More

    ದಾವಣಗೆರೆ ಎಸ್ಸೆಸ್ಸೆಲ್ಸಿ ಟಾಪರ್ ಆರ್.ಚೇತನಾಗೆ ಭಾರತೀಯ ವಿದೇಶಾಂಗ ಸೇವೆಯ ಗುರಿ

    ದಾವಣಗೆರೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಇಲ್ಲಿನ ಸಿದ್ದಗಂಗಾ ಶಾಲೆಯ ವಿದ್ಯಾರ್ಥಿನಿ ಆರ್.ಚೇತನಾ 625ಕ್ಕೆ 624 ಅಂಕ ಗಳಿಸಿ ದಾವಣಗೆರೆ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾಳೆ.

    ಚೇತನಾ, ಹೊನ್ನಾಳಿ ತಾಲೂಕು ದಿಡಗೂರು ಮೂಲದವರಾದ, ದಾವಣಗೆರೆ ನಿಟುವಳ್ಳಿ ನಿವಾಸಿ ರಘುನಾಥ ಡಿ. ಜಗತಾಪ್-ರೇಣುಕಾಬಾಯಿ ದಂಪತಿಯ ಪುತ್ರಿ. ಸೈನಿಕ ಸೇವೆಯಿಂದ ನಿವೃತ್ತರಾಗಿರುವ ರಘುನಾಥ, ಟವರ್ ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
    ಕನ್ನಡ ಭಾಷಾ ವಿಷಯದಲ್ಲಿ 125, ಇಂಗ್ಲಿಷ್,ಹಿಂದಿ, ಗಣಿತ, ಸಮಾಜವಿಜ್ಞಾನ ವಿಷಯದಲ್ಲಿ ಪೂರ್ಣ 100 ಅಂಕ ಗಳಿಸಿರುವ ಚೇತನಾ, ವಿಜ್ಞಾನ ವಿಷಯದಲ್ಲಿ 99 ಅಂಕ ಪಡೆದಿದ್ದಾಳೆ. ಪಠ್ಯಾಧರಿತವಾಗಿ ಸ್ಟಡಿ ಮಾಡುತ್ತಿದ್ದೆ. ದಿನದಲ್ಲಿ ನಾಲ್ಕು ತಾಸು ಓದುತ್ತಿದ್ದೆ. ಶಾಲೆಯಲ್ಲಿ ಸ್ಟಡಿ ಕ್ಲಾಸ್‌ನಲ್ಲೂ ಪ್ರತ್ಯೇಕವಾಗಿಯೂ ಅಭ್ಯಾಸ ಮಾಡುತ್ತಿದ್ದೆ ಎಂದು ಹೇಳುವ ಚೇತನಾ, ವಿಜ್ಞಾನ ವಿಷಯದಲ್ಲಿ ಒಂದು ಅಂಕದ ಪ್ರಶ್ನೆಗೆ ಉತ್ತರಿಸಲಾಗಲಿಲ್ಲ ಎಂಬ ಬೇಸರವಿದೆ. ಇದನ್ನು ಪರೀಕ್ಷೆ ದಿನವೇ ಶಿಕ್ಷಕರ ಬಳಿ ಹೇಳಿಕೊಂಡಿದ್ದೆ ಎಂದು ವಿವರಿಸಿದರು.
    ಶಾಲೆಯ ಶಿಕ್ಷಕರಿಂದ ಓದಿಗೆ ಉತ್ತಮ ಬೆಂಬಲ ಸಿಕ್ಕಿತು. ಶಾಲೆಯಿಂದ ಆಯೋಜಿಸುತ್ತಿದ್ದ ಸೂಪರ್ ಬ್ರೈನ್ ತರಗತಿಯಿಂದಲೂ ನನಗೆ ಸಹಕಾರ ಸಿಕ್ಕಿತು. ತಾಯಿ ಖಾಸಗಿ ಶಾಲೆಯ ಶಿಕ್ಷಕಿಯಾದ್ದರಿಂದ ಶೈಕ್ಷಣಿಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳುತ್ತಿದ್ದೆ. ಓದಿನ ಜತೆಯಲ್ಲೇ ಶಾಲೆಯ ಯಾವುದೇ ಅನೌನ್ಸ್‌ಮೆಂಟ್ ಮಾಡುತ್ತಿದ್ದೆ. ಚಿತ್ರಕಲೆಯಲ್ಲೂ ನನಗೆ ಆಸಕ್ತಿ ಇತ್ತು ಎಂದು ಹೇಳಿಕೊಂಡರು.
    ವಿದ್ಯಾರ್ಥಿಗಳು ತಮ್ಮೊಳಗೆ ಗುರಿ ಇಟ್ಟುಕೊಂಡು, ವೇಳಾಪಟ್ಟಿ ಹಾಕಿಕೊಂಡು ಶ್ರಮಪಟ್ಟು ಓದಿದರೆ ಉತ್ತಮ ಅಂಕಗಳನ್ನು ಪಡೆಯುವುದು ಕಷ್ಟವಲ್ಲ ಎಂದು ಸಲಹೆ ನೀಡುವ ಚೇತನಾ, ಭವಿಷ್ಯದಲ್ಲಿ ಯುಪಿಎಸ್‌ಸಿ ಪರೀಕ್ಷೆ ಕಟ್ಟುವ ಉಮೇದಿನಲ್ಲಿದ್ದಾರೆ. ಅದರ ಮೂಲಕ ಭಾರತೀಯ ವಿದೇಶಾಂಗ ಸೇವೆ ಮಾಡುವಾಸೆ ಇದೆ. ಅದು ಸಾಧ್ಯವಾಗದಿದ್ದಲ್ಲಿ ಭಾರತೀಯ ನಾಗರಿಕ ಸೇವೆ ಮಾಡುವ ಹಂಬಲವಿದೆ ಎಂದು ಕನಸು ಹರವಿಕೊಂಡಳು.
    ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಶಾಲೆಯ ಮುಖ್ಯ ಮುಖ್ಯಸ್ಥೆ ಜಸ್ಟಿನ್ ಡಿಸೌಜ, ಚೇತನಾಗೆ ಸಿಹಿ ತಿನ್ನಿಸಿದರು. ಅವರ ಪಾಲಕರನ್ನು ಗೌರವಿಸಿದರು. ಸಂಸ್ಥೆಯ ನಿರ್ದೇಶಕ ಡಾ.ಎಂ.ಎಸ್.ಜಯಂತ್, ಹೇಮಂತ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts