ಇಸ್ಲಾಮಾಬಾದ್: ಮುಂಬೈ ದಾಳಿಯ ಆರೋಪಿ ಮತ್ತು ಲಷ್ಕರ್ ಎ–ತಯಬಾದ ಆಪರೇಷನ್ ಕಮಾಂಡರ್ ಝಕಿ ಉರ್– ರೆಹಮಾನ್ ಲಖ್ವಿಗೆ (61) ಪಾಕಿಸ್ತಾನದ ಕೋರ್ಟ್ 15 ವರ್ಷದ ಶಿಕ್ಷೆಯನ್ನು ವಿಧಿಸಿದೆ.
ಮುಂಬೈ ದಾಳಿ ಅಷ್ಟೇ ಅಲ್ಲದೆ ಅನೇಕ ಉಗ್ರ ಚಟುವಟಿಕೆಗಳಿಗೆ ಹಣ ಒದಗಿಸುತ್ತಿದ್ದ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಈ ಶಿಕ್ಷೆ ವಿಧಿಸಲಾಗಿದೆ. ಭಯೋತ್ಪಾದನೆ ಕೃತ್ಯಗಳಿಗೆ ಆರ್ಥಿಕ ನೆರವು ನೀಡಿದ ಆರೋಪದ ಮೇಲೆ ಲಖ್ವಿಯನ್ನು ಲಾಹೋರ್ ಭಯೋತ್ಪಾದನಾ ನಿಗ್ರಹ ಇಲಾಖೆ (ಸಿಟಿಡಿ) ಪೊಲೀಸರು ಜನವರಿ 2 ರಂದು ಬಂಧಿಸಿದ್ದರು.
2015ರಿಂದ ಜಾಮೀನಿನ ಮೇಲೆ ಇದ್ದ ಲಖ್ವಿಯನ್ನು ಪಂಜಾಬ್ ಪ್ರಾಂತ್ಯದ ಉಗ್ರ ನಿಗ್ರಹ ಇಲಾಖೆ ವಶಕ್ಕೆ ಪಡೆದಿತ್ತು. 2008ರಲ್ಲಿ ಮುಂಬೈ ಮೇಲೆ ನಡೆದ ಉಗ್ರ ದಾಳಿಯ ನಂತರ ಲಖ್ವಿಯನ್ನು ಜಾಗತಿಕ ಉಗ್ರ ಎಂದು ಘೋಷಿಸಲಾಗಿತ್ತು.
ಪ್ಯಾರೀಸ್ನ ಆರ್ಥಿಕ ಭಯೋತ್ಪಾದಕರ ನಿಗ್ರಹ ದಳದ ಕಪ್ಪುಪಟ್ಟಿಯಲ್ಲಿ ಹಫೀಜ್ ಸಯೀದ್, ಮಸೂದ್ ಅಜರ್ ಜತೆಗೆ ಲಖ್ವಿ ಹೆಸರು ಇತ್ತು. ಕಳೆದ ವರ್ಷ ಸಯೀದ್ ನಾಲ್ಕು ಪ್ರಕರಣಗಳಲ್ಲಿ 36 ವರ್ಷ ಜೈಲು ಶಿಕ್ಷೆ ಅನುಭವಿಸಿದ ಬಳಿಕ ಲಖ್ವಿಗೆ 15 ವರ್ಷ ಶಿಕ್ಷೆಯಾಗುವ ಮೂಲಕ ಅಧಿಕ ಅವಧಿ ಜೈಲುಶಿಕ್ಷೆ ಸಿಕ್ಕಂತಾಗಿದೆ.
2008ರಂದು ನಡೆದಿದ್ದ ಈ ದಾಳಿಯಲ್ಲಿ 166 ಜನರು ಮೃತಪಟ್ಟಿದ್ದರು. 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಐದು ವರ್ಷಗಳ ಹಿಂದೆ ಬಂಧಿತನಾಗಿದ್ದ ಲಖ್ವಿ ಜಾಮೀನಿನ ಮೇಲೆ ಹೊರ ಬಂದಿದ್ದ. ಆದರೆ, ಎಂದಿನ ದುಷ್ಕೃತ್ಯಗಳನ್ನು ಮುಂದುವರೆಸಿದ್ದ ಎಂದು ತಿಳಿದು ಬಂದಿದೆ.
4 ಲಕ್ಷಕ್ಕೂ ಅಧಿಕ ಕೋಳಿಗಳ ಸಾವು! ಸಾಕಪ್ಪಾ ಸಾಕು ಚಿಕನ್ ಸಹವಾಸ ಎನ್ನುತ್ತಿದ್ದಾರೆ ಇಲ್ಲಿಯ ಜನ
ಕೊನೆಗೂ ಹೆಚ್ಚಾಯ್ತು ಬಿಬಿಎಂಪಿ ವಾರ್ಡ್ಗಳ ಸಂಖ್ಯೆ: ಬಿತ್ತು ರಾಜ್ಯಪಾಲರ ಮುದ್ರೆ
ಕೋಳಿಗಳಲ್ಲಿ ಕಂಡುಬಂತು ಪಾಸಿಟಿವ್: ಮಾಂಸದಂಗಡಿ ಮುಚ್ಚಲು ಆದೇಶಿಸಿದ ಮಧ್ಯಪ್ರದೇಶ ಸರ್ಕಾರ