More

    ಮುಂಬೈ ದಾಳಿಕೋರರನ್ನು ಹಿಡಿಯಲು ಭಾರತ ಶ್ರಮಿಸುತ್ತಿದೆ: ವಿದೇಶಾಂಗ ಸಚಿವರ ಮಹತ್ವದ ಹೇಳಿಕೆ

    ನವದೆಹಲಿ: ‘2008 ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ತಮ್ಮ ನಾಗರಿಕರನ್ನು ಕಳೆದುಕೊಂಡ ಹಲವಾರು ದೇಶಗಳೊಂದಿಗೆ ಭಾರತ ಕೆಲಸ ಮಾಡುತ್ತಿದೆ’ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

    ‘ನಿಜವಾದ ಅಪರಾಧಿಗಳು ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳುತ್ತೇವೆ. ಆ ಘಟನೆ ಇಡೀ ದೇಶವೇ ನೆನಪಿಸಿಕೊಳ್ಳುವ ವಿಷಯ. ಆ ಘಟನೆಗೆ ಕಾರಣರಾದವರನ್ನು ನ್ಯಾಯಾಲಯದ ಕಟಕಟೆಗೆ ತಂದು ಆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಾವು ನಿರ್ಧರಿಸಿದ್ದೇವೆ’ ಎಂದು ಸಚಿವ ಜೈಶಂಕರ್ ಹೇಳಿದ್ದಾರೆ.

    ‘ಇಂದು ಮುಂಬೈನಲ್ಲಿ ನಡೆದ 26/11 ಭಯೋತ್ಪಾದಕ ದಾಳಿ ನಡೆದು 14 ವರ್ಷಗಳಾಗಿವೆ. ಇಷ್ಟು ವರ್ಷಗಳ ನಂತರವೂ ದಾಳಿಯನ್ನು ಯೋಜಿಸಿದವರಿಗೆ ಶಿಕ್ಷೆಯಾಗಿಲ್ಲ, ಅವರನ್ನು ನ್ಯಾಯಾಲಯದ ಕಟಕಟೆಗೆ ತರಲಾಗಿಲ್ಲ, ಇನ್ನು ನಾವು ಈ ವಿಷಯದ ಮೇಲೆ ಗಮನ ಹರಿಸಲಿದ್ದೇವೆ’ ಎಂದು ವಿದೇಶಾಂಗ ಸಚಿವರು ಹೇಳಿದ್ದಾರೆ.

    2008 ರಲ್ಲಿ, 10 ಲಷ್ಕರ್-ಎ-ತೊಯ್ಯಾ ಭಯೋತ್ಪಾದಕರು (ಎಲ್‌ಇಟಿ) 12 ಸಂಘಟಿತ ಗುಂಡಿನ ದಾಳಿ ಮತ್ತು ಬಾಂಬ್ ದಾಳಿಗಳನ್ನು ನಡೆಸಿ ಕನಿಷ್ಠ 166 ಜನರನ್ನು ಕೊಂದಿದ್ದರು. ಅಂದು 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

    ಯೂಕ್ರೇನ್​ ಯುದ್ಧದ ವೇಳೆಯೂ ಸಾವಿರಾರು ಜನ ವಿದ್ಯಾರ್ಥಿಗಳನ್ನು ಯುದ್ಧ ಪೀಡಿತ ಪ್ರದೇಶದಿಂದ ಭಾರತ ಸರ್ಕಾರ ಕರೆತಂದಿತ್ತು. ನಿನ್ನೆ ತಾನೆ ಜಾಗತಿಕ ನಾಯಕರ ಪಟ್ಟಿ ಬಿಡುಗಡೆಯಾಗಿದ್ದು ಅದರಲ್ಲಿ ಪ್ರಧಾನಿ ಮೋದಿಯ ಹೆಸರು ಅಗ್ರಸ್ಥಾನದಲ್ಲಿದೆ. ಹೀಗಾಗಿ ಭಾರತದ ಬಳಿ ಈಗ ಮುಂಬೈ ದಾಳಿಗೆ ಸಂಬಂಧಪಟ್ಟ ಎಲ್ಲಾ ಉಗ್ರರನ್ನು ಹಿಡಿಯಲು ಬೇಕಾದ ರಾಜಕೀಯ ಶಕ್ತಿ ಇದೆ. ಹೀಗಾಗಿ ವಿದೇಶಾಂಗ ಸಚಿವರ ಈ ಹೇಳಿಕೆ ಭಾರಿ ಸುದ್ದಿಗೆ ಗ್ರಾಸವಾಗುತ್ತಿದೆ.

    ಕಳೆದ ತಿಂಗಳು, ಭಯೋತ್ಪಾದನಾ ನಿಗ್ರಹ ಸಮಿತಿಯ (CTC) ಭಾರತೀಯ ಅಧ್ಯಕ್ಷತೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (UNSC) ಎರಡು ದಿನಗಳ ಕಾಲ ಭಯೋತ್ಪಾದನಾ ವಿರೋಧಿ ಸಭೆಯನ್ನು ಆಯೋಜಿಸಿತ್ತು. ಈ ಸಭೆಯ ಎರಡು ದಿನಗಳ ನಂತರ ಜೈಶಂಕರ್​ ಈ ಹೇಳಿಕೆ ನೀಡಿದ್ದು ಅದಕ್ಕೆ ಸಂಬಂಧ ಪಟ್ಟ ಎಲ್ಲಾ ತಯಾರಿಗಳನ್ನು ಸರ್ಕಾರ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts