More

    ಬೇಸಿಗೆ ವಿಶೇಷ ರೈಲುಗಳ ಸಂಚಾರ

    ಹುಬ್ಬಳ್ಳಿ : ನೈಋತ್ಯ ರೈಲ್ವೆ ವಲಯವು ಬೇಸಿಗೆ ವಿಶೇಷ ರೈಲುಗಳ ಸಂಚಾರ ಪ್ರಾರಂಭಿಸಿದೆ.

    ಎಸ್​ಎಸ್​ಎಸ್ ಹುಬ್ಬಳ್ಳಿ- ಮುಝಾಫರಪಸ್- ಎಸ್​ಎಸ್​ಎಸ್ ಹುಬ್ಬಳ್ಳಿ ಸಮ್ಮರ್ ವೀಕ್ಲಿ ಎಕ್ಸ್​ಪ್ರೆಸ್ ಏ. 30 ರಿಂದ ಮೇ 28ರವರೆಗೆ ಪ್ರತಿ ಮಂಗಳವಾರ ಸಂಜೆ 5.20ಕ್ಕೆ ಎಸ್​ಎಸ್​ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಹೊರಟು, ಗುರುವಾರ ಮಧ್ಯಾಹ್ನ 1.40ಕ್ಕೆ ಮುಜಾಫರಪಸ್ ನಿಲ್ದಾಣ ತಲುಪಲಿದೆ. ಮೇ 3 ರಿಂದ 31ರವರೆಗೆ ಪ್ರತಿ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಮುಝಾಫರಪಸ್​ನಿಂದ ಹೊರಡುವ ರೆಲು, ಭಾನುವಾರ ಬೆಳಗ್ಗೆ 7 ಗಂಟೆಗೆ ಎಸ್​ಎಸ್​ಎಸ್ ಹುಬ್ಬಳ್ಳಿ ನಿಲ್ದಾಣ ತಲುಪುವುದು.

    ಹುಬ್ಬಳ್ಳಿ-ಯೋಗ ನಗರಿ ರಿಶಿಕೇಶ – ಎಸ್​ಎಸ್​ಎಸ್ ಹುಬ್ಬಳ್ಳಿ ಸಮ್ಮರ್ ವೀಕ್ಲಿ ಎಕ್ಸ್​ಪ್ರೆಸ್ ರೈಲು

    ಏ. 29 ರಿಂದ ಮೇ 27ರವರೆಗೆ ಪ್ರತಿ ಸೋಮವಾರ ರಾತ್ರಿ 9.45ಕ್ಕೆ ಎಸ್​ಎಸ್​ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಹೊರಡುವ ರೈಲು, ಬುಧವಾರ ಸಂಜೆ 6.45ಕ್ಕೆ ಯೋಗ ನಗರಿ ರಿಶಿಕೇಶ ನಿಲ್ದಾಣ ತಲುಪಲಿದೆ. ಮೇ 2 ರಿಂದ 30ರವರೆಗೆ ಪ್ರತಿ ಗುರುವಾರ ಸಂಜೆ 5.55ಕ್ಕೆ ಯೋಗ ನಗರಿ ರಿಶಿಕೇಶ ನಿಲ್ದಾಣದಿಂದ ಹೊರಡುವ ರೈಲು, ಶನಿವಾರ ಸಂಜೆ 5.30ಕ್ಕೆ ಎಸ್​ಎಸ್​ಎಸ್ ಹುಬ್ಬಳ್ಳಿ ನಿಲ್ದಾಣ ತಲುಪಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts