಮೇರೆಗೆ ರಾಣಾನನ್ನು ಯುಎಸ್‌ನಲ್ಲಿ ಬಂಧಿಸಲಾಯಿತು. 2008ರಲ್ಲಿ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರು ನಡೆಸಿದ 26/11 ಮುಂಬೈ ದಾಳಿಯಲ್ಲಿ ಈತನ ಪಾತ್ರದ ಬಗ್ಗೆ ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ನಡೆಸುತ್ತಿದೆ. ಈ ಮೂಲಕ ಆತನನ್ನು ಭಾರತಕ್ಕೆ ಕರೆತರಲು ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಸಿದ್ಧವಾಗಿದೆ ಎಂದು ಎನ್‌ಐಎ ಹೇಳಿದೆ.

    ನ್ಯಾಯಾಲಯದ ವಿಚಾರಣೆಯ ಸಂದರ್ಭದಲ್ಲಿ, ರಾಣಾ ತನ್ನ ಬಾಲ್ಯದ ಸ್ನೇಹಿತ ಪಾಕಿಸ್ತಾನಿ-ಅಮೆರಿಕನ್ ಡೇವಿಡ್ ಕೋಲ್ಮನ್ ಹೆಡ್ಲಿ ಲಷ್ಕರ್-ಎ-ತೊಯ್ಬಾ (LeT) ನೊಂದಿಗೆ ಭಾಗಿಯಾಗಿದ್ದಾನೆ ಎಂದು ತಿಳಿದಿದ್ದು ಹೆಡ್ಲಿಗೆ ಸಹಾಯ ಮಾಡುವ ಮೂಲಕ ಮತ್ತು ಅವನ ಚಟುವಟಿಕೆಗಳಿಗೆ ರಕ್ಷಣೆ ನೀಡುವ ಮೂಲಕ ಅವರು ಬೆಂಬಲಿಸುತ್ತಿದ್ದಾರೆ ಎಂದು ಅಮೆರಿಕ ಸರ್ಕಾರದ ವಕೀಲರು ವಾದಿಸಿದರು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts